ತಿಪಟೂರು: ತಿಪಟೂರು ತಾಲೂಕಿನ ಹೊನ್ನವಳ್ಳಿ ಹೋಬಳಿಯ ಬಾಗವಾಳದ ಮುನಿಯಪ್ಪ ಸ್ವಾಮಿ ಆಲದ ಮರದ ಜಾತ್ರಾ ಮಹೋತ್ಸವ ಭಕ್ತಿಯ ಪರಾಕಷ್ಠೆಯಲ್ಲಿ ಒಂದು ವಾರಗಳ ಕಾಲ ಜಾತ್ರೆ ನಡೆಯಿತು.
ಕೆರಗೋಡಿ ರಂಗಾಪುರದ ಗುರು ಪರದೇಶಿಕೇಂದ್ರ ಮಹಾಸ್ವಾಮಿಜಿ ನೇತೃತ್ವದಲ್ಲಿ ಹಾಗೂ ಮಾಡಾಳು ವಿರಕ್ತ ಮಠದ ರುದ್ರಮುನಿ ಸ್ವಾಮೀಜಿ ದಿವ್ಯ ಸಾನಿಧ್ಯದಲ್ಲಿ ಧಾರ್ಮಿಕ ಕಾರ್ಯಕ್ರಮದ ಮಹಾರಥೋತ್ಸವ ಕಾರ್ಯಕ್ರಮ, ದನಗಳ ಜಾತ್ರಾ ಮಹೋತ್ಸವ ನಡೆಯಿತು. ಈ ಸಂದರ್ಭದಲ್ಲಿ ಸಾವಿರಾರು ಜನ ಭಕ್ತರು ಬಂದು ಸ್ವಾಮಿಯ ಕೃಪೆಗೆ ಪಾತ್ರರಾದರು.