ತುಮಕೂರು || ಕುಣಿಕೇನಹಳ್ಳಿ ಕೆಂಪಮ್ಮದೇವಿ ಜಾತ್ರಾ ಮಹೋತ್ಸವ ರದ್ದು

ತುಮಕೂರು || ಕುಣಿಕೇನಹಳ್ಳಿ ಕೆಂಪಮ್ಮದೇವಿ ಜಾತ್ರಾ ಮಹೋತ್ಸವ ರದ್ದು

ತುಮಕೂರು:- ತಾಲೂಕಿನ ಕುಣಿಕೆನಹಳ್ಳಿಯ ಶ್ರೀ ಕೆಂಪಮ್ಮದೇವಿಯ ಮತ್ತು ಶ್ರೀ ರಂಗನಾಥಸ್ವಾಮಿ ಜಾತ್ರಾ ಮಹೋತ್ಸವ ರದ್ದು ಮಾಡಿ ತಾಲೂಕು ಆಡಳಿತ ಆದೇಶಿಸಿದೆ.

ಶ್ರೀ ಕೆಂಪಮ್ಮದೇವಿ ದೇವಾಲಯದ ಜಾತ್ರಾ ಮಹೋತ್ಸವ ಏ 5 ರಿಂದ ಪ್ರಾರಂಭವಾಗಬೇಕಿತ್ತು. ಈ ಜಾತ್ರೆ ಏ 5 ರಿಂದ ಏ 14 ರವರೆಗೆ ವಿವಿಧಜಾತ್ರಾ ಮಹೋತ್ಸವದ ಅಂಗವಾಗಿ ವಿವಿಧಧಾರ್ಮಿಕ ಕಾರ್ಯಕ್ರಮಗಳು ನಡೆಯಬೇಕಿತ್ತು.ಜಾತ್ರೆ ಸಂಬAಧ ಪರಿಶಿಷ್ಠ ಜಾತಿಯಜನರು ವಾಸಿಸುತ್ತಿರುವ ಕಾಲೋನಿಗೆ ಮಾಹಿತಿ ನೀಡದೇ ನಮ್ಮನ್ನುಜಾತ್ರಾಕಾರ್ಯಕ್ರಮದಿಂದ ಬಹಿಷ್ಕಾರ ಹಾಕಲಾಗಿದೆಎಂದುಅದೇಗ್ರಾಮದದಲಿತ ಸಮುದಾಯಕ್ಕೆ ಸೇರಿದವರು ಪೋಲಿಸ್ ಮತ್ತುಕಂದಾಯ ಇಲಾಖಾ ಅಧಿಕಾರಿಗಳಿಗೆ ದೂರು ಸಲ್ಲಿಸಿದ್ದರು.

 ಶಾಂತಿ ಸಭೆ:- ಈ ಸಂಬAಧ ತಾಲೂಕು ದAಡಾಧಿಕಾರಿ ಅಹಮದ್ ತಾಲೂಕು ಕಚೇರಿಯಲ್ಲಿ ಶಾಂತಿ ಸಭೆಕರೆದಿದ್ದರು. ಆ ವೇಳೆ ದಲಿತ ಸಮುದಾಯದ  ಬೆಂಬಲಿಗರು ಮತ್ತು ಗ್ರಾಮದ ಗುಡಿಗೌಡರು ಸೇರಿದಂತೆ ಗ್ರಾಮದ ಹಲವಾರು ಮಂದಿ ಶಾಂತಿ ಸಭೆಗೆ ಆಗಮಿಸಿದ್ದರು.

ಪರಿಶಿಷ್ಟ ಜಾತಿಯವರನ್ನು ಜಾತ್ರೆಗೆ ಕರೆಯದೇ ಜಾತ್ರೆ ನಡೆಸುತ್ತಿದ್ದಾರೆ. ಅಲ್ಲದೇ ಗ್ರಾಮದಲ್ಲಿ ನಮಗೆ ಭಯದ ವಾತಾವರಣ ಇದೆ. ನಮಗೆ ರಕ್ಷಣೆ ನೀಡಿ ಎಂದು ಆಗ್ರಹಿಸಿದರು. ಅಲ್ಲದೇ ಜಾತ್ರಾ ಮಹೋತ್ಸವಕ್ಕೆ ಸಂಬAಧಿಸಿದAತೆ ರಚಿಸುವ ಸಮಿತಿಯಲ್ಲಿ ಪರಿಶಿಷ್ಠರಿಗೂ ಅವಕಾಶ ಕಲ್ಪಿಸಬೇಕೆಂದು ಪಟ್ಟು ಹಿಡಿದರು.

ಹೀಗಾಗಿ ಜಾತ್ರಾ ಮಹೋತ್ಸವದ ಕಾರ್ಯಕ್ರಮಗಳನ್ನು ರದ್ದು ಮಾಡಿರುವ ಹಿನ್ನೆಲೆಯಲ್ಲಿ ನಿನ್ನೆಯಿಂದ ನಡೆಯಬೇಕಿದ್ದ ಹಳ್ಳಿ ಹಳ್ಳಿಗಳಿಗೆ ತೆರಳಿ ಮಡಿಲಕ್ಕಿ ಸಂಗ್ರಹಸುತ್ತಿದ್ದ ಸೇವೆ ಸ್ಥಗಿತಗೊಂಡಿದೆ. ಹಲವಾರು ಭಕ್ತರು ದೇವಾಲಯದ ಆವರಣದಲ್ಲಿ ತಮ್ಮ ಸೇವೆ ನಡೆಸುತ್ತಿದ್ದಾರೆ. ಜಾತ್ರಾ ಸಲುವಾಗಿ ಗ್ರಾಮದ ಯಾವುದೇ ದೇವರ ಉತ್ಸವಾದಿಗಳನ್ನು ನಡೆಸುವುದಿಲ್ಲ ಎಂದು ಗುಡಿಗೌಡರು ತಿಳಿಸಿದ್ದಾರೆ.

ಈ ಜಾತ್ರಾ ಮಹೋತ್ಸವಕ್ಕೆಗ್ರಾಮದ ಹಾಗೂ ಅಕ್ಕ ಪಕ್ಕದ ಹತ್ತಾರು ಗ್ರಾಮಗಳ ಜನರು ಮತ್ತುಅವರ ಬಂಧುಗಳು ಆಗಮಿಸುತ್ತಿದ್ದರು.ಆದರೆಇದೇ ಪ್ರಥಮ ಬಾರಿಗೆದೇವರಜಾತ್ರಾ ಮಹೋತ್ಸವವನ್ನುರದ್ದು ಮಾಡಬೇಕಾದ  ಪರಿಸ್ಥಿತಿ ಬಂದೊದಗಿದೆಎAದುಗ್ರಾಮದ ಮುಖಂಡ ಹಾಗೂ ಗ್ರಾಮ ಪಂಚಾಯಿತಿ ಸದಸ್ಯ ಸೇರಿದಂತೆ ಹಲವವರು  ಮಂದಿ ಬೇಸರ ವ್ಯಕ್ತಪಡಿಸಿದರು.

Leave a Reply

Your email address will not be published. Required fields are marked *