ತುಮಕೂರು: ದಕ್ಷಿಣ ಕೋರಿಯಾದಲ್ಲಿ ನಡೆದ 20ನೇ ಏಷಿಯನ್ ರೋರಲ್ ಸ್ಕೇಟಿಂಗ್ ಚಾಂಪಿಯನ್‌ಶಿಪ್ 2025 ಪಂದ್ಯದಲ್ಲಿ ನಗರದ ಜಯತೇಷ್ಣ ಟಿ.ಜಿ. ಭಾರತ ತಂಡವನ್ನ ಪ್ರತಿನಿಧಿಸಿ ಎರಡನೇ ಸ್ಥಾನ ಪಡೆಯುವ ಮೂಲಕ ಸಾಧನೆಗೈದಿದ್ದಾರೆ. ಬೆಳ್ಳಿ ಪದಕಕ್ಕೆ ಭಾಜನರಾಗಿದ್ದಾರೆ.

ತುಮಕೂರು ನಗರದ ಜಯತೇಷ್ಣ ಟಿ.ಜಿ., ನಗರದ ವೈಸಿರಿ ಕಾಲೇಜಿನಲ್ಲಿ ಬಿಸಿಎ ವ್ಯಾಸಂಗ ಮಾಡುತ್ತಿದ್ದು, ಜುಲೈ 25,26,27 ಮೂರು ದಿನಗಳ ಕಾಲ ದಕ್ಷಿಣ ಕೊರಿಯಾದಲ್ಲಿ ನಡೆದ ರೋರಲ್ ಡರ್ಬಿ ಸ್ಕೇಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಭಾರತ ತಂಡವನ್ನ ಪ್ರತಿನಿಧಿಸಿದ್ದರು.
ಜಯತೇಷ್ಣ, ಫೈನಲ್ ಹಂತಕ್ಕೆ ತಲುಪಿದ್ದು, ಆಸ್ಟೆçಲಿಯಾ ಮೊದಲನೇ ಸ್ಥಾನ ಪಡೆದರೇ, ಭಾರತ ಎರಡನೇ ಸ್ಥಾನ ಪಡೆದುಕೊಂಡಿದೆ. ಜಪಾನ್ ಮೂರನೇ ಸ್ಥಾನ ಪಡೆದಿದೆ. ತುಮಕೂರಿನ ಜಯತೇಷ್ಣ ಕರ್ನಾಟಕ ರೋರಲ್ ಸ್ಕೇಟಿಂಗ್ ಅಸೋಸಿಯೇಷನ್ ಮೂಲಕ ಸ್ಕೇಟಿಂಗ್ ಚಾಂಪಿಯನ್‌ಶಿಪ್ ನಲ್ಲಿ ಪಾಲ್ಗೊಂಡಿದ್ದರು. ಜಯತೇಷ್ಣಾಳ ಈ ಸಾಧನೆಗೆ ತಾಯಿ ತಾಹೇರಾ, ಅಜ್ಜಿ ಗುಣಸಾಗರಿ ಹರ್ಷವ್ಯಕ್ತಪಡಿಸಿದ್ದಾರೆ. ಭವಿಷ್ಯದಲ್ಲಿ ಭಾರತೀಯ ಸೇನೆಯಲ್ಲಿ ಕಾರ್ಯನಿರ್ವಹಿಸುವ ಗುರಿಯನ್ನು ಜಯತೇಷ್ಣ ಹೊಂದಿದ್ದಾರೆ.