ತುಮಕೂರು || ಬಾಂಗ್ಲಾದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯ ಖಂಡಿಸಿ ಪ್ರತಿಭಟನೆ

ತುಮಕೂರು || ಬಾಂಗ್ಲಾದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯ ಖಂಡಿಸಿ ಪ್ರತಿಭಟನೆ

ತುಮಕೂರು: ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯ ಕೂಡಲೇ ನಿಲ್ಲಬೇಕು. ಇಸ್ಕಾನ್ನ ಸನ್ಯಾಸಿ ಚಿನ್ಮಯಿಕೃಷ್ಣದಾಸ್ ಅವರನ್ನು ಸೆರೆವಾಸದಿಂದ ಮುಕ್ತಗೊಳಿಸಬೇಕು ಎಂದು ಆಗ್ರಹಿಸಿ ನಗರದಲ್ಲಿ ಹಿಂದೂ ಹಿತರಕ್ಷಣಾ ವೇದಿಕೆಯಿಂದ ಬುಧವಾರ ವಿವಿಧ ಮಠಾಧೀಶರು, ಹಿಂದೂ ಸಂಘಟನೆ ಮುಖಂಡರು, ಜನಪ್ರತಿನಿಧಿಗಳ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.

ಸಿದ್ಧಗಂಗಾ ಮಠಾಧ್ಯಕ್ಷ ಶ್ರೀ ಸಿದ್ಧಲಿಂಗಸ್ವಾಮೀಜಿ, ಹಿರೇಮಠಾಧ್ಯಕ್ಷ ಡಾ.ಶ್ರೀ ಶಿವಾನಂದ ಶಿವಾಚಾರ್ಯಸ್ವಾಮೀಜಿ, ರಾಮಕೃಷ್ಣ ವಿವೇಕಾನಂದಾಶ್ರಮದ ಡಾ.ವಿರೇಶಾನಂದಸರಸ್ವತಿ ಸ್ವಾಮೀಜಿ, ತಂಗನಹಳ್ಳಿ ಮಠದ ಶ್ರೀಗಳು, ತಂಗನಹಳ್ಳಿ ರಾಮೇನಹಳ್ಳಿ, ಗೊಲ್ಲಹಳ್ಳಿ ಮಠ ಹಾಗೂ ಇಸ್ಕಾನ್ನ ಸ್ವಯಂ ಪ್ರಕಾಶ ಶ್ರೀಗಳು ಟೌನ್ಹಾಲ್ ಬಿಜಿಎಸ್ ವೃತ್ತ ಮುಂಭಾಗದಿಂದ ಆರಂಭಗೊಂಡ ಪ್ರತಿಭಟನಾ ಮೆರವಣಿಗೆ ನೇತೃತ್ವವಹಿಸಿದ್ದು  ಬಿ.ಎಚ್.ರಸ್ತೆ ಎಂಜಿ.ರಸ್ತೆ ಮಾರ್ಗವಾಗಿ ಜಿಲ್ಲಾಧಿಕಾರಿ ಕಚೇರಿವರೆಗೂ ಮೆರವಣಿಗೆ ಸಾಗಿ ಜಿಲ್ಲಾಧಿಕಾರಿಗಳಿಗೆ  ಹಿಂದೂಗಳ ಮೇಲಿನ ದೌರ್ಜನ್ಯ ಖಂಡಿಸಿ ಮನವಿ ಸಲ್ಲಿಸಲಾಯಿತು.

ಹಿಂದೂಗಳು ಮತ್ತು ಇತರ ಅಲ್ಪಸಂಖ್ಯಾತರ ಮೇಲೆ ಬಾಂಗ್ಲಾದೇಶದಲ್ಲಿ ಇಸ್ಲಾಮಿಕ್ ಮೂಲಭೂತವಾದಿಗಳಿಂದ ದಾಳಿ, ಹತ್ಯೆ, ಲೂಟಿ, ಬೆಂಕಿಯ ದಾಳಿ ಹಾಗೂ ಮಹಿಳೆಯರ ಮೇಲಿನ ಅಮಾನವೀಯ ದೌರ್ಜನ್ಯಗಳನ್ನು ನಡೆಸುತ್ತಿರುವುದು ಅತ್ಯಂತ ಚಿಂತಾಜನಕ ಸಂಗತಿ. ಇಂತಹ ಕೃತ್ಯವನ್ನು ಹಿಂದು ಹಿತರಕ್ಷಣಾ ವೇದಿಕೆಯು ಖಂಡಿಸುತ್ತದೆ. ಈಗಿನ ಬಾಂಗ್ಲಾ ಸರ್ಕಾರ ಮತ್ತು ಅಲ್ಲಿನ ಇತರೆ ಸಂಸ್ಥೆಗಳು ಇದನ್ನು ತಡೆಯುವ ಬದಲು ಕೇವಲ ಮೂಕ ಪ್ರೇಕ್ಷಕರಾಗಿದ್ದಾರೆ. ಬಾಂಗ್ಲಾದೇಶದ ಹಿಂದೂಗಳು ತಮ್ಮ ರಕ್ಷಣೆಗಾಗಿ ಅನಿವಾರ್ಯವಾಗಿ ಪ್ರಜಾತಾಂತ್ರಿಕ ಮಾರ್ಗದಲ್ಲಿ ಧ್ವನಿಯೆತ್ತಲು ಮುಂದಾದರೆ, ಅವರ ವಿರುದ್ಧವೇ ಅನ್ಯಾಯ ಹಾಗೂ ಅತ್ಯಾಚಾರದಂತಹ ದುಷ್ಕöÈತ್ಯಗಳನ್ನು ಎಸಗುವ ಹೊಸ ವಿಧಾನವೊಂದು ಹೊರಹೊಮ್ಮತ್ತಿದೆ ಎಂದು ಪ್ರತಿಭಟನೆಯಲ್ಲಿ ಭಾಗವಹಿಸಿದ್ದವರು ಖಂಡಿಸಿದರು.

ಇOತಹ ಘಟನೆಗಳ ವಿರುದ್ಧ ಹಿಂದುಗಳ ಪರ ಶಾಂತಿಯುತ ಪ್ರತಿಭಟನೆಯ ನೇತೃತ್ವ ವಹಿಸಿದ್ದ, ಇಸ್ಕಾನ್ನ ಸಾಧು ಚಿನ್ಮಯ ಕೃಷ್ಣದಾಸ್ ಅವರನ್ನು ಬಾಂಗ್ಲಾ ದೇಶದ ಸರ್ಕಾರ ಸೆರೆಮನೆಗೆ ಕಳುಹಿಸಿರುವುದು ಅನ್ಯಾಯವಾದದ್ದು. ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯಗಳು ತಕ್ಷಣವೇ ನಿಲ್ಲುವುದನ್ನು ಖಚಿತಪಡಿಸಿಕೊಳ್ಳಬೇಕು ಹಾಗೂ ಇಸ್ಕಾನ್ನ ಚಿನ್ಮಯ ಕೃಷ್ಣದಾಸ್ ಅವರನ್ನು ಸೆರೆವಾಸದಿಂದ ಮುಕ್ತಗೊಳಿಸಬೇಕೆಂದು ಬಾಂಗ್ಲಾ ಸರ್ಕಾರವನ್ನು ಒತ್ತಾಯಿಸಲಾಯಿತು. ಈ ಸಂದರ್ಭದಲ್ಲಿ ಶಾಸಕರಾದ ಜ್ಯೋತಿಗಣೇಶ್, ಬಿ.ಸುರೇಶ್ಗೌಡ, ಮಾಜಿ ಸಚಿವ ಶಿವಣ್ಣ, ಭಾಜಪ ಮುಖಂಡರಾದ ಗುಬ್ಬಿ ದಿಲೀಪ್,  ಹೆಬ್ಬಾಕರವಿ, ವೈ.ಎಚ್.ಹುಚ್ಚಯ್ಯ, ಜಿ. ವೆಂಕಟೇಶ್, ಭೈರಣ್ಣ, ಹನುಮಂತರಾಜ್, ಧನಿಯಾಕುಮಾರ್, ಬೆಳ್ಳಿಲೋಕೇಶ್, ವೇದಮೂರ್ತಿ, ಎಪಿಎಂಸಿ ಮಾಜಿ ಅಧ್ಯಕ್ಷ ಪಂಚಾಕ್ಷರಿ, ಮಾಜಿ ಮೇಯರ್ ಬಿ.ಜಿ.ಕೃಷ್ಣಪ್ಪ, ಪಾಲಿಕೆ ಮಾಜಿ ಭಾಜಪ ಸದಸ್ಯರುಗಳು, ಹಿಂದೂ ಜಾಗರಣ ವೇದಿಕೆ ಹಾಗೂ ಹಿಂದೂ ಪರ ಸಂಘಟನೆಗಳ  ಜಿ.ಕೆ.ಶ್ರೀನಿವಾಸ್, ಚೇತನ್, ಮಂಜುಭಾರ್ಗವ್ಜಿ.ಎಸ್.ಬಸವರಾಜ್ ಸೇರಿ ಹಲವು  ಪದಾಧಿಕಾರಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *