ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತುಮಕೂರೇ ಸೂಕ್ತ.

ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತುಮಕೂರೇ ಸೂಕ್ತ.

ಬೆಂಗಳೂರು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ದೇಶ ವಿದೇಶಗಳಿಗೆ ಪ್ರಯಾಣಿಸುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈ ಏರ್ಪೋರ್ಟ್ಮೇಲಿ ಒತ್ತಡ ಕಡಿಮೆ ಮಾಡಲು ಮತ್ತೊಂದು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಸ್ಥಾಪಿಸಬೇಕು.ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ವಾರ್ಷಿಕ ಒಂದು ಕೋಟಿಗೂ ಹೆಚ್ಚಿನ ಜನರು ಪ್ರಯಾಣಿಸುತ್ತಿದ್ದು. ಇದನ್ನು ಕಡಿಮೆ ಮಾಡಲು ಇನ್ನೊಂದು ವಿಮಾನ ನಿಲ್ದಾಣದ ಅಗತ್ಯವಿದೆ. ಹಾಗಾಗಿ ತುಮಕೂರು ಜಿಲ್ಲೆಯು ಅಂತರಾಷ್ಟೀಯ ವಿಮಾನ ನಿಲ್ದಾಣಕ್ಕೆ ಸೂಕ್ತವಾದ ಸ್ಥಳವೆಂದು ಗುರುತಿಸಲಾಗಿತ್ತು.

ಬೆಂಗಳೂರಿನ ಹೆಬ್ಬಾಗಿಲನಂತಿರುವ ತುಮಕೂರು ನಗರವು ವೇಗವಾಗಿ ಬೆಳೆಯುತ್ತಿರುವ ಜಿಲ್ಲೆಯಾಗಿದೆ. 10 ಲಕ್ಷಕೂ ಹೆಚ್ಚಿನ ಜನಸಂಖ್ಯೆಯನ್ನು  ಈ ಜಿಲ್ಲೆಯು ಹೊಂದಿದೆ. ಶಿಕ್ಷಣ, ಕೈಗಾರಿಕೆ, ಕೃಷಿ, ವ್ಯವಹಾರ ಹೀಗೆ ಎಲ್ಲಾ ಕ್ಷೇತ್ರಗಳಲ್ಲಿ ಅಭಿವೃದ್ಧಿ ಹೊಂದುತ್ತಿದೆ.ಮೇಲಾಗಿ ಬೆಂಗಳೂರಿನಿOದ ತುಮಕೂರಿಗೆ ನೇರವಾಗಿ ರಾಷ್ಟ್ರೀಯ ಹೆದ್ದಾರಿಯ ಸಂಪರ್ಕವಿದ್ದು, ಸಾರ್ವಜನಿಕರಿಗೆ ಹೆಚ್ಚಿನ ಅನುಕೂಲವಾಗುತ್ತದೆ.ಅಲ್ಲದೆ ಏರ್ಪೋರ್ಟ್ ಅಥಾರಿಟಿ ಆಫ್ ಇಂಡಿಯಾ ಮಾರ್ಗ ಸೂಚಿಗಳ ಪ್ರಕಾರ ಪ್ರಸ್ತುತ ವಿಮಾನ ನಿಲ್ದಾಣದಿಂದ 15೦ ಕಿಲೋಮೀಟರ್ ಅಂತರದಲ್ಲಿ ಯಾವುದೇ ಹೊಸ ವಿಮಾನ ನಿಲ್ದಾಣ ಸ್ಥಾಪನೆಯನ್ನು ಅನುಮತಿಸಲಾಗುವುದಿಲ್ಲ. ಆಗೊಮ್ಮೆ ಆ ಅಂತರದೊಳಗೆ ಎರಡನೇ ವಿಮಾನ ನಿಲ್ದಾಣ ನಿರ್ಮಿಸಿದರೆ ಎರಡು ವಿಮಾನ ನಿಲ್ದಾಣಗಳ ನಡುವೆ ಹೇರ್ ಟ್ರಾಫಿಕ್ ಸೇರಿದಂತೆ ಹಲವು ತೊಂದರೆಗಳು ಬರುತ್ತವೆ. ಈ ತೊಂದರೆಯನ್ನು ನಿಭಾಯಿಸಲು ಪ್ರಯಾಣಿಕರಿಗೆ ಹೆಚ್ಚು ಅನುಕೂಲವಾಗುವ ಸಲುವಾಗಿ ಹೊಸ ಏರ್ಪೋರ್ಟ್ ನಿರ್ಮಾಣಕ್ಕೆ ತುಮಕೂರು ಸೂಕ್ತವಾದ ಸ್ಥಳವೆಂದು ಹೇಳಬಹುದು.

ತುಮಕೂರೇ ಏಕೆ

ಮೈಸೂರು ರಾಮನಗರ ಹೀಗೆ ಬೇರೆ ಬೇರೆ ಜಿಲ್ಲೆಗಳ ಹೆಸರುಗಳು ನಿಲ್ದಾಣದ ನಿರ್ಮಾಣಕ್ಕೆ ಕೇಳಿಬಂದರೂ, ತುಮಕೂರು ಜಿಲ್ಲೆಯು ಸೂಕ್ತವೆಂದು ಹಲವರು ಅಭಿಪ್ರಾಯ ಪಟ್ಟಿದ್ದಾರೆ. ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕನಿಷ್ಠ ನಾಲ್ಕು ಸಾವಿರದ 4,5೦೦ ರಿಂದ 5೦೦೦ ಎಕರೆ ಭೂಮಿ ಬೇಕು. ಉದ್ದುದ್ದ ರನ್ ವೇಗಳು ಬೇಕು.ಬೋಯಿಂಗ್ ೭೪೭ ಏರ ಬಸ್ ಎ೩೮೦ ನಂತಹ ಭಾರವಾದ ವಿಮಾನಗಳಿಗೆ ಸೌಲಭ್ಯಗಳು ಬೇಕು.ಈಗಾಗಲೇ ನಿಲ್ದಾಣಕ್ಕಾಗಿ 8೦೦೦ ಎಕರೆ ಜಮೀನನ್ನು ಶಿರಾ, ಮಧುಗಿರಿ, ಕೊರಟಗೆರೆಗಳಲ್ಲಿ ಗುರುತಿಸಲಾಗಿದೆ ಎಂದು ಹೇಳಲಾಗುತ್ತಿದೆ. ಭೂಸ್ವಾಧೀನದ ವೆಚ್ಚವು ಕಡಿಮೆಯಾಗಲಿದೆ.ಹೆಚ್ಚುವರಿ ಮೂಲ ಸೌಕರ್ಯಗಳಾದ ಹೈ ಸ್ಪೀಡ್ ರೈಲುಗಳು, ಆಟೋಮೊಬೈಲ್ ಎಕ್ಸ್ಪ್ರೆಸ್ ವೇ, ಹೈವೇ ಹೀಗೆ ಎಲ್ಲಾ ಅನುಕೂಲಗಳು ತುಮಕೂರಿಗೆ ಇದೆ. ತುಮಕೂರಿನಲ್ಲಿ ಐದು ರಾಷ್ಟ್ರೀಯ ಹೆದ್ದಾರಿಗಳಿದ್ದು ತುಮಕೂರು ಚೆನ್ನೈ ಎಕ್ಸ್ಪ್ರೆಸ್‌ವೇ, ಹಾಗೂ ಬೆಂಗಳೂರು ಚೆನ್ನೈನಿಂದ ಪೂನ, ಮುಂಬೈ ಹೈವೇ ರಾಷ್ಟ್ರೀಯ ಹೆದ್ದಾರಿ 206 48 75 15೦ಎ  234 ಹೆದ್ದಾರಿಗಳಿದ್ದು ಎಲ್ಲಾ ಜಿಲ್ಲೆಗಳಿಗೆ ಹಾಗೂ ಹೊರ ರಾಜ್ಯಗಳಿಗೆ ಇದು ಅನುಕೂಲವಾಗಲಿದೆ.ತುಮಕೂರು ಜಿಲ್ಲೆಗಳಲ್ಲಿ ಏಷ್ಯಾದಲ್ಲಿ ಅತಿ ದೊಡ್ಡ ಕೈಗಾರಿಕಾ ಪಾರ್ಕ್ ಇದೆ. ಕೇಂದ್ರ ಸರ್ಕಾರದ ಇಸ್ರೋ, ಡಿಆರ್‌ಡಿಓ, ಹೆಚ್ಎಎಲ್ ಕಂಪನಿಗಳು ಪ್ರಾರಂಭಗೊAಡಿದ್ದು ವಿಮಾನ ನಿಲ್ದಾಣಕ್ಕೆ ಬೇಕಾದ ಭೂಮಿ ಗುಣಮಟ್ಟದ ಉತ್ಕೃಷ್ಟತೆಗೆ ಸಾಕ್ಷಿಯಾಗಿದೆ. ಪ್ರಾದೇಶಿಕ ಈ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಪ್ರಾದೇಶಿಕ ಅಸಮಾತೋಲನವನ್ನು ಸರಿದೂಗಿಸಲು ಸಹಕಾರಿಯಾಗಿದೆ. ಇಲ್ಲಿಯ ಹವಾಗುಣ ಹಾಗೂ ಭೌಗೋಳಿಕತೆ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ನಿರ್ಮಾಣಕ್ಕೆ ಪೂರಕವಾದೆ.

ಮಾತ್ರವಲ್ಲದೆ, ಉತ್ತರ ಕರ್ನಾಟಕ, ಕರಾವಳಿ ಕರ್ನಾಟಕ, ಮಧ್ಯ ಭಾಗದ ಕರ್ನಾಟಕದ ಜಿಲ್ಲೆಗಳಿಗೆ ತುಮಕೂರಿನಿಂದಲೆ ಹಾದು ಹೋಗುವುದರಿಂದ ಜನರು ಬೆಂಗಳೂರಿಗೆ ಹೋಗುವ ಪ್ರಮೇಯ ಬರುವುದಿಲ್ಲ.

2035ರ ವೇಳೆಗೆ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಸಾಮರ್ಥ್ಯ 110 ಮಿಲಿಯನ್ ಪ್ರಯಾಣಿಕರು ಮತ್ತು1.10 ಮಿಲಿಯನ್ ಟೆನ್ ಸರಕು ಸಾಗಾಣಿಯು ಗರಿಷ್ಟ ಮಟ್ಟಕ್ಕೆ ತಲುಪಲಿದೆ,ಎಂದು ಅಂದಾಜಿಸಲಾಗಿದೆ. ಹೀಗಾಗಿ ರಾಜ್ಯಕ್ಕೆ ಇನ್ನೊಂದು ನಿಲ್ದಾಣ ಬೇಕು ಎಂದು ಸರ್ಕಾರ ಮುಂಚಿತವಾಗಿಯೇ ಯೋಜನೆಯ ರೂಪಿಸುತ್ತಿದೆ. ಇದಕ್ಕೆ ನಮ್ಮತುಮಕೂರೇ ಸೂಕ್ತವೆಂಬುದೇ ಒಕ್ಕೊರಲ

ದನಿಯಾಗಿದೆ.

Leave a Reply

Your email address will not be published. Required fields are marked *