ತುಮಕೂರು: ರಸಗೊಬ್ಬರ ಕೊರತೆ ಖಂಡಿಸಿ ಬಿಜೆಪಿ ರೈತಮೋರ್ಚಾ ನಡೆಸಿದ ಪ್ರತಿಭಟನೆಯಲ್ಲಿ ಪೊಲೀಸರ ನಿರ್ದೇಶನವನ್ನು ಮೀರಿ ರಸ್ತೆ ತಡೆದು ಟೈರ್‌ಗಳಿಗೆ ಬೆಂಕಿ ಹಚ್ಚಿದ ಕೃತ್ಯಕ್ಕೆ ಸಂಬAಧಿಸಿದAತೆ ಬಿಜೆಪಿ ನಗರಾಧ್ಯಕ್ಷ ಧನುಷ್ ಸೇರಿದಂತೆ ಆರು ಮಂದಿ ಮೇಲೆ ನಗರ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದೆ.
ಪ್ರತಿಭಟನೆ ವೇಳೆ ಬಿಜಿಎಸ್ ವೃತ್ತದಿಂದ ಜಿಲ್ಲಾಧಿಕಾರಿಗಳ ಕಚೇರಿ ವರೆಗೂ ಬಿಜೆಪಿ ಕಾರ್ಯಕರ್ತರು ಮೆರವಣಿಗೆ ಹಮ್ಮಿಕೊಂಡಿದ್ದರು. ಜಿಲ್ಲಾಧಿಕಾರಿ ಕಚೇರಿ ಬಳಿಯ ಅಮಾನಿಕೆರೆ ರಸ್ತೆಯಲ್ಲಿ ನಗರಾಧ್ಯಕ್ಷ ಧನುಷ್, ಕಾರ್ಯಕರ್ತ ಮೋಹನ್ ಸೇರಿದಂತೆ ಐದಾರು ಮಂದಿ ಪೊಲೀಸರ ನಿರ್ದೇಶನಗಳನ್ನು ಮೀರಿ ತಮ್ಮ ಬಳಿ ಇದ್ದ ಟೈರ್‌ಗಳಿಗೆ ಬೆಂಕಿ ಹಚ್ಚಿದ್ದು, ಸಾರ್ವಜನಿಕ ಸಂಚಾರಕ್ಕೆ ಅಡ್ಡಿಯುಂಟು ಮಾಡಿದ್ದ ಆರೋಪದಡಿÀ ಕಲಂ 285 ಬಿಎನ್‌ಎಸ್ ಮತ್ತು 112 ಕೆ.ಪಿ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.