ತುಮಕೂರು || ವರನಟ ಡಾ. ರಾಜ್‌ಕುಮಾರ್ ಜನ್ಮದಿನ ಆಚರಣೆ

ತುಮಕೂರು || ವರನಟ ಡಾ. ರಾಜ್ಕುಮಾರ್ ಜನ್ಮದಿನ ಆಚರಣೆ

ತುಮಕೂರು- ನಗರದ ಎಸ್.ಎಸ್.ಪುರಂ ಮುಖ್ಯ ರಸ್ತೆಯಲ್ಲಿರುವ ಅರಳೀಮರದ ಸಮೀಪ ಮಯೂರ ವೇದಿಕೆ ವತಿಯಿಂದ ಪದ್ಮಭೂಷಣ, ವರನಟ ಡಾ. ರಾಜ್‌ಕುಮಾರ್ ರವರ ಜನ್ಮದಿನವನ್ನು ಆಚರಿಸಲಾಯಿತು.

ವರನಟ ಡಾ. ರಾಜ್‌ಕುಮಾರ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಗೌರವ ಸಮರ್ಪಿಸಿ ಅವರ ಕಲಾ ಸೇವೆಯನ್ನು ಗುಣಗಾನ ಮಾಡಲಾಯಿತು.

ಮಯೂರ ವೇದಿಕೆಯ ಪ್ರಧಾನ ಕಾರ್ಯದರ್ಶಿ ಎನ್.ಆರ್. ಸ್ವಾಮಿ ಮಾತನಾಡಿ, ಪ್ರತಿ ವರ್ಷವೂ ಕರುನಾಡಿನ ವರನಟ ಡಾ. ರಾಜ್‌ಕುಮಾರ್‌ರವರ ಹುಟ್ಟುಹಬ್ಬವನ್ನು ವೇದಿಕೆ ವತಿಯಿಂದ ಆಚರಿಸುತ್ತಾ ಬಂದಿದ್ದೇವೆ ಎಂದರು.

ಡಾ. ರಾಜ್‌ಕುಮಾರ್ ರವರಿಗೂ ತುಮಕೂರಿಗೂ ಅವಿನಾಭಾವ ಸಂಬAಧ ಇದೆ. ಡಾ. ಗುಬ್ಬಿ ವೀರಣ್ಣರವರ ಕಂಪೆನಿಯಲ್ಲಿ ಡಾ. ರಾಜ್‌ಕುಮಾರ್ ಅವರು ನಾಟಕಗಳಲ್ಲಿ ಬಣ್ಣ ಹಚ್ಚಿ ಹಲವಾರು ಪಾತ್ರಗಳಲ್ಲಿ ಅಭಿನಯಿಸಿದ್ದರು. ಈ ಮೂಲಕ ತುಮಕೂರು ಜಿಲ್ಲೆಯೊಂದಿಗೆ ಉತ್ತಮ ಒಡನಾಟ ಹೊಂದಿದ್ದರು. ನಂತರ ದಿನಗಳಲ್ಲಿ ಚಲನಚಿತ್ರ ರಂಗದಲ್ಲೂ ವರನಟರಾಗಿ, ಹಿರಿಯಣ್ಣನಾಗಿ ಕರುನಾಡಿನ ಕೀರ್ತಿಯನ್ನು ವಿಶ್ವದಾದ್ಯಂತ ಎತ್ತಿ ಹಿಡಿದಿದ್ದಾರೆ. ಡಾ. ರಾಜ್‌ಕುಮಾರ್ ರವರು ಅಭಿನಯಿಸಿದ ಸಿನಿಮಾಗಳನ್ನು ಇಡೀ ಕುಟುಂಬವೇ ಕುಳಿತು ನೋಡುವಂತಿತ್ತು. ಅವರ ಸಿನಿಮಾಗಳಲ್ಲಿ ಸಮಾಜ ಪರಿವರ್ತನೆಯ ಸಂದೇಶಗಳು ಇರುತ್ತಿದ್ದವು ಎಂದು ಅವರು ಸ್ಮರಿಸಿದರು.

ನಂತರ ನೆರೆದಿದ್ದ ಡಾ. ರಾಜ್‌ಕುಮಾರ್ ರವರ ಅಭಿಮಾನಿಗಳು, ಸಾರ್ವಜನಿಕರಿಗೆ ಸಿಹಿ ಹಂಚಲಾಯಿತು.

ಈ ಸಂದರ್ಭದಲ್ಲಿ ಮಯೂರ ವೇದಿಕೆ ಅಧ್ಯಕ್ಷ ಪಿ. ಸದಾಶಿವಯ್ಯ, ಪ್ರಧಾನ ಕಾರ್ಯದರ್ಶಿ ಎನ್.ಆರ್. ಸ್ವಾಮಿ, ಹೆಬ್ಬೂರು ಶ್ರೀನಿವಾಸಮೂರ್ತಿ, ಉಗಮ ಶ್ರೀನಿವಾಸ್, ಜಗದೀಶ್, ರಮೇಶ್, ರವಿ, ರುದ್ರೇಶ್ ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *