ತುಮಕೂರು:- ತುಮಕೂರು ಜಿಲ್ಲೆಯಲ್ಲಿ ಮಳೆ ತಂದಿಟ್ಟ ಅವಾಂತರ ಅಷ್ಟಿಷ್ಟಲ್ಲ. ಮಳೆ ಅವಾಂತರಕ್ಕೆ, ಬೆಸ್ಕಾಂ ನಿರ್ಲಕ್ಷ್ಯಕ್ಕೆ ವ್ಯಕ್ತಿಯೋರ್ವ ಬಲಿಯಾಗಿದ್ದಾರೆ.

ಯೋಗೀಶ್ (55) ಮೃತ ದುರ್ದೈವಿ. ತಿಪಟೂರು ತಾಲೂಕಿನ ರಂಗಾಪುರದಲ್ಲಿ ಘಟನೆ ನಡೆದಿದೆ. ಸೋಮವಾರ ಸಂಜೆ ಸುರಿದ ಗಾಳಿ ಮಳೆಗೆ ವಿದ್ಯುತ್ ತಂತಿ ಹರಿದು ಬಿದ್ದಿದೆ. ಇದು ಗೊತ್ತಿಲ್ಲದೆ ಯೋಗೀಶ್ ಹಸುವನ್ನು ಹಿಡಿದುಕೊಂಡು ಹೊಲಕ್ಕೆ ತೆರಳಿದ್ದಾರೆ. ಈ ವೇಳೆ ವಿದ್ಯುತ್ ತಂತಿ ತುಳಿದು ಹಸುಗಳು ಹಾಗೂ ಯೋಗೀಸ್ ಸಾವನ್ನಪ್ಪಿದ್ದಾರೆ.