ತುಮಕೂರು || ಪಿಎಸ್ಐ ವರ್ಗಾವಣೆಗೆ ಲಾಬಿ : ಡಿಎಸ್ಎಸ್ ಖಂಡನೆ 

ತುಮಕೂರು || ಪಿಎಸ್ಐ ವರ್ಗಾವಣೆಗೆ ಲಾಬಿ : ಡಿಎಸ್ಎಸ್ ಖಂಡನೆ

ತುರುವೇಕೆರೆ : ಅಕ್ರಮ ದಂಧೆಕೋರರು ದಂಡಿನಶಿವರ ಪೊಲೀಸ್ ಠಾಣೆಯ ದಕ್ಷ ಪಿಎಸ್ಐ ವರ್ಗಾವಣೆಗೆ ಲಾಬಿ ಮಾಡುತಿದ್ದಾರೆ ಎಂದು  ದಲಿತ ಸಂಘರ್ಷ ಸಮಿತಿಯ ತಾಲ್ಲೂಕು ಸಂಚಾಲಕ ದಂಡಿನಶಿವರ ಕುಮಾರ್  ದಂಡಿನಶಿವರದಲ್ಲಿ ಪತ್ರಿಕೆಯೊಂದಿಗೆ ಮಾತನಾಡಿ ನೇರ ಆರೋಪ ಮಾಡಿದರು.

ದಂಡಿನಶಿವರ ಪೊಲೀಸ್ ಠಾಣೆಯ ದಕ್ಷ  ಪಿಎಸ್ಐ ಚಿತ್ತರಂಜನ್ ರವರನ್ನು ಬೇರೆಡೆಗೆ ವರ್ಗ ಮಾಡಿಸಲು  ಅಕ್ರಮ ದಂಧೆಕೋರರು ಲಾಬಿ ನಡೆಸುತ್ತಿರುವ ಬಗ್ಗೆ ನಮಗೆ ಮಾಹಿತಿ ಬಂದಿದೆ. ಇದನ್ನು ದಲಿತ ಸಂಘರ್ಷ ಸಮಿತಿಯು ಖಂಡಿಸುತ್ತದೆ. ಹೋಬಳಿ ಕೇಂದ್ರವಾದ ದಂಡಿನಶಿವರದಲ್ಲಿ ಹದಗೆಟ್ಟಿದ್ದ ಕಾನೂನು ಸುವ್ಯವಸ್ಥೆಯನ್ನು ಪಿಎಸ್ಐ ಚುರುಕುಗೊಳಿಸಿದ್ದಾರೆ. ಎಲ್ಲಾ ರೀತಿಯ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಿದ್ದಾರೆ. ಜಾತ್ರಾ ಮಹೋತ್ಸವದಲ್ಲಿ ನಡೆದಿದ್ದ  ಕಳ್ಳತನದ ಆರೋಪಿಯನ್ನು ಕೆಲವೇ ಗಂಟೆಗಳಲ್ಲಿ ಪತ್ತೆ ಮಾಡಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ನಾಗರಿಕರು ನೆಮ್ಮದಿಯಿಂದ ಓಡಾಡುವಂತಹ ಪರಿಸ್ಥಿತಿ ನಿರ್ಮಾಣ ಮಾಡಿದ್ದಾರೆ.

ಸಂಜೆಯಾದರೆ ಸರ್ಕಾರಿ ಶಾಲೆಯ ಅಂಗಳದಲ್ಲಿ ಕುಡುಕರ ಹಾವಳಿ ಹೆಚ್ಚಾಗಿ ವಿದ್ಯಾರ್ಥಿಗಳು ಓಡಾಡುವ ಜಾಗದಲ್ಲಿ ಬಾಟಲಿ ಹಾಗೂ ಕಸಕÀಡ್ಡಿಗಳನ್ನು ತುಂಬಿ ಅಕ್ರಮ ಚಟುವಟಿಕೆಗಳ ತಾಣವಾಗಿ ಮಾಡಿಕೊಂಡಿದ್ದರು. ಅದಕ್ಕೂ ಸಹ ಇವರು ಕಡಿವಾಣ ಹಾಕಿ ಕುಡುಕರ ಹಾವಳಿ ನಿಯಂತ್ರಿಸಿದ್ದಾರೆ. ರೈತರ ಪಂಪ್ ಸೆಟ್, ಮೋಟಾರ್ ಬೈಕ್,  ಕೇಬಲ್ಗಳ ಕಳ್ಳತನವನ್ನು ತಪ್ಪಿಸಿ ರೈತರು ನೆಮ್ಮದಿಯಿಂದ ಇರುವಂತೆ ಮಾಡಿದ್ದಾರೆ. ಇಂತಹ ದಕ್ಷ ಪ್ರಾಮಾಣಿಕ ಪೊಲೀಸ್ ಅಧಿಕಾರಿಯಾದ ಪಿಎಸ್ಐ ಚಿತ್ತರಂಜನ್ರವರನ್ನು ವರ್ಗಾವಣೆ ಮಾಡಿಸಲು ಅಕ್ರಮಗಳಲ್ಲಿ ಭಾಗಿಯಾಗಿರುವರು ಮದ್ಯ ಹಾಗೂ ಗಾಂಜಾ ಮಾರಾಟಗಾರರು ಸಂಚು ರೂಪಿಸಿದ್ದಾರೆ.

 ಶಾಸಕರು ಪಿಎಸ್ಐರವರ ವರ್ಗಾವಣೆಗೆ ಕೈ ಹಾಕಬಾರದು. ಈ ಅಧಿಕಾರಿಯನ್ನು ಉಳಿಸಿಕೊಂಡು ನಮ್ಮ ದಂಡಿನಶಿವರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಅಪರಾಧÀಗಳನ್ನು ತಡೆಯುವಲ್ಲಿ ಶಾಸಕರು ಸಹಕರಿಸಬೇಕು. ಕಾಣದ ಕೈಗಳು ಹಾಗೇನಾದರೂ ವರ್ಗಾವಣೆ ಲಾಬಿ ಮಾಡಿದರೆ ದಲಿತ ಸಂಘರ್ಷ ಸಮಿತಿಯ ಕಾರ್ಯಕರ್ತರು ಹಾಗೂ ಹೋರಾಟಗಾರರಿಂದ ಮತ್ತು ರೈತರಿಂದ ಉಗ್ರ ಪ್ರತಿಭಟನೆ  ಹಮ್ಮಿಕೊಳ್ಳಲಾಗುತ್ತದೆ ಎಂಬ ಎಚ್ಚರಿಕೆಯನ್ನು ಲಾಬಿಕೋರರಿಗೆ ನೀಡಿದರು.

ಈ ಸಂದರ್ಭ ದಲಿತ ಮುಖಂಡರಾದ ಸಾಮಿಲ್ ಶಂಕರ್, ಚಂದ್ರಶೇಖರ್, ಸಂಘಟನಾ ಸಂಚಾಲಕ ಲಕ್ಷಿ÷್ಮÃಶ್ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *