ತುಮಕೂರು: ಕಂದಾಯ ಸಚಿವ ಕೃಷ್ಣ ಭೈರೇಗೌಡ ಅವರು ಇಂದು ತುಮಕೂರಿನಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಸಿದ್ದು, ತಹಶೀಲ್ದಾರ್ ಗಳಿಗೆ ಕ್ಲಾಸ್ ತೆಗೆದುಕೊಂಡರು. ಬಾಕಿ ಉಳಿದ ಕೆಲಸಗಳ ಪೂರ್ಣಗೊಳಿಸೋದು ಯಾವಾಗ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.

ಆದ್ರೆ, ಕೆಲ ಅಧಿಕಾರಿಗಳು ಸಭೆಯಲ್ಲೇ ಮೊಬೈಲ್ ನಲ್ಲಿ ಬ್ಯುಸಿಯಾಗಿರುವುದು ಕಂಡುಬಂದಿದೆ. ಸಚಿವರ ಮಾತಿಗೆ ಕಿವಿಗೊಡದೆ ಅಧಿಕಾರಿಗಳು ಮೊಬೈಲ್ ನಲ್ಲಿ ಫೇಸ್ಬುಕ್, ರೀಲ್ಸ್ ನೋಡುತ್ತಾ ಕುಳಿತ್ತಿದ್ದಾರೆ. ಹಾಗಾದ್ರೆ, ಸಚಿವರ ಸಭೆ ಕಿಮ್ಮತ್ತೇ ಇಲ್ವಾ ಎನ್ನುವ ಪ್ರಶ್ನೆಗಳು ಉದ್ಭವಿಸಿವೆ. ಈ ರೀತಿಯ ಅಧಿಕಾರಿಗಳ ವರ್ತನೆಗೆ ಬ್ರೇಕ್ ಬೀಳಬೇಕಿದೆ.
