ತುಮಕೂರು || ಕುಣಿಗಲ್ ರಸ್ತೆಯಲ್ಲಿದೆ ವಾಹನ ಸವಾರರಿಗೆ ಕಂಟಕ

ನಗರದ ಕಾಲ್‌ಟ್ಯಾಕ್ಸ್ನಿಂದ ಕುಣಿಗಲ್‌ಗೆ ಸಾಗುವ ರಸ್ತೆಯಲ್ಲಿ ರೈಲ್ವೆ ಮೇಲ್ಸೇತುವೆ ಇದ್ದು ಅದರ ಕೆಳಭಾಗದ ರಸ್ತೆ ಸಂಪೂರ್ಣವಾಗಿ ಹದಗೆಟ್ಟಿದೆ. ರಸ್ತೆಯ ಸುರಕ್ಷತೆಗಾಗಿ ಅಡ್ಡಲಾಗಿ

ಚನ್ನಬಸವ. ಎಂ ಕಿಟ್ಟದಾಳ್

ತುಮಕೂರು : ನಗರದ ಕಾಲ್‌ಟ್ಯಾಕ್ಸ್ನಿಂದ ಕುಣಿಗಲ್‌ಗೆ ಸಾಗುವ ರಸ್ತೆಯಲ್ಲಿ ರೈಲ್ವೆ ಮೇಲ್ಸೇತುವೆ ಇದ್ದು ಅದರ ಕೆಳಭಾಗದ ರಸ್ತೆ ಸಂಪೂರ್ಣವಾಗಿ ಹದಗೆಟ್ಟಿದೆ. ರಸ್ತೆಯ ಸುರಕ್ಷತೆಗಾಗಿ ಅಡ್ಡಲಾಗಿ ಹಾಕಿರುವಂತಹ ಸರಳುಗಳು ತುಂಡರಿಸಿದ್ದು ವಾಹನ ಸವಾರರಿಗೆ ತೊಂದರೆ ಉಂಟಾಗುತ್ತಿದೆ. ಇದು ಇಂದಿನ ಸಮಸ್ಯೆಯಲ್ಲ ಸುಮಾರು ವರ್ಷದಿಂದ ಹೀಗೆ ಇದೆ ಅದರ ಬಗ್ಗೆ ಯಾವ ಅಧಿಕಾರಿಗಳು ತಲೆಕೆಡಿಸಿಕೊಂಡಿಲ್ಲ ಎಂದು ಸಾರ್ವಜನಿಕರು ಪ್ರಜಾಪ್ರಗತಿ ಹಾಗೂ ಪ್ರಗತಿ ಟಿವಿಗೆ ಆರೋಪಿಸಿದ್ದಾರೆ.

ಈ ರಸ್ತೆಯಲ್ಲಿ ಪ್ರಯಾಣ ಬೆಳೆಸಲು ಭಯ ಆಗುತ್ತೆ : ದಿನ ನಿತ್ಯ ಏನಿಲ್ಲ ಎಂದರು ಈ ರಸ್ತೆಯಲ್ಲಿ ಸುಮಾರು ಸಾವಿರಾರು ಗಟ್ಟಲೆ ವಾಹನಗಳು ಸಂಚರಿಸುತ್ತವೆ. ವಾಹನಗಳ ಸಾಗುವಾಗ ರಸ್ತೆಯ ಮೇಲ್ಬಾಕ್ಕೆ ಬಂದಿರುವ ಕಬ್ಬಿಣದ ಸಲಾಕೆಗಳು ವಾಹನಗಳ ಟೈರ್, ಚಕ್ರಗಳಿಗೆ ತಾಕಿ ಪಂಚರ್‌ಗಳು ಆಗುತ್ತಿವೆ. ದಿನಕ್ಕೆ ಏನಿಲ್ಲ ಎಂದರು ಸುಮಾರು 10 – 15 ಅಪಘಾತಗಳು ನಡೆಯುತ್ತವೆ. ಈ ರಸ್ತೆ ಒಂದು ರೀತಿ ಅಪಘಾತಗಳಿಗೆ ಆಹ್ವಾನಿಸುತ್ತಿದೆ. ರಾತ್ರಿಯಾಗಲಿ – ಹಗಲಾಗಲಿ ಇಲ್ಲಿ ಪ್ರಯಾಣ ಬೆಳೆಸಬೇಕು ಎಂದರೆ ಭಯವಾಗುತ್ತೆ ಎಂದ ಪ್ರಯಾಣಿಕರು.

ನಗರದ ಶಾಸಕರ ಮನೆಯ ಕೂಗಳತೆ ದೂರದಲ್ಲಿರುವ ರಸ್ತೆ : ಪ್ರತಿ ನಿತ್ಯ ಶಾಸಕರು ಓಡಾಡುವ ರಸ್ತೆಇದಾಗಿದ್ದು, ಸಮಸ್ಯೆ ಕಂಡು ಬಂದರು ಕೂಡ ಶಾಸಕರ ಗಮನಕ್ಕೆ ಬಂದಿಲ್ಲವೇ ಎಂಬ ಅನುಮಾನ ಕಾಡುತ್ತಿದೆ. ಅಪಘಾತ, ವಾಹನ ಸವಾರರ ಪರದಾಟದ ಬಗ್ಗೆ ಶಾಸಕರಿಗೆ ಕಾಲಜಿ ಇಲ್ಲವಾ ಎಂದು ಅಲ್ಲಿನ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಧಿಕಾರಿಗಳ ನಿರ್ಲಕ್ಷö್ಯದಿಂದ ಬಳಲುತ್ತಿರುವ ರಸ್ತೆ : ಮುನಿಸಿಪಾಲ್ ಹಾಗೂ ಪಿಡಬ್ಲೂö್ಯಡಿ ಅಧಿಕಾರಿಗಳ ಗಮನಕ್ಕೆ ತಂದರು ಏನು ಕ್ರಮಕೈಗೊಂಡಿಲ್ಲ. ಮುನಿಸಿಪಾಲ್‌ನವರು ಇದು ನಮ್ಮ ವ್ಯಾಪ್ತಿಗೆ ಬರಲ್ಲ ಎಂದರೆ, ಪಿಡಬ್ಲೂಡಿ ನವರು ಕೂಡ ಇದು ನಮಗೆ ಸೇರಿದಲ್ಲ ಎಂದು ನಿರ್ಲಕ್ಷö್ಯತೋರಿದ್ದಾರೆ ಎಂದು ಅಲ್ಲಿನ ನಿವಾಸಿಗಳು ತಮ್ಮ ಅಳನ್ನು ತೋಡಿಕೊಂಡಿದ್ದಾರೆ.

ವಾಹನ ಸವಾರರ ಕುತ್ತಿಗೆಗೆ ಯಮಪಾಶವಾದ ರಸ್ತೆ : ಸಾವಿರಾರು ವಾಹನಗಳು ಈ ರಸ್ತೆಯಲ್ಲಿ ಪ್ರಾಯಾಣ ಮಾಡುತ್ತವೆ. ಅದರಲ್ಲಿ ಕನಿಷ್ಠ ನೂರು ವಾಹನಗಳಿಗೆ ಅಪಘಾತವಾಗೋದು ಕಟ್ಟಿಟ್ಟ ಬುತ್ತಿ. ಈ ಗುಂಡಿ ಹತ್ತಿ ಕೆಳಗಿಳಿದರೆ ಪಂಚರ್‌ಗಳಗುತ್ತವೆ, ಇಳಿಜಾರು ಇರುವುದರಿಂದ ಸ್ಪೀಡ್‌ಆಗಿ ಬಂದ ವಾಹನಗಳು ಕೆಳಗೆ ಬೀಳುತ್ತವೆ. ಅದೃಷ್ಟವಷಾತ್ ಯಾವ ವಾಹನಗಳು ಹಿಂದೆ ಬಂದು ಡಿಕ್ಕಿಹೊಡೆಯದಿದ್ದರೆ ಪಾರವಾಗಿಲ್ಲ ಆಕಸ್ಮಿಕ ಡಿಕ್ಕಿ ಹೊಡೆದರೆ ಸವಾರರು ಯಮಲೋಕ ಸೇರೋದು ಗ್ಯಾರಂಟಿ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ರಸ್ತೆ ಮಾತ್ರವಲ್ಲ, ಅಲ್ಲಿನ ಸುತ್ತಾಮುತ್ತಲಿನ ವಾತವರಣವೂ ಹದಗೆಟ್ಟಿದೆ : ಫುಟ್‌ಬಾತ್ ರಸ್ತೆಯಂತು ಇದಿಯೋ ಇಲ್ಲವೋ ಗೊತ್ತಿಲ್ಲ. ಅದರಮೇಲೆ ಹಾಕಿರುವ ಸ್ಲಾಬ್‌ಗಳು ಮುರಿದು ಹೋಗಿವೆ. ಇನ್ನೂ ರೈಲ್ವೆಯ ಸೇತುವೆ ಇದ್ದು ಅದಕ್ಕೆ ಸುರಕ್ಷತೆಗಾಗಿ ಹಾಕಿರುವ ಕಾಂಪೌಡ್ ಅಲ್ಲಲ್ಲಿ ಮುರಿದು ಬಿದ್ದಿದೆ. ಕೆಳೆಗೆ ವಾಹನ ಸವಾರರು ಚಲಿಸುವಾಗ ಅವರ ಮೇಲೆ ಬಿದ್ದರೆ ಆಶ್ಚರ್ಯವೇನಿಲ್ಲ, ಏಕೆಂದರೆ ಅದು ಸಮಸ್ಯೆಯಂತ ತಿಳಿದರು ಅದರ ಬಗ್ಗೆ ಯಾರೂ ತಲೆಕೆಡಿಸಿಕೊಳ್ಳುವುದಿಲ್ಲ. ಶಾಸಕರು, ಅಧಿಕಾರಿಗಳು – ಜನಪ್ರತಿನಿಧಿಗಳು ನಿತ್ಯ ಚಲಿಸುವ ರಸ್ತೆ ಇದಾಗಿದೆ. ಈಗಲಾದರೂ ಅಧಿಕಾರಿಗಳು ಎಚ್ಚೆತ್ತುಕೊಂಡು ಸಮಸ್ಯೆಗೆ ಮುಕ್ತಿ ಕೊಡಬೇಕು ಎಂದು ಜನರು ಮನವಿ ಮಾಡಿದರು.

ರೈಲ್ವೆ ಟ್ರಾಕ್ ಅನ್ನು ದಾಟುವುದಕ್ಕೆ ಇರು ಕೆಲವು ರಸ್ತೆಗಳಲ್ಲಿ ಇದು ಒಂದಾಗಿದ್ದು, ಪ್ರಮುಖ ರಸ್ತೆಯಾಗಿ ಗುರುತಿಸಿ ಕೊಂಡಿದೆ. 80 ಫೀಟ್ ರಸ್ತೆ, ಶೆಟ್ಟಿಹಳ್ಳಿ ಅಂಡರ್‌ಪಾಸ್, ಉಪ್ಪರ ಹಳ್ಳಿ ಅಂಡರ್ ಪಾಸ್, ದಾನಪ್ಯಾಲೇಸ್ ರಸ್ತೆಯಲ್ಲಿನ ಅಂಡರ್ ಪಾಸ್ ಬಿಟ್ಟರೆ ಪ್ರಮುಖ ವಾಗಿರುವಂತಹ ರಸ್ತೆ ಎಂದರೆ ಅದುವೆ ಕುಣಿಗಲ್ ರಸ್ತೆ. ಇಲ್ಲಿನ ಸಮಸ್ಯೆಯನ್ನು ಸಂಬAಧ ಪಟ್ಟ ಇಲಾಖೆ ಗಮನಹರಿಸಿ ಬಗೆಹರಿಸಬೇಕೆಂದು ಸಾರ್ವಜನಿಕರು ಪ್ರಜಾಪ್ರಗತಿ ಹಾಗೂ ಪ್ರಗತಿ ಟಿವಿ ಮುಂದೆ ಮನವಿ ಮಾಡಿಕೊಂಡರು.

ನಿತ್ಯವೂ ಇದೇ ಸಮಸ್ಯೆ, ಅಪಘಾತಗಳಂತು ಲೆಕ್ಕಕ್ಕೆ ಇಲ್ಲಾ, ಬಿಳೂದು ಎದ್ದೇಳೊದು ಇಲ್ಲಿ ಸರ್ವೆಸಾಮಾನ್ಯ, ಅಧಿಕಾರಿಗಳ ಗಮನಕ್ಕೂ ತಂದಿದ್ದೇವೆ. ಮನವಿ ಕೊಟ್ಟಿದ್ದೇವೆ. ಯಾರೂ ಕೂಡ ಗಮನ ಹರಿಸಿಲ್ಲ, ಜನಪ್ರತಿನಿಧಿಗಳಿಗೆ ಈ ಸಮಸ್ಯೆ ಬೇಕಿಲ್ಲ.

ಜಯರಾಮು, ಬನಶಂಕರಿ ನಿವಾಸಿ .

Leave a Reply

Your email address will not be published. Required fields are marked *