ತುಮಕೂರು: ರಾಜ್ಯ ಸರ್ಕಾರದ ಸಹಕಾರ ಸಚಿವರು ಹಾಗೂ ಮಧುಗಿರಿ ಜಿಲ್ಲೆಯ ಶಾಸಕರಾದ ಕೆ.ಎನ್. ರಾಜಣ್ಣ ಅವರು ಜು.31ರಂದು ಮಧುಗಿರಿ ತಾಲ್ಲೂಕಿನಲ್ಲಿ ಪ್ರವಾಸ ಕೈಗೊಂಡಿದ್ದು, ವಿವಿಧ ಕಾಮಗಾರಿಗಳಗೆ ಚಾಲನೆ ನೀಡಲಿದ್ದಾರೆ.
ಮಧುಗಿರಿ ತಾಲ್ಲೂಕಿನ ತೆರಿಯೂರು ಗ್ರಾಮದಲ್ಲಿ ಅಂದಾಜು 5ಕೋಟಿ ವೆಚ್ಚದ ರಸ್ತೆ ಅಭಿವೃದ್ಧಿ (ತೆರಿಯೂರು, ಸಿಂಗನಹಳ್ಳಿ, ಕಡಗತ್ತೂರು ) ಕಾಮಗಾರಿಗೆ ಕೆ.ಎನ್. ರಾಜಣ್ಣ ಅವರು ಬೆಳಗ್ಗೆ 11 ಗಂಟೆಗೆ ಗುದ್ದಲಿ ಪೂಜೆ ನೆರವೇರಿಸಲಿದ್ದಾರೆ.
ಬಳಿಕ ಮಧ್ಯಾಹ್ನ 12ಗಂಟೆಗೆ ಕೊಡಿಗೇನಹಳ್ಳಿಯಲ್ಲಿ 3 ಕೋಟಿ ವೆಚ್ಚದ ಜೆ.ಜೆ.ಎಂ. ಕಾಮಗಾರಿಗೆ ಗುದ್ದಲಿ ಪೂಜೆ ಹಾಗೂ 1 ಗಂಟೆಗೆ ಅಡವಿನಾಗೇನಹಳ್ಳಿ ಗ್ರಾಮದಲ್ಲಿ 5 ಕೋಟಿ ವೆಚ್ಚದ ರಸ್ತೆ ಅಭಿವೃದ್ಧಿ (ಅಡವಿನಾಗೇನಹಳ್ಳಿ, ಸುದ್ದೇಕುಂಟೆ) ಕಾಮಗಾರಿ ಗುದ್ದಲಿ ಪೂಜೆ ನೆರವೇರಿಸಲಿದ್ದಾರೆ.
ಸಚಿವರು ಮಧುಗಿರಿಗೆ ಭೇಟಿ ನೀಡುತ್ತಿರುವುದ ಹಿನ್ನೆಲೆ ಅಭಿಮಾನಿಗಳು, ಪಕ್ಷದ ನಾಯಕರು, ಮುಖಂಡರು ಹಾಗೂ ಕಾರ್ಯಕರ್ತರು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ಮನವಿ ಮಾಡಲಾಗಿದೆ.