ತುಮಕೂರು || DK Shivakumar CM ಆಗಬೇಕು ಎಂಬ ಆಸೆ ನನಗೂ ಇದೆ, ಆದರೆ: Ranganath ಹೇಳಿದ್ದೇನು ನೋಡಿ..?

ತುಮಕೂರು || DK Shivakumar CM ಆಗಬೇಕು ಎಂಬ ಆಸೆ ನನಗೂ ಇದೆ, ಆದರೆ: Ranganath ಹೇಳಿದ್ದೇನು ನೋಡಿ..?

ತುಮಕೂರು : ಡಿಸಿಎಂ ಡಿಕೆ ಶಿವಕುಮಾರ್ ಮುಖ್ಯಮಂತ್ರಿ ಆಗಬೇಕು ಎಂಬ ಆಸೆ ನನಗೂ ಇದೆ, ಆದರೆ ಮಾಧ್ಯಮದವರ ಮುಂದೆ ಹೇಳುವುದಕ್ಕೆ ತಯಾರಿಲ್ಲ ಎಂದು ಕುಣಿಗಲ್ ಶಾಸಕ ಡಾ. ರಂಗನಾಥ್ ಹೇಳಿದ್ದಾರೆ. ಕುಣಿಗಲ್ನಲ್ಲಿ ಮಾಧ್ಯಮ ಪ್ರತಿನಿಧಗಳ ಬಳಿ ಮಾತನಾಡಿದ ಅವರು, ಡಿಕೆ ಶಿವಕುಮಾರ್ ಸಿಎಂ ಆಗಬೇಕೆಂದು ನಿಮ್ಮ ಮುಂದೆ ಹೇಳಿದರೆ ನಾನು ನೋಟಿಸ್ ತೆಗೆದುಕೊಳ್ಳಬೇಕಾಗುತ್ತದೆ. ಪಕ್ಷದ ಶಿಸ್ತಿಗೆ ತಲೆಬಾಗಿಸಿ ಕಾರ್ಯನಿರ್ವಹಿಸುತ್ತಿದ್ದೇವೆ. ಎಲ್ಲರೂ ಅದನ್ನು ಮಾಡಬೇಕು. ನಾನು ಸುರ್ಜೇವಾಲ ಭೇಟಿಗೆ ಸಮಯ ಕೊಡಿ ಎಂದು ಕೇಳಿದ್ದೇನೆ ಎಂದರು.

ನನಗೂ ಆಸೆ ಇದೆ, ಹೇಳಿಕೊಳ್ಳಲು ಬಹಳಷ್ಟು ಸಂಕಷ್ಟಗಳು ಇವೆ. ಅವುಗಳನ್ನು ಸುರ್ಜೇವಾಲ ಮುಂದೆ ವೈಯಕ್ತಿಕವಾಗಿ ಹೇಳಬೇಕು. ಕೆಳಹಂತದಲ್ಲಿರುವ ಕಾರ್ಯಕರ್ತರ ಆಸೆಯನ್ನು ಹೇಳಬೇಕಿದೆ. ಸರ್ಕಾರ ಯಾವ ರೀತಿ ಮುಂದೆ ಹೋಗಬೇಕೆಂಬ ಮಾತು ಹೇಳುತ್ತೇನೆ. ರಣದೀಪ್ ಸುರ್ಜೇವಾಲ ಭೇಟಿಗೆ ಬರಲು ಹೇಳಿದ್ದಾರೆ ಎಂದು ಅವರು ಹೇಳಿದರು.

Leave a Reply

Your email address will not be published. Required fields are marked *