ತುಮಕೂರು : ಬೆವಿಕಂ ನಗರ ಉಪವಿಭಾಗ-1ರ ವ್ಯಾಪ್ತಿಯಲ್ಲಿ ಅಟಲ್ ಭೂಜಲ್ ಯೋಜನೆಯಡಿ ಪ್ರತ್ಯೇಕ ಕೃಷಿ ಫೀಡರ್ ನಿರ್ಮಾಣ ಕಾಮಗಾರಿ ಕೈಗೊಂಡಿರುವುದರಿಂದ ಮೇ 4 ರಿಂದ 31 ರವರೆಗೆ ಬೆಳಿಗ್ಗೆ 10 ರಿಂದ ಸಂಜೆ 6 ಗಂಟೆಯವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ.

ಹನುಮಂತಪುರ, ಕುವೆಂಪು ನಗರ, ಆದರ್ಶ ನಗರ, ಅಣ್ಣೇತೋಟ, ಜಗನ್ನಾಥಪುರ, ಶಾರದಾ ದೇವಿ ನಗರ, ಗಣೇಶ ನಗರ, ನಿರ್ವಾಣಿ ಲೇಔಟ್, ಅಗ್ನಿಬನ್ನಿರಾಯ ನಗರ, ಭಾಗ್ಯ ನಗರದಲ್ಲಿ ಮೇ 4, 6, 8, 10, 12, 14, 16, 18, 20, 22, 24, 26, 29, 31ರಂದು ಹಾಗೂ ಗೋವಿಂದನಗರ, ಹೌಸಿಂಗ್ ಬೋಡ್, ಗುಬ್ಬಿಗೇಟ್, ಕುಂಟಮ್ಮನತೋಟ, ದಿಬ್ಬೂರು, ಬಿ.ಹೆಚ್.ಪಾಳ್ಯ, ಹೊನ್ನೇನಹಳ್ಳಿ ರಸ್ತೆ, ಹಾರೋನಹಳ್ಳಿ, ಪಿ.ಎನ್.ಆರ್. ಪಾಳ್ಯ, ಕುಪ್ಪೂರು, ಹೊಸಹಳ್ಳಿಯಲ್ಲಿ ಮೇ 5, 7, 9, 11, 13, 15, 17, 19, 21, 23, 25, 28, 30ರಂದು ವಿದ್ಯುತ್ ವ್ಯತ್ಯಯ ಉಂಟಾಗಲಿದ್ದು, ಗ್ರಾಹಕರು ಸಹಕರಿಸಬೇಕೆಂದು ಸಹಾಯಕ ಕಾರ್ಯ ನಿರ್ವಾಹಕ ಇಂಜಿನಿಯರ್ ನಾಗರಾಜು ಹೆಚ್.ಪಿ. ಮನವಿ ಮಾಡಿದ್ದಾರೆ.