ರಾಷ್ಟ್ರಧ್ವಜ ಹಿಡಿದು ಶಾಂತಿ ಮೆರವಣಿಗೆ*
ತುಮಕೂರು: ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ಭಯೋತ್ಪಾದಕರು ನಡೆಸಿದ ದಾಳಿ ಖಂಡಿಸಿ ಜಿಲ್ಲಾಯುವ ಕಾಂಗ್ರೆಸ್ ಕಾರ್ಯಕರ್ತರು ಗುರುವಾರ ನಗರದಲ್ಲಿ ರಾಷ್ಟ್ರಧ್ವಜ ಪ್ರದರ್ಶಿಸುತ್ತಾ ಶಾಂತಿಯುತ ಮೆರವಣಿಗೆ ನಡೆಸಿದರು.

ಬಿಜಿಎಸ್ ವೃತ್ತದಿಂದ ಭದ್ರಮ್ಮ ವೃತ್ತದವರೆಗೆ ಪಾದಯಾತ್ರೆ ನಡೆಸಿದ ಯುವಕಾಂಗ್ರೆಸ್‌ಕಾರ್ಯಕರ್ತರು, ಪ್ರವಾಸಿಗರ ಮೇಲೆ ಅಮಾನುಷವಾಗಿಗುಂಡಿನ ದಾಳಿ ನಡೆಸಿ ಹತ್ಯೆ ಮಾಡಿದ ಭಯೋತ್ಪಾದಕರಕೃತ್ಯವನ್ನು ಖಂಡಿಸಿದರು, ಕೇಂದ್ರ ಸರ್ಕಾರತಕ್ಕ ಪ್ರತ್ಯುತ್ತರ ನೀಡಬೇಕು, ಈ ವಿಚಾರದಲ್ಲಿಕೇಂದ್ರ ಸರ್ಕಾರಕ್ಕೆತಮ್ಮ ಬೆಂಬಲವಿದೆ ಎಂದು ಘೋಷಿಸಿದರು.
ರಾಜ್ಯಯುವಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಇಲಾಹಿ ಸಿಕಂದರ್ ಮಾತನಾಡಿ, ಪ್ರವಾಸಿಗರ ಸ್ವರ್ಗವಾಗಿರುವ ಕಾಶ್ಮೀರದ ಪಹಲ್ಗಾಮ್‌ನಲ್ಲಿ ಭಯೋತ್ಪಾದಕರು ಪ್ರವಾಸಿಗರನ್ನು ಹತ್ಯೆ ಮಾಡಿರುವುದು ನೋವಿನ ಸಂಗತಿ, ಮೃತರಆತ್ಮಕ್ಕೆ ಶಾಂತಿದೊರೆಯಲಿ ಹಾಗೂ ಅವರಕುಟುಂಬದವರಿಗೆ ನೋವು ಭರಿಸುವ ಶಕ್ತಿ ಬರಲಿ ಎಂದು ಪ್ರಾರ್ಥಿಸಿದರು.
ಹಿಂದೆ ಇಂತಹದೇ ಘಟನೆ ನಡೆದಾಗ ಕೇಂದ್ರ ಸರ್ಕಾರ ಒಂದುತಲೆಗೆ ಎರಡು ತಲೆ ತರುವ ಭರವಸೆ ನೀಡಿತ್ತು, ಈಗ ಆ ಭರವಸೆ ಈಡೇರಿಸಿದರೆ ಮೃತರ ಆತ್ಮಕ್ಕೆ ಶಾಂತಿದೊರೆಯುತ್ತದೆ. ಕೇಂದ್ರ ಸರ್ಕಾರ ಭಯೋತ್ಪಾದಕರಿಗೆ ತಿರುಗೇಟು ನೀಡಿತಕ್ಕ ಪಾಠ ಕಲಿಸಬೇಕು. ಭಯೋತ್ಪಾದನೆಗೆ ಯಾವುದೇ ಜಾತಿ, ಧರ್ಮ ಇಲ್ಲ, ಈ ವಿಚಾರದಲ್ಲಿ ಕ್ಷುಲ್ಲಕ ರಾಜಕಾರಣ ಮಾಡದೆ ಭಯೋತ್ಪಾದಕರನ್ನು ಬಗ್ಗುಬಡಿಯಲು, ದೇಶದ ಐಕ್ಯತೆ ಪ್ರದರ್ಶಿಸಲುಜಾತಿ, ಧರ್ಮ, ಪಕ್ಷ ಭೇದ ಮರೆತು ಎಲ್ಲರೂ ಕೇಂದ್ರ ಸರ್ಕಾರಕ್ಕೆ ಬೆಂಬಲ ನೀಡಬೇಕು ಎಂದರು.
ಕಾಶ್ಮೀರದಲ್ಲಿ ಉಳಿದಿರುವ ನಮ್ಮರಾಜ್ಯದ ಪ್ರವಾಸಿಗರನ್ನು ಸುರಕ್ಷತೆಯಿಂದ ಕರೆ ತರಲು ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವ ಸಂತೋಷ್ ಲಾಡ್‌ಅವರು ಮಾಡುತ್ತಿರುವ ಪ್ರಯತ್ನ ಶ್ಲಾಘನೀಯ. ಘಟನೆಯಲ್ಲಿ ನೋಂದವರ ಪರವಾಗಿ ರಾಜ್ಯ ಸರ್ಕಾರವಿದೆ ಎಂದು ಇಲಾಹಿ ಸಿಕಂದರ್ ಹೇಳಿದರು.
ಜಿಲ್ಲಾಯುವಕಾಂಗ್ರೆಸ್‌ಅಧ್ಯಕ್ಷ ನಿಕಿಲ್‌ರಾಜಣ್ಣ ಮಾತನಾಡಿ, ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ಕೃತ್ಯವನ್ನ ಯಾವ ದೇವರು, ದೇಶದ ಯಾರೊಬ್ಬರೂ ಕ್ಷಮಿಸಲಾರರು. ಭಯೋತ್ಪಾದನೆಯನ್ನು ಬಗ್ಗುಬಡಿಯಲು ಕೇಂದ್ರ ಸರ್ಕಾರ ಕಠಿಣ ಕ್ರಮ ತೆಗೆದುಕೊಳ್ಳಬೇಕು. ಈ ವಿಚಾರದಲ್ಲಿ ಸರ್ಕಾರಕ್ಕೆಎಲ್ಲರೂ ಬೆಂಬಲ ಕೊಡೋಣ ಎಂದರು.
ಗುಪ್ತಚರ ಇಲಾಖೆ ಎಚ್ಚರ ವಹಿಸಿದ್ದರೆ ಈ ದುರ್ಘಟನೆ ತಪ್ಪಿಸಲು ಸಾಧ್ಯಆಗುತ್ತಿತ್ತೇನೋ, ನಡೆಯಬಾರದದುರಂತ ನಡೆದುಹೋಗಿದೆ. ಇಂತಹ ಘಟನೆಗಳು ಮರುಕಳಿಸದಂತೆ ಕೇಂದ್ರಸರ್ಕಾರಎಚ್ಚರ ವಹಿಸಿಬೇಕು ಎಂದು ಹೇಳಿದರು.