ತುಮಕೂರು: ಎಂಎಲ್ ಸಿ ರಾಜೇಂದ್ರ ಕೊಲೆಗೆ ಸುಪಾರಿ ಪ್ರಕರಣಕ್ಕೆ ಸಂಬಂಧಿಸಿದ ತನಿಖಾ ತಂಡ ಬದಲಾವಣೆಯಾಗಿದೆ.

ಮಧುಗಿರಿ ಡಿವೈಎಸ್ ಪಿ ಮಂಜುನಾಥ್ ತನಿಖಾ ತಂಡದಿಂದ ಕಿಕ್ ಔಟ್ ಆಗಿದ್ದು, ಮಾಗಡಿ ಡಿವೈಎಸ್ ಪಿ ಪ್ರವೀಣ್ ಗೆ ತನಿಖಾ ತಂಡದ ಹೊಣೆ ನೀಡಲಾಗಿದೆ.
ಶಿರಾ ಪೊಲೀಸ್ ಠಾಣೆಯ ಇನ್ ಸ್ಪೆಕ್ಟರ್ ರಾಘವೇಂದ್ರ, ಕ್ಯಾತಸಂದ್ರ ಠಾಣೆಯ ಪಿಎಸ್ಐ ಚೇತನ್ ಕುಮಾರ್ ಬದಲಿಗೆ, ಕ್ಯಾತಸಂದ್ರ ಠಾಣೆಯ ಸಿಪಿಐ ರಾಮ್ ಪ್ರಸಾದ್, ಹಾಗೂ ಎಸ್ ಪಿ ಕಚೇರಿಯ ಇನ್ ಸ್ಪೆಕ್ಟರ್ ಅವಿನಾಶ್ ತನಿಖಾ ತಂಡಕ್ಕೆ ಸೇರ್ಪಡೆಯಾಗಿದ್ದಾರೆ.
ಕಳೆದ ಮಾರ್ಚ್ 28 ರಂದು ತುಮಕೂರು ಎಸ್.ಪಿ ಗೆ ಎಂಎಲ್ ಸಿ ರಾಜೇಂದ್ರ ದೂರು ನೀಡಿದ್ದರು,
ದೂರು ಸಂಬಂಧ ಕ್ಯಾತಸಂದ್ರ ಪೊಲೀಸ್ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿತ್ತು. ಎಫ್ ಐಆರ್ ದಾಖಲಾದ ಬೆನ್ನಲ್ಲೆ ಮಧುಗಿರಿ ಡಿವೈಎಸ್ ಪಿ ಮಂಜುನಾಥ್ ನೇತೃತ್ವದಲ್ಲಿ ತನಿಖಾ ತಂಡ ರಚನೆ ಮಾಡಲಾಗಿತ್ತು.
ಶಿರಾ ಇನ್ ಸ್ಪೆಕ್ಟರ್ ರಾಘವೇಂದ್ರ, ಕ್ಯಾತಸಂದ್ರ ಪಿಎಸ್ ಐ ಚೇತನ್ ಕುಮಾರ್ ತನಿಖಾ ತಂಡದಲ್ಲಿದ್ರು. ಕಳೆದ ನಾಲ್ಕು ದಿನಗಳಿಂದ ಮಧುಗಿರಿ ಡಿವೈಎಸ್ ಪಿ ಮಂಜುನಾಥ್ ನೇತೃತ್ವದಲ್ಲಿ ಪ್ರಕರಣದ ತನಿಖೆ ನಡೆಸಲಾಗಿತ್ತು.
ಏಕಾಏಕಿ ತನಿಖೆ ನಡೆಸುತ್ತಿದ್ದ ತಂಡ ಬದಲು ಮಾಡಲಾಗಿದೆ. ತನಿಖೆ ನಡೆಸುತ್ತಿದ್ದ ಮಧುಗಿರಿ ಡಿವೈಎಸ್ ಪಿ ಮಂಜುನಾಥ್ ಬದಲಿಸಿ ಮತ್ತೊಬ್ಬ ಡಿವೈಎಸ್ ಪಿ ನೇಮಕ ಮಾಡಲಾಗಿದೆ.