ತುಮಕೂರು || ಸ್ಲಂ ಜನರ ಸಾಂಸ್ಕೃತಿಕ ಕಲಾ ಜಾಥಾಕ್ಕೆ ಶಾಸಕ Jyothiganesh ಚಾಲನೆ

ತುಮಕೂರು || ಸ್ಲಂ ಜನರ ಸಾಂಸ್ಕೃತಿಕ ಕಲಾ ಜಾಥಾಕ್ಕೆ ಶಾಸಕ Jyothiganesh ಚಾಲನೆ

ತುಮಕೂರು: ರಾಜ್ಯ ಸರ್ಕಾರ ಸ್ಲಂ ಜನರ ಬೇಡಿಕೆಗಳನ್ನು ಈಡೇರಿಸಲಿ ಎಂದು ನಗರದ ಶಾಸಕ ಜ್ಯೋತಿಗಣೇಶ್ ತಿಳಿಸಿದರು.ಸ್ಲಂ ಜನಾಂದೋಲನ ಕರ್ನಾಟಕ ಮತ್ತು ತುಮಕೂರು ಸ್ಲಂ ಸಮಿತಿಯಿಂದ ಮಹಾನಗರ ಪಾಲಿಕೆ ಆವರಣದಲ್ಲಿರುವ ಡಾ.ಬಿ.ಆರ್ ಅಂಬೇಡ್ಕರ್ ಅವರ ಪುತ್ತಳಿಗೆ ಪುಷ್ಪ ನಮನ ಸಲ್ಲಿಸಿ ಸ್ಲಂ ಜನರ ಸಾಂಸ್ಕöÈತಿಕ ಕಲಾ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಸ್ಲಂ ಜನರಿಗೆ ನೀಡಿರುವ ಚುನಾವಣೆ ಪ್ರಣಾಳಿಕೆಯ ಭರವಸೆಗಳನ್ನು ಹಾಗೂ ಭೂಮಿ, ವಸತಿಗೆ ಸಂಬAಧಿಸಿದ ಬೇಡಿಕೆಗಳನ್ನು ರಾಜ್ಯ ಸರ್ಕಾರ ಈಡೇರಿಸಬೇಕು. ನಗರದಲ್ಲಿರುವ ಸ್ಲಂ ಜನರು ಕನಿಷ್ಠ ಸೌಲಭ್ಯದಲ್ಲಿ ಬದುಕುತ್ತಿದ್ದು ಸಂವಿಧಾನದ ಸಾಮಾಜಿಕ ನ್ಯಾಯವನ್ನು ಈ ಜನರಿಗೆ ತಲುಪಿಸಲು ಈಗಿನ ಸರ್ಕಾರ ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ಹೇಳಿದರು.

ಸ್ಲಂ ಹಬ್ಬ ಮತ್ತು ಸಮಾವೇಶದ ಆಶಯ ನುಡಿಯನ್ನಾಡಿದ ಚಿಂತಕರಾದ ಡಾ.ದು. ಸರಸ್ವತಿ, ಈ ಶ್ರಮ ಸಂಸ್ಕೃತಿಯ ಹಬ್ಬದಲ್ಲಿ ಭಾಗಿಯಾದದ್ದು ನಿಜವಾದ ಶ್ರಮದ ಆಚರಣೆಯಲ್ಲಿ ನನಗೆ ಸಿಕ್ಕ ಗೌರವ. ಗೊರವನ ಕುಣಿತ ದುರ್ವೇಶ್ಗಳ ಹಾಡುಗಳು ಮತ್ತು ಹಕ್ಕಿಪಿಕ್ಕಗಳ ನೃತ್ಯ, ತಮಟೆ, ಸೋಮನ ಕುಣಿತ ನಿಜವಾದ ಶ್ರಮ ಸಂಸ್ಕೃತಿಯ ಪ್ರತಿರೋಧದ ನೆಲೆಗಳಾಗಿವೆ. ಸ್ಲಂ ನಿವಾಸಿಗಳು ಕೀಳಲ್ಲ ಅವರು ಈ ನಗರೀಕರಣದ ತಾರತಮ್ಯದ ಧೋರಣೆಗಳನ್ನು ಹೊತ್ತು ನಗರಗಳನ್ನು ಕಟ್ಟುತ್ತಿರುವವರು. ಆದ್ದರಿಂದ ನಾನೂ ಅವರನ್ನು ಈ ನಗರಗಳ ಉಸಿರು ಎಂದು ಕರೆಯಲಿಚ್ಛಿಸುತ್ತೇನೆ. ಭಾರತೀಯ ಶಾಸ್ತ್ರೀಯ ಕಲಾಪ್ರಕಾರಗಳಿಗೆ ಸಿಗುವ ಮಾನ್ಯತೆ ನಮ್ಮ ನೆಲ ಮೂಲದ ಕಲಾಪ್ರಕಾರಗಳಿಗೂ ಸಿಗಬೇಕು. ಶ್ರಮಿಕ ಸಂಸ್ಕೃತಿಯು ದೇವರನ್ನು ಮನಷ್ಯರೆಂದು ಭಾವಿಸುತ್ತದೆ ಮತ್ತು ಚಲನಶೀಲತೆಯ ಸಂಕೇತವಾಗಿದ್ದು ಬದುಕುವ ಮತ್ತು ಬದುಕಿಸುವ ಮನುಷ್ಯ ಸಂಸ್ಕೃತಿಯಾಗಿದೆ ಎಂದು ಆಶಿಸುತ್ತ ತಮ್ಮ ಕಲಾ ಪ್ರಕಾರಗಳನ್ನು ಗೌರವಿಸಬೇಕು ಎಂದರು.

ಸAಸ್ಕöÈತಿ ಚಂತಕರಾದ ಡಾ.ಡಾಮಿನಿಕ್ ಮಾತನಾಡಿ, ವಂಚಿತ ಸಮುದಾಯಗಳ ಆಚರಣೆ ಅಥವಾ ಕಲಾಚರವೇ ನಿಜವಾದ ಆಚರಣೆಗಳು, ಈ ದೇಶದ ಸಂಪತ್ತನ್ನು ಉತ್ಪಾದನೆ ಮಾಡುವ ಮಾನವ ಸಂಪನ್ಮೂಲವೆಂದರೆ ಅದು ಸ್ಲಂ ಜನರೇ. ಆದ್ದರಿಂದ ನಾವು ಆಳುವ ಜನರಾಗಿ ಬದಲಾಗಬೇಕಿದೆ. ನಮ್ಮ ಬದುಕಿನ ಮೇಲಿನ ಬದ್ಧತೆಯನ್ನು ಹೆಚ್ಚು ಮಾಡಿಕೊಳ್ಳಲು ಇಂತಹ ತಳ ಸಮುದಾಯಗಳ ಕಲಾಚಾರಗಳು ಶಕ್ತಿ ತುಂಬುತ್ತವೆ ಕಳೆದ ೧೫ ವರ್ಷಗಳಲ್ಲಿ ಕರ್ನಾಟಕದ ಸ್ಲಂ ಜನರಿಗೆ ಒಂದು ಗುರುತನ್ನು ಈ ಸ್ಲಂ ಹಬ್ಬ ತಂದುಕೊಟ್ಟಿದೆ ಎಂದು ತಿಳಿಸಿದರು.

ಪ್ರಾಸ್ತಾವಿಕವಾಗಿ ಸ್ಲಂ ಜನಾಂದೋಲನ ಕರ್ನಾಟಕದ ರಾಜ್ಯ ಸಂಚಾಲಕ ಎ. ನರಸಿಂಹಮೂರ್ತಿ ಮಾತನಾಡಿದರು. ಅಧ್ಯಕ್ಷತೆಯನ್ನು ಹಿರಿಯ ಚಿಂತಕರಾದ ಕೆ.ದೊರೆರಾಜ್ ವಹಿಸಿದ್ದರು. ಮಾಜಿ ನಗರ ಪಾಲಿಕೆ ಸದಸ್ಯರಾದ ಲಕ್ಷ್ಮಿ ನರಸಿಂಹರಾಜು, ದಾವಣಗೆರೆ ಜಿಲ್ಲಾ ಸಮಿತಿಯ ಎಸ್.ಎಲ್ ಆನಂದಪ್ಪ, ಸಾವಿತ್ರಿಬಾಯಿಫುಲೆ ಮಹಿಳಾ ಸಂಘಟನೆಯ ಚಂದ್ರಮ್ಮ, ತುಮಕೂರು ಸ್ಲಂ ಸಮಿತಿಯ ದೀಪಿಕಾ, ಚಿತ್ರದುರ್ಗ ಜಿಲ್ಲಾ ಸಮಿತಿಯ ರಾಜಣ್ಣ ಅಥಿತಿಗಳಾಗಿ ಭಾಗವಹಿಸಿದ್ದರು. ಕಾರ್ಯಕ್ರಮದ ನಿರೂಪಣೆಯನ್ನು ತಿರುಮಲಯ್ಯ, ಸ್ವಾಗತವನ್ನು ಅರುಣ್, ವಂದನಾರ್ಪಣೆಯನ್ನು ಅನುಪಮ ನೇರವೇರಿಸಿದ್ದರು.

Leave a Reply

Your email address will not be published. Required fields are marked *