ತುಮಕೂರು: ನಾವೆಲ್ಲರೂ ಸೇಬು ಅಂದ್ರೆ ಹಣ್ಣುಗಳಲ್ಲಿ ಬೆಸ್ಟ್ ಅಂತಾ ಹೇಳುತ್ತೇವೆ. ಆದರೆ, ಪೌಷ್ಠಿಕಾಂಶ ವಿಚಾರ ಬಂದಾಗ ಸೇಬಿಗಿಂತ ಪೇರಳೆ ಹಣ್ಣೆ ಬೆಸ್ಟ್ ಎಂಬುದನ್ನು ವೈದ್ಯಲೋಕ ಹೇಳುತ್ತದೆ.
ಹೌದು, ಸೇಬಿಗಿಂತ ಪೇರಳೆಯು ಅತ್ಯಧಿಕ ಪೌಷ್ಟಿಕಾಂಶ ಹೊಂದಿರುವ ಹಣ್ಣು. ಸಂಸ್ಕೃತದಲ್ಲಿ ಪೇರಳೆ ಹಣ್ಣನ್ನ ಅದರ ಪ್ರಯೋಜನದಿಂದಾಗಿ ಅಮೃತ ಎಂದೂ ಕರೆಯುತ್ತಾರೆ. ಚಳಿಗಾಲ ಆರಂಭವಾದಾಗ ಪೇರಳೆಯ ತಾಜಾ ಹಣ್ಣು ಮಾರುಕಟ್ಟೆಯಲ್ಲಿ ಸಿಗುತ್ತದೆ. ಹಾಗಾಗಿ ಪ್ರತಿಯೊಬ್ಬರೂ ಪೇರಳೆ ಹಣ್ಣ ಸೇವಿಸುವುದು ಒಳ್ಳೆಯದು. ಅದರಲ್ಲೂ ಮಧುಮೇಹಿಗಳಿಗೆ ಈ ಹಣ್ಣು ಬೆಸ್ಟ್.
ಮಧುಮೇಹಿಗಳು ತಮ್ಮ ಆಹಾರದ ಬಗ್ಗೆ ಬಹಳಷ್ಟು ಕಾಳಜಿವಹಿಸಬೇಕಾಗುತ್ತದೆ. ಯಾವುದೇ ರೀತಿಯ ಹಣ್ಣುಗಳನ್ನು ಸೇವಿಸುವಾಗಲೂ ಅದು ಮಧುಮೇಹಿಗಳಿಗೆ ಉತ್ತಮವೋ, ಅಲ್ಲವೋ ಎನ್ನುವುದನ್ನು ತಿಳಿಯುವುದು ಬಹಳ ಮುಖ್ಯ. ಮಧುಮೇಹ ರೋಗಿಗಳು ಯಾವ ಪದಾರ್ಥಗಳು ರಕ್ತದಲ್ಲಿ ಸಕ್ಕರೆಯ ಮಟ್ಟವನ್ನು ಹೆಚ್ಚಿಸುತ್ತವೆ ಮತ್ತು ಕಡಿಮೆಗೊಳಿಸುತ್ತವೆ ಎಂಬುದನ್ನು ನೆನಪಿನಲ್ಲಿಟ್ಟುಕೊಂಡು ಅದರ ಪ್ರಕಾರ ತಮ್ಮ ಡಯೆಟ್ನ್ನು ಪಾಲಿಸಬೇಕು.
ಕೆಲವು ಹಣ್ಣುಗಳು ಮಧುಮೇಹ ರೋಗಿಗಳಿಗೆ ರಾಮಬಾಣದಂತೆ ಕೆಲಸ ಮಾಡುತ್ತವೆ. ಅಂತಹ ಹಣ್ಣುಗಳಲ್ಲಿ ಪೇರಳೆ ಹಣ್ಣು ಕೂಡಾ ಒಂದು. ಪೇರಳೆ ಚಳಿಗಾಲದ ಸೀಸನ್ನಲ್ಲಿ ಹೆಚ್ಚಾಗಿ ಮಾರುಕಟ್ಟೆಯಲ್ಲಿ ದೊರೆಯಲಾರಂಭಿಸುತ್ತದೆ. ಮಧುಮೇಹದಲ್ಲಿ ಪೇರಳೆಯನ್ನು ತಿನ್ನಬಹುದೇ, ಪೇರಳೆ ತಿಂದರೆ ಸಕ್ಕರೆ ಹೆಚ್ಚುತ್ತದೆಯೇ? ಪೇರಳೆಯನ್ನು ತಿನ್ನಬಹುದಾದರೆ ಅದನ್ನು ಯಾವ ಪ್ರಮಾಣದಲ್ಲಿ ತಿನ್ನಬಹುದು ಎನ್ನುವುದನ್ನು ತಿಳಿದುಕೊಂಡಿರಬೇಕು.
ಪೇರಳೆಯು 12 ರಿಂದ 24 ಕಡಿಮೆ ಗ್ಲೈಸೆಮಿಕ್ ಇಂಡೆಕ್ಸ್ ಹೊಂದಿದೆ. ಇದರರ್ಥ ಅದರಲ್ಲಿರುವ ಸಕ್ಕರೆಗಳು ನಿಮ್ಮ ರಕ್ತಕ್ಕೆ ಬಹಳ ನಿಧಾನವಾಗಿ ಬಿಡುಗಡೆಯಾಗುತ್ತವೆ ಮತ್ತು ಸಕ್ಕರೆಯ ಸ್ಪೈಕ್ ಅನ್ನು ರಚಿಸುವುದಿಲ್ಲ. ಆಹಾರದ ಫೈಬರ್, ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಒಳ್ಳೆಯದು. ಇದರಲ್ಲಿರುವ ಕಡಿಮೆ ಕ್ಯಾಲೋರಿ ಇನ್ಸುಲಿನ್ಗೆ ನಿರೋಧಕವಾಗಿರಬಹುದಾದ ಮಧುಮೇಹಿಗಳಲ್ಲಿ ಸ್ಥೂಲಕಾಯದ ಅಪಾಯದ ಅಂಶವನ್ನು ಕಡಿಮೆ ಮಾಡುತ್ತದೆ. ಪೇರಳೆಯು ಸೇಬಿಗಿಂತ ಹೆಚ್ಚು ಪೌಷ್ಟಿಕಾಂಶ ಹೊಂದಿರುವ ಹಣ್ಣು. ಪೇರಳೆಯ ಪ್ರಯೋಜನಗಳಿಂದಾಗಿ ಇದನ್ನು ಸಂಸ್ಕೃತದಲ್ಲಿ ‘ಅಮೃತ’ ಎಂದೂ ಕರೆಯುತ್ತಾರೆ. ಚಳಿಗಾಲದಲ್ಲಿ ತಾಜಾ ಮತ್ತು ಸಿಹಿಯಾಗಿರುವ ಪೇರಳೆಯು ದೊರೆಯುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ಈ ಹಣ್ಣನ್ನು ಸವಿಯಲೇ ಬೇಕು.
ಪೌಷ್ಟಿಕತಜ್ಞ, ತೂಕ ನಷ್ಟ ತರಬೇತುದಾರ ಮತ್ತು ಕೀಟೋ ಡಯೆಟಿಷಿಯನ್ ಸ್ವಾತಿ ಸಿಂಗ್ ಪ್ರಕಾರ, ಪೇರಳೆಯ ಗ್ಲೈಸೆಮಿಕ್ ಇಂಡೆಕ್ಸ್ 12-24 ರ ನಡುವೆ ಇದೆ, ಇದು ಸಾಕಷ್ಟು ಕಡಿಮೆಯಾಗಿದೆ. ಪೇರಳೆಯು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುವ ಅನೇಕ ವಿಟಮಿನ್ಗಳನ್ನು ಹೊಂದಿರುತ್ತದೆ.