ತುಮಕೂರು || coconut ತೋಟಗಳಲ್ಲಿ ಕಂಡುಬರುವ ರೋಗೋಸ್ ಬಿಳಿನೊಣ ಬಾಧೆಗೆ ಇಲ್ಲಿದೆ ನೋಡಿ ಪರಿಹಾರ

ತುಮಕೂರು || coconut ತೋಟಗಳಲ್ಲಿ ಕಂಡುಬರುವ ರೋಗೋಸ್ ಬಿಳಿನೊಣ ಬಾಧೆಗೆ ಇಲ್ಲಿದೆ ನೋಡಿ ಪರಿಹಾರ

ತುಮಕೂರು : ಜಿಲ್ಲೆಯ ವಿವಿಧ ಪ್ರದೇಶಗಳ ತೆಂಗಿನ ತೋಟಗಳಲ್ಲಿ ರೋಗೋಸ್ ಬಿಳಿ ನೊಣ ಬಾಧೆಯು ಹೆಚ್ಚಾಗಿ ಕಂಡು ಬರುತ್ತಿದ್ದು, ರೋಗವನ್ನು ಸಮಗ್ರವಾಗಿ ಹತೋಟಿ ಮಾಡಲು ಅನುಸರಿಸಬೇಕಾದ ಕ್ರಮಗಳ ಬಗ್ಗೆ  ತೋಟಗಾರಿಕೆ ಇಲಾಖೆ ಸಲಹೆ ನೀಡಿದೆ.

ರೋಗದಿಂದ ಹಾನಿಯ ಲಕ್ಷಣಗಳು

ಬಿಳಿನೊಣದ ಪ್ರೌಢಕೀಟವು ಇತರೆ ಸಾಮಾನ್ಯ ಬಿಳಿನೊಣ ಗಳಿಗಿಂತ ಮೂರುಪಟ್ಟು ದೊಡ್ಡದಾಗಿರುತ್ತದೆ. ಹೆಣ್ಣು ಬಿಳಿನೊಣವು ಎಲೆಯ ಕೆಳಭಾಗದಲ್ಲಿ ವೃತ್ತಾಕಾರವಾಗಿ ಮೊಟ್ಟೆಯನ್ನು ಇಡುತ್ತದೆ. ಕೀಟವು ಹಳದಿ ಮೈಬಣ್ಣ ಹೊಂದಿದ್ದು, ಬಿಳಿಬಣ್ಣದ ರೆಕ್ಕೆಗಳ ಹಿಂಬದಿಯಲ್ಲಿ ಕಪ್ಪಾದ ಮಚ್ಚೆಗಳಿರುತ್ತದೆ.

ಮರಿಗಳು ಹಾಗೂ ಪ್ರೌಢಕೀಟಗಳು ಎಲೆಗಳಿಂದ ರಸ ಹೀರುತ್ತವೆ. ಕೀಟಗಳು ಸಿಹಿಯಾದ ಅಂಟು ದ್ರಾವಣವನ್ನು ವಿಸರ್ಜನೆ ಮಾಡುವುದರಿಂದ ಬೂದುಬಣ್ಣದ ಶಿಲೀಂದ್ರ ಬೆಳೆದು ಎಲೆಗಳು ಕಪ್ಪುಬಣ್ಣಕ್ಕೆ ತಿರುಗುತ್ತವೆ.

ಹತೋಟಿ ಕ್ರಮಗಳು

ತೆಂಗಿನ ತೋಟಗಳಲ್ಲಿ ಎಕರೆಗೆ 10ರಂತೆ ಹಳದಿ ಅಂಟಿನ ಬಲೆ (Yellow sticky trap) ಗಳನ್ನು ಅಳವಡಿಸುವುದರಿಂದ ಅಥವಾ 5 ಮಿಲಿ ಬೇವಿನಎಣ್ಣೆ ಮತ್ತು 0.5 ಗ್ರಾಂ ಸಾಬೂನು ಪುಡಿಯನ್ನು ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ 15 ದಿನಗಳ ಅಂತರದಲ್ಲಿ ಮೂರು ಬಾರಿ ಸಿಂಪಡಣೆ ಮಾಡುವುದರಿಂದ ಬಿಳಿ ನೊಣದ ಬಾಧೆಯನ್ನು ಪರಿಣಾಮಕಾರಿಯಾಗಿ ಹತೋಟಿ ಮಾಡಬಹುದು.

ಪ್ರತಿ ಮರಕ್ಕೆ 3 ರಿಂದ 4 ಕೆ.ಜಿ ಬೇವಿನ ಹಿಂಡಿಯನ್ನು ನೀಡುವುದರಿಂದ ಕೀಟ ಬಾಧೆಯನ್ನು ನಿಯಂತ್ರಿಸಬಹುದಲ್ಲದೆ ಮರದ ರೋಗನಿರೋಧಕ ಶಕ್ತಿ ಹೆಚ್ಚಿಸಬಹುದು.

ಇದೀಗ ಹೊಸದಾಗಿ 5 ಗ್ರಾಂ ಜೈವಿಕ ಶಿಲೀಂದ್ರ “ಐಸಿರಿಯ ಫ್ಯೂಮೋಸೋರೋಸಿಯಾ (Isaria fumosorosea) ಪ್ರತಿ ಲೀಟರ್ ನೀರಿನೊಂದಿಗೆ ಮಿಶ್ರಣ ಮಾಡಿ   ಸಿಂಪಡಿಸಿ ಪ್ರೌಢ ಮತ್ತು ಮರಿಗಳನ್ನು ನಾಶ ಮಾಡುವುದರಿಂದ ಸಾಕಷ್ಟು ಪ್ರಮಾಣದಲ್ಲಿ ಬಿಳಿ ನೊಣಗಳನ್ನು ನಿಯಂತ್ರಣ ಮಾಡಬಹುದು.

Leave a Reply

Your email address will not be published. Required fields are marked *