ತುಮಕೂರು!! ಕಲ್ಪತರು ನಾಡಲ್ಲಿ  ಜಲಪಾತದ ಕೊರಗು ನೀಗಿಸಿದ ಮಧು ಪಾಲ್ಸ್

ತುಮಕೂರು!! ಕಲ್ಪತರು ನಾಡಲ್ಲಿ ಜಲಪಾತದ ಕೊರಗು ನೀಗಿಸಿದ ಮಧು ಪಾಲ್ಸ್

ತುಮಕೂರು: ತುಮಕೂರು ಜಿಲ್ಲೆಯಲ್ಲಿ ಯಾವುದೇ ಜಲಪಾತ ಇಲ್ಲ ಅನ್ನುವ ಕೊರಗಿತ್ತು. ಆದರೆ ಇತ್ತೀಚಿನ ಮಳೆಗಾಲದ ವರ್ಷಗಳಲ್ಲಿ ಜಲಪಾತವೊಂದು ಸೃಷ್ಟಿಯಾಗಿ ಆ ಕೊರಗು ಮರೆಯಾಗಿದೆ. ಹೌದು ಮಧುಗಿರಿ ಪಕ್ಕದಲ್ಲೇ ಮಧು ಜಲಪಾತ ಅಥವಾ ಮಧು ಫಾಲ್ಸ್ ಪ್ರಾಕೃತಿಕವಾಗಿ ಸೃಷ್ಟಿಯಾಗಿದೆ. ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತಿದೆ.

ಮಧುಗಿರಿ ತಾಲೂಕಿನಲ್ಲಿ ಇತ್ತೀಚೆಗೆ ಸುರಿದ ಸತತ ವರ್ಷದಾರೆಯಿಂದಾಗಿ ಬಹುತೇಕ ಕೆರೆಗಳು ತುಂಬಿ ಕೋಡಿ ಹರಿಯುತ್ತಿದ್ದು, ಪಟ್ಟಣದ ಸಮೀಪದಲ್ಲೇ ಇದ್ದರೂ ಇಷ್ಟು ದಿನ ಕಣ್ಣಿಗೆ ಕಾಣದಂತಿದ್ದ ಪ್ರಕೃತಿಯ ಸೊಬಗಿನಿಂದ ತುಂಬಿಕೊಂಡಿರುವ ಜಲಧಾರೆಯೊಂದು ಪತ್ತೆಯಾಗಿದ್ದು, ಪಟ್ಟಣದ ಜನತೆಗೆ ಪಿಕ್ ನಿಕ್ ತಾಣವಾಗಿ ಮಾರ್ಪಟ್ಟಿದೆ.

ಇಷ್ಟು ದಿನ ಜಲಧಾರೆಯ ತಾಣಗಳನ್ನು ಅರಸಿ ಇತರೆ ಭಾಗಗಳಿಗೆ ಹೋಗುತ್ತಿದ್ದ ಜನತೆ ಇಲ್ಲಿನ ಪ್ರಕೃತಿಯ ಸೊಬಗಿನಿಂದ ತುಂಬಿಕೊಂಡಿರುವ ಜಮಧಾರೆಯನ್ನು ಕಂಡು ಮೂಕ ವಿಸ್ಮಿತರಾಗಿದ್ದಾರೆ. ಪ್ರತೀ ದಿನ ಸುತ್ತಮುತ್ತಲ ಜನತೆಯನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿದ್ದು, ಪಿಕ್ ನಿಕ್ ಹಾಟ್ ಸ್ಪಾಟ್ ಆಗಿ ಪರಿವರ್ತನೆಯಾಗಿದ್ದು, ಕುಟುಂಬದೊಂದಿಗೆ ತೆರಳುವ ಜನತೆ ಜಲಧಾರೆಯಲ್ಲಿ ಮಿಂದು ಹರ್ಷ ವ್ಯಕ್ತಪಡಿಸುತ್ತಿದ್ದಾರೆ. ಸೆಲ್ಫಿಗಳನ್ನು ತೆಗೆದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುತ್ತಿದ್ದಾರೆ. ಇದು ಮಕ್ಕಳ ನೆಚ್ಚಿನ ತಾಣವಾಗಿದ್ದು,

ಮಧುಗಿರಿ-ತುಮಕೂರು ರಸ್ತೆಯಲ್ಲಿರುವ ಕಾರ್ಡಿಯಲ್ ಇಂಟರ್ ನ್ಯಾಶನಲ್ ಶಾಲೆಯ ರಸ್ತೆಯಲ್ಲಿ ಹೋದರೆ ಹರಿಹರೇಶ್ವರ ದೇವಸ್ಥಾನ, ಕಮ್ಮನಕೋಟೆ ನಂತರ ಕೆ.ಸಿ.ರೊಪ್ಪಕ್ಕೆ ಹೋಗುವ ರಸ್ತೆಯಲ್ಲಿ 300 ಮೀಟರ್ ಗುಡ್ಡದ ರಸ್ತೆ ಹತ್ತಿ ಇಳಿದರೆ ಸುಂದರ ಜಲಧಾರೆ ಕಣ್ಣಿಗೆ ಬೀಳಲಿದೆ. ಇಲ್ಲಿನ ಪ್ರದೇಶ ಪ್ರಕೃತಿಯ ಸೊಬಗಿನಿಂದ ತುಂಬಿಕೊಂಡಿದ್ದು, ಬಹಳಷ್ಟು ಸುಂದರವಾಗಿದೆ.

ಬೆಟ್ಟ-ಗುಡ್ಡಗಳ ಸಾಲಿನಿಂದ ಇಳಿದು ಬರುವ ಜಲಧಾರೆಯನ್ನು ನೋಡುವುದೇ ಕಣ್ಣಿಗೆ ಹಬ್ಬ. ಇಷ್ಟು ದಿನ ಅಗೋಚರವಾಗಿದ್ದ ಈ ಜನಧಾರೆಯನ್ನು ಕುರಿಗಾಹಿಗಳು ನೋಡಿ ವೀಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಟ್ಟ ನಂತರ ಎಲ್ಲರಿಗೂ ವಿಷಯ ವೈರಲ್ ಆಗಿದ್ದು ಪ್ರಕೃತಿಯ ಸೊಬಗನ್ನು ಚಿತ್ರಿಸಿ ಜಾಲತಾಣದಲ್ಲಿ ಹರಿ ಬಿಟ್ಟ ನಂತರ ಜನಸಾಗರವೇ ಹರಿದು ಬರುತ್ತಿದೆ.

Leave a Reply

Your email address will not be published. Required fields are marked *