ತುಮಕೂರು:- ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಅಡಿ ತುಮಕೂರು ಜೈಲಿನಲ್ಲಿರುವ ಆರೋಪಿ ರವಿಶಂಕರ್ ಗೆ ಬೆಲ್ ಸಿಕ್ಕಿದೆ. ಆದರೆ ಬಿಡುಗಡೆ ಸಿಗುತ್ತಿಲ್ಲ.
ಆರೋಪಿಗೆ ಬೇಲ್ ಸಿಕ್ಕರೂ ಜೈಲಿನಿಂದ ಇನ್ನೂ ಸಿಕ್ಕಿಲ್ಲ ಬಿಡುಗಡೆ ಭಾಗ್ಯ ಸಿಕ್ಕಿಲ್ಲ. ಬೆಲ್ ಸಿಕ್ಕಿ ಐದು ದಿನವಾದ್ರು ಇನ್ನು ಜೈಲಿನಿಂದ ಬಿಡುಗಡೆ ಭಾಗ್ಯವಾಗಿಲ್ಲ.
ಬೆಲ್ ಗೆ ಶ್ಯೂರಿಟಿದಾರರು ಸಿಗದೇ ರವಿಶಂಕರ್ ಕುಟುಂಬಸ್ಥರು ಪರದಾಟ ನಡೆಸುತ್ತಿದ್ದಾರೆ. 57 ನೇ ಸಿಸಿಹೆಚ್ ನ್ಯಾಯಾಲಯದಿಂದ ಷರತ್ತು ಬದ್ದ ಜಾಮೀನು ಮಂಜೂರು ಮಾಡಲಾಗಿದೆ.
ಕಳೆದ ಸೋಮವಾರ ಆರೋಪಿ ರವಿಶಂಕರ್ ಗೆ ಷರತ್ತು ಬದ್ದ ಜಾಮೀನನ್ನು ಕೋರ್ಟ್ ನೀಡಿತ್ತು.
2 ಲಕ್ಷ ಬಾಂಡ್ ಹಾಗೂ ಇಬ್ಬರು ಶ್ಯೂರಿಟಿದಾರರನ್ನ ನ್ಯಾಯಾಲಯ ಕೇಳಿದೆ. 2 ಲಕ್ಷ ಹಣ ಹಾಗೂ ಇಬ್ಬರು ಶ್ಯೂರಿಟಿದಾರರು ಸಿಗದೇ ಪರದಾಟ ಮಾಡುತ್ತಿದ್ದಾರೆ.
ಬೆಲ್ ಶ್ಯೂರಿಟಿ ಪ್ರಕ್ರಿಯೆ ಮುಗಿದ ಬಳಿಕ ತುಮಕೂರು ಜೈಲಾಧಿಕಾರಿಗೆ ಜಾಮೀನು ಪ್ರತಿ ತಲುಪಲಿದೆ. ಜಾಮೀನು ಪ್ರತಿ ಸಿಕ್ಕ ಬಳಿಕ ಆರೋಪಿ ರವಿಶಂಕರ್ ನನ್ನ ಜೈಲಿನಿಂದ ಬಿಡುಗಡೆ ಮಾಡಲಾಗುತ್ತದೆ.
ರೇಣುಕಾಸ್ವಾಮಿ ಕೊಲೆ ಪ್ರಕರಣ ಎ-8 ಆರೋಪಿಯಾಗಿರುವ ರವಿಶಂಕರ್, ಕಳೆದ ಎರಡೂವರೆ ತಿಂಗಳ ಹಿಂದೆ
ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಿಂದ ತುಮಕೂರು ಜೈಲ್‌ಗೆ ಶಿಫ್ಟ್ ಆಗಿದ್ದ. ತುಮಕೂರು ಜಿಲ್ಲಾ ಕಾರಾಗೃಹಕ್ಕೆ ರವಿಶಂಕರ್ ಸೇರಿ ನಾಲ್ವರನ್ನ ಶಿಫ್ಟ್ ಮಾಡಲಾಗಿತ್ತು.
ನಾಲ್ವರು ಆರೋಪಿಗಳ ಫೈಕಿ ಮೂವರು ಜೈಲಿನಿಂದ ರಿಲೀಸ್ ಆಗಿದ್ದಾರೆ. ಈಗ ಮತ್ತೊಬ್ಬ ಆರೋಪಿಗೂ ಬೇಲ್ ಸಿಕ್ಕಿದೆ. ಬಿಡುಗಡೆ ಸಿಕ್ಕಿಲ್ಲ.