ತುಮಕೂರು: ನಗರದ ಹೊರವಲಯದಲ್ಲಿ ಸಂಭವಿಸಿದ ಎರಡು ಪ್ರತ್ಯೇಕ ಅಪಘಾತಗಳಲ್ಲಿ ಮೂವರು ಮೃತಪಟ್ಟಿರುವ ಘಟನೆ ನಡೆದಿದೆ.

ಅಂತರಸನಹಳ್ಳಿ ಮಾರುಕಟ್ಟೆ ಬಳಿ ರಸ್ತೆ ಬದಿ ನಿಂತಿದ್ದ ಲಾರಿಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮವಾಗಿ ಪಾವಗಡ ನಿವಾಸಿ ಪ್ರದೀಪ್ (29) ಚಿತ್ರದುರ್ಗದ ನಿವಾಸಿ ತಿಪ್ಪೇಸ್ವಾಮಿ (30) ಎಂಬುವರು ಮೃತಪಟ್ಟಿದ್ದಾರೆ. ಅಂತರಸನಹಳ್ಳಿ ಕೈಗಾರಿಕಾ ಪ್ರದೇಶದಿಂದ ನಗರದ ಕಡೆಗೆ ಧಾವಿಸುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ಈ ಇಬ್ಬರೂ ನಗರದ ಖಾಸಗಿ ಕಂಪನಿಯೊAದರಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು ಎಂದು ಹೇಳಲಾಗಿದೆ.
ಗೆದ್ದಲಹಳ್ಳಿ ಹತ್ತಿರದ ರಿಂಗ್ ರಸ್ತೆಯಲ್ಲಿ ಅಪರಿಚಿತ ವಾಹನವೊಂದು ಬೈಕ್‌ಗೆ ಡಿಕ್ಕಿ ಹೊಡೆದದ್ದರಿಂದ ಭರತ್ (೨೩) ಎಂಬುವರು ಸ್ಥಳದಲ್ಲೇ ಅಸುನೀಗಿದರು. ಉಪ್ಪಾರಹಳ್ಳಿ ನಿವಾಸಿ ಭರತ್ ಕ್ಯಾತ್ಸಂದ್ರ ಕಡೆಯಿಂದ ಕುಣಿಗಲ್ ವೃತ್ತದ ಕಡೆಗೆ ಹೋಗುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ. ಭರತ್ ಅವರು ಬ್ಯಾಂಕ್‌ವೊAದರಲ್ಲಿ ನೌಕರನಾಗಿ ಕಾರ್ಯನಿರ್ವಹಿಸುತ್ತಿದ್ದರು ಎಂದು ತಿಳಿದು ಬಂದಿದೆ. ಈ ಬಗ್ಗೆ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.