ತುಮಕೂರು || ಪೋಕ್ಸೋ ಪ್ರಕರಣ: ಆರೋಪಿಗೆ 20 ವರ್ಷ ಜೈಲು ಶಿಕ್ಷೆ

ನಕಲಿ ನೋಟು ಪ್ರಿಂಟ್ ಮಾಡಿದ್ದ ಯುವಕ ಪೊಲೀಸ್ ವಶಕ್ಕೆ

ತುಮಕೂರು:- ಪೊಕ್ಸೋ ಪ್ರಕರಣದ ಆರೋಪಿಗೆ 20 ವರ್ಷ ಜೈಲು ಶಿಕ್ಷೆ ಮತ್ತು 1ಲಕ್ಷದ50 ಸಾವಿರ‌ ದಂಡ ವಿಧಿಸಿ

ತುಮಕೂರು ಎಸ್.ಟಿ.ಎಸ್.ಸಿ. –1 ನ್ಯಾಯಾಲಯದ ನ್ಯಾಯಾಧೀಶರು ತೀರ್ಪು ನೀಡಿದ್ದಾರೆ.

ತುಮಕೂರು ತಾಲೂಕಿನ ಕೋಡಿಹಳ್ಳಿ ಗ್ರಾಮದ ರಘು ಶಿಕ್ಷೆಗೆ ಒಳಗಾದ ಆರೋಪಿಯಾಗಿದ್ದಾನೆ.

2022ರ ಏಪ್ರಿಲ್ 3ರಂದು ನೊಂದ ಬಾಲಕಿಯ ತಾಯಿ ತುಮಕೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲು ಮಾಡಿದ್ದರು. ನಂತರ ಪೊಲೀಸ್ ಇನ್ಸ್ ಪೆಕ್ಟರ್ ನವೀನ್ ಕುಮಾರ್ ಎಂ.ಬಿ.  ಪ್ರಕರಣದ ತನಿಖೆಯನ್ನು ಕೈಗೊಂಡು ಆರೋಪಿಯಾದ ರಘು ಎಂಬಾತನನ್ನು ಬಂಧಿಸಿದ್ದರು. ಆರೋಪಿಯ ವಿರುದ್ಧ ದೋಷಾರೋಪಣ ಪತ್ರವನ್ನು  ನ್ಯಾಯಾಲಯಕ್ಕೆ ಸಲ್ಲಿಸಿದ್ದರು.

ಪ್ರಕರಣವನ್ನು ಸ್ಪೆಷಲ್ ಸಿ.ಸಿ ನಂ: 328/2022 ರಲ್ಲಿ ಮಾನ್ಯ ತುಮಕೂರು ಎಸ್.ಟಿ.ಎಸ್.ಸಿ -1 ನ್ಯಾಯಾಲಯದ ನ್ಯಾಯಾಧೀಶರು ವಿಚಾರಣೆ ನಡೆಸಿ ಆರೋಪಿಯ ವಿರುದ್ಧ ಆರೋಪವು ಸಾಬೀತಾದ ನಂತರ ಶಿಕ್ಷೆ ವಿಧಿಸಿ ಆದೇಶ ನೀಡಿದ್ದಾರೆ. ಈ ಪ್ರಕರಣದ ವಿಶೇಷ ಸರ್ಕಾರಿ ಅಭಿಯೋಜಕರು ಆಶಾ ಕೆ.ಎಸ್.  ವಾದ ಮಂಡಿಸಿದ್ದರು.

Leave a Reply

Your email address will not be published. Required fields are marked *