ಮಧುಗಿರಿ : ಕೊಂಡವಾಡಿ ಗ್ರಾಮದ ಹಾಲು ಉತ್ಪಾದಕ ಸಹಕಾರ ಸಂಘಕ್ಕೆ ಕೆಲ ರೈತರಿಂದ ಕಳಪೆ ಗುಣಮಟ್ಟದ ಹಾಲು ಪೂರೈಕೆಯಾಗುತ್ತಿದೆ ಎಂದು ತುಮುಲ್ ಅಧಿಕಾರಿಗಳು ಹಾಲು ಸ್ವೀಕರಿಸದೆ ವಾಪಸ್ ಕಳುಹಿಸಿದ ಘಟನೆ ಬುಧವಾರ ನಡೆದಿದ್ದು, ರೈತರು ಮತ್ತು ಅಧಿಕಾರಿಗಳ ನಡುವೆ ಮಾತಿನ ಚಕಮಕಿಗೆ ಕಾರಣವಾಗಿದೆ.
ಘಟನೆಯ ವಿವರ : ಕೊಂಡವಾಡಿ ಗ್ರಾಮದ ಸುತ್ತಮುತ್ತಲ ಟ್ಯಾಂಕರ್ ಮಾರ್ಗದ ವ್ಯಾಪ್ತಿಯಲ್ಲಿ ಬಡಚೌಡನಹಳ್ಳಿ, ಕೊಂಡವಾಡಿ, ಯರಗುಂಟೆ, ಹೊಸಕೆರೆ ಬಿಎಂಸಿ ಕೇಂದ್ರಗಳಿವೆ. ಪ್ರತಿ ದಿನ ಹಾಲಿನ ಗುಣಮಟ್ಟ ಕಡಿಮೆ ಬರುತ್ತಿದ್ದ ಹಿನ್ನೆಲೆಯಲ್ಲಿ ತುಮುಲ್ ಅಧಿಕಾರಿಗಳು ಮೊದಲು ಕೊಂಡವಾಡಿ ಡೈರಿ ಹೊರತುಪಡಿಸಿ ಉಳಿದ ಮೂರು ಡೈರಿಗಳಲ್ಲಿ ಪರಿಶೀಲನೆ ನಡೆಸಿದಾಗ ಹಾಲಿನ ಗುಣಮಟ್ಟ ಸರಿಯಾಗಿತ್ತು. ಆದರೆ ಕೊನೆಯಲ್ಲಿ ಬುಧವಾರ ಕೊಂಡವಾಡಿ ಡೈರಿಯಲ್ಲಿ ಪರಿಶೀಲನೆ ನಡೆಸಿದಾಗ ಹಾಲಿನ ಎಸ್.ಎನ್ಎಫ್ ೭.೯ ರಿಂದ ಪ್ರಾರಂಭವಾಗಿದೆ. ಹಾಗಾಗಿ ಹಾಲಿನ ಗುಣಮಟ್ಟ ಸರಿಯಿಲ್ಲ ಎಂದು ಒಕ್ಕೂಟದ ಮೇಲ್ವಿಚಾರಕಿ ಸಹನಾ ಹಾಲು ಸ್ವೀಕರಿಸಲು ನಿರಾಕರಿಸಿದ್ದು, ಇದರಿಂದ ಬೇಸರಗೊಂಡ ರೈತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮಧುಗಿರಿಯ ಯಾವ ಡೈರಿಯಲ್ಲೂ ಇಲ್ಲದ ಸಮಸ್ಯೆ ಕೊಂಡವಾಡಿಯಲ್ಲಿ ಮಾತ್ರ ಯಾಕೆ..? : ಕೊಂಡವಾಡಿ ಪಂಚಾಯಿತಿಯಲ್ಲಿರುವ ನಾವು ರೈತರಲ್ಲವೆ ಎಂದು ಬೇಸರ ವ್ಯಕ್ತಪಡಿಸಿದ ಹೈನುಗಾರರು ದಿನನಿತ್ಯ ಎರಡು ಮೂರು ಲೀಟರ್ ಹಾಲು ಹಾಕುವವರ ಗತಿ ಏನು? ಕೊಂಡವಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಡೈರಿಗೆ ದಿನನಿತ್ಯ ನೂರಾರು ರೈತರು ಹಾಲು ಹಾಲು ಹಾಕುತ್ತಾರೆ. ಹಾಲಿನ ಗುಣಮಟ್ಟ ಸರಿಯಿಲ್ಲ ಎಂದು ಸ್ವೀಕರಿಸದೆ ಇದ್ದರೆ ಯಾರೋ ಮಾಡಿದ ತಪ್ಪಿಗೆ ಎಲ್ಲಾ ರೈತರ ಹಾಲು ಸ್ವೀಕರಿಸದೆ ಇರುವುದು ಸರಿಯಲ್ಲ. ದಯವಿಟ್ಟು ಹಾಲು ಸ್ವೀಕರಿಸಿ ಎಂದು ಮನವಿ ಮಾಡಿದ್ದಾರೆ.
ಒಕ್ಕೂಟದ ವಿಸ್ತರಣಾಧಿಕಾರಿ ಸಹನಾ ಮತ್ತೊಮ್ಮೆ ಮಧುಗಿರಿ ಬಿಎಂಸಿ ಕೇಂದ್ರಕ್ಕೆ ಹಾಲನ್ನು ಕಳುಹಿಸಿ ಪರಿಶೀಲಿಸಿದಾಗ, ಮತ್ತೆ ಎಸ್.ಎನ್.ಎಫ್ ಕಡಿಮೆ ಬಂದಿದೆ. ಹಾಗಾಗಿ ಹಾಲು ಸ್ವೀಕರಿಸಲು ಸಾಧ್ಯವಿಲ್ಲ ಎಂದು ತಿಳಿಸಿರುವುದು ಹೈನುಗಾರರ ಅಸಮಾಧಾನಕ್ಕೆ ಕಾರಣವಾಗಿದೆ. ಕೊಂಡವಾಡಿ ಹಾಲು ಒಕ್ಕೂಟದ ಡೈರಿಯಲ್ಲಿ ನಿರಾಕರಿಸಿದ ಅದೇ ಹಾಲನ್ನು ಮಧುಗಿರಿ ಸಿಸಿಯಲ್ಲಿ ಪರಿಶೀಲನೆಗೆ ತೆಗೆದುಕೊಂಡು ಹೋದಾಗ ಅಲ್ಲಿ ಹಾಲನ್ನು ಸ್ವೀಕರಿಸಲಾಗಿದೆ. ಇದರಿಂದ ಕೊಂಡವಾಡಿ ಡೈರಿಯಲ್ಲಿ ನೂತನವಾಗಿ ಅಳವಡಿಸಲಾಗಿರುವ ಹಾಲು ಪರಿಶೀಲನೆ ನಡೆಸುವ ಮಷೀನ್ ಸರಿ ಇಲ್ಲ ಎಂಬ ಆರೋಪವನ್ನು ರೈತರು ವ್ಯಕ್ತಪಡಿಸಿದ್ದು, ಇದರ ಬಗ್ಗೆ ಪರಿಶೀಲನೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ. ರೈತರು ಡೈರಿಗೆ ಹಾಕುವ ಹಾಲಿನ ಎಸ್.ಎನ್.ಎಫ್ ಶೇ. 8.5 ರಷ್ಟಿರಬೇಕು. ಆದರೆ ಕೊಂಡವಾಡಿ ಗ್ರಾಮದಲ್ಲಿ ಕೆಲ ರೈತರು ಹಾಕುವ ಹಾಲಿನ ಎಸ್.ಎನ್.ಎಫ್ ಶೇ.8.3 ರಷ್ಟು ಬರುತ್ತಿದ್ದು, ಈ ಹಾಲನ್ನು ಸ್ವೀಕರಿಸಿದರೆ ರೈತರಿಗೆ ಸರ್ಕಾರದಿಂದ ನೀಡುವ ಸಬ್ಸಿಡಿಯೂ ಸಿಗುವುದಿಲ್ಲ. ಅಲ್ಲದೇ ಸಂಘಕ್ಕೆ ಲೀಟರ್ ಹಾಲಿಗೆ ಕೇವಲ 12 ರೂ. ಸಿಗಲಿದ್ದು, ಇದರಿಂದ ರೈತರಿಗೆ ಬಹಳಷ್ಟು ತೊಂದರೆಯಾಗಲಿದೆ. ಕೆಲ ಬೆರಳೆಣಿಕೆಯಷ್ಟು ರೈತರಿಂದಾಗಿ ಎಲ್ಲಾ ರೈತರಿಗೂ ಅನ್ಯಾಯವಾಗುತ್ತಿದೆ. ಇದನ್ನು ರೈತರಿಗೆ ತಿಳಿಸಲು ಹೋದರೆ ಕೆಲವರು ವಿನಾ ಕಾರಣ ರಾಜಕೀಯ ಮಾಡಿ ರೈತರನ್ನು ಎತ್ತಿಕಟ್ಟುವ ಕೆಲಸ ಮಾಡುತ್ತಿದ್ದಾರೆ. ಅಲ್ಲದೇ ಕೊಂಡವಾಡಿ ಡೈರಿಯಲ್ಲಿ ಅಲ್ಲಿನ ಸಿಬ್ಬಂದಿ ಯಾವುದೇ ಶುಚಿತ್ವಕ್ಕೆ ಒತ್ತು ನೀಡಿಲ್ಲ. ಡೈರಿಯ ಹಾಲು ಶಾಲೆಗಳಿಗೆ ಮಕ್ಕಳು ಕುಡಿಯಲು ಹೋಗುತ್ತದೆ. ಇದರಿಂದ ಏನಾದರೂ ಅನಾಹುತ ಸಂಭವಿಸಿದರೆ ಯಾರು ಹೊಣೆ ಎಂದು ಅಲ್ಲಿನ ಸಿಬ್ಬಂದಿಗೆ ಸೂಚಿಸಿದರೆ ಅವರು ಕೆಲ ರೈತರನ್ನು ಎತ್ತಿ ಕಟ್ಟುವ ಕೆಲಸ ಮಾಡಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ ಎಂದು ತುಮುಲ್ ವಿಸ್ತರಣಾಧಿಕಾರಿ ಸಹನಾ ಆರೋಪಿಸಿದ್ದಾ