ತುಮಕೂರು || ಜನರ ಕಣ್ಮನ ಸೆಳೆಯುತ್ತಿರುವ ಸಿದ್ಧಗಂಗೆ ವಸ್ತು ಪ್ರದರ್ಶನ

ತುಮಕೂರು || ಜನರ ಕಣ್ಮನ ಸೆಳೆಯುತ್ತಿರುವ ಸಿದ್ಧಗಂಗೆ ವಸ್ತು ಪ್ರದರ್ಶನ
  • ಚನ್ನಬಸವ. ಎಂ ಕಿಟ್ಟದಾಳ್

ತುಮಕೂರು : ಶೈಕ್ಷಣಿಕ ಬೀಡು, ಕಲ್ಪತರು ನಾಡು, ತುಮಕೂರಿನ ಹೆಸರು ಕೇಳಿದಾಕ್ಷಣವೇ ಎಲ್ಲರ ಮನಸಲ್ಲಿ ಬರುವುದು ಶ್ರೀ ಸಿದ್ದಗಂಗಾ ಮಠ. ಈ ಹೆಸರು ಕೇಳಿದರೆ ಸಾಕು ಭಕ್ತ ಭಾವುಕರ ಮನದಲ್ಲಿ ಪುಳಕವುಂಟಾಗುತ್ತದೆ. ಹಳೆಯ ವಿದ್ಯಾರ್ಥಿಗಳಿಗೆ ತವರು ನೆನಪಾಗುತ್ತದೆ. ಇನ್ನೂ ಜನರಿಗೆ ಕೃತಾರ್ಥಭಾವ ಮುಖದಲ್ಲಿ ಗರೆಯೊಡೆಯುತ್ತದೆ. ತುಮಕೂರಿಗೆ ಬಂದವರು ಒಮ್ಮೆಯಾದರೂ ಮಠಕ್ಕೆ ಭೇಟಿ ನೀಡಿ ಹೋಗುತ್ತಾರೆ. ದೇಶಕ್ಕೆ ತ್ರಿವಿಧ ದಾಸೋಹವನ್ನು ಪರಿಚಯಿಸಿದ  ನಡೆದಾಡುವ ದೇವರು ಡಾ.ಶ್ರೀ ಶಿವಕುಮಾರ ಸ್ವಾಮೀಜಿಯವರ ಕರ್ಮಭೂಮಿಯಾಗಿದ್ದ  ಶ್ರೀಮಠ ಪ್ರತೀ ವರ್ಷ ಶಿವರಾತ್ರಿ ಸಂದರ್ಭದಲ್ಲಿ ಜನಜಾತ್ರೆಯಿಂದ ತುಂಬಿ ತುಳುಕುತ್ತದೆ.

ಸಿದ್ದಗಂಗಾ ಮಠಕ್ಕೆ ಇಷ್ಟೊಂದು ಜನ, ಭಕ್ತರು, ಮಕ್ಕಳು ಏಕೆ ಸೇರುತ್ತಾರೆ ಅಂತೀರಾ?, ಅದುವೇ ಶಿವರಾತ್ರಿ ಹಬ್ಬದ ಸಂದರ್ಭದಲ್ಲಿ ಬರುವ ಶ್ರೀ ಸಿದ್ಧಲಿಂಗೇಶ್ವರ ಸ್ವಾಮಿ ಜಾತ್ರೆಯ ಕಾರಣದಿಂದ. ಜಾತ್ರೆಯ ಮತ್ತೊಂದು ಪ್ರಮುಖ ಆಕರ್ಷಣೆಯೆಂದರೆ ಕೃಷಿ ಮತ್ತು ಕೈಗಾರಿಕಾ ವಸ್ತುಪ್ರದರ್ಶನ. ಹಲವು ದಶಕಗಳ ಹಿಂದೆ 1964ರಲ್ಲಿ ಡಾ. ಶ್ರೀ ಶಿವಕುಮಾರ ಮಹಾಸ್ವಾಮಿಗಳವರ ದೂರದೃಷ್ಟಿಯ ಫಲವಾಗಿ ಪ್ರಾರಂಭವಾದ ಕೃಷಿ ಕೈಗಾರಿಕಾ ವಸ್ತುಪ್ರದರ್ಶನ ಇಂದು ರಾಜ್ಯದ ಪ್ರಮುಖ ವಸ್ತುಪ್ರದರ್ಶನವಾಗಿ ಬೆಳೆದು ನಿಂತಿದೆ.

ವಸ್ತು ಪ್ರದರ್ಶನದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರ, ನಿಗಮ ಮಂಡಳಿಗಳ ವಿವಿಧ ಯೋಜನಾ ಪ್ರಚಾರ ಮಳಿಗೆಗಳು, ಕೃಷಿ, ಅರಣ್ಯದ ಪ್ರಾತ್ಯಕ್ಷಿಕೆ ಸೇರಿ ಸುಮಾರು 206ಕ್ಕೂ ಹೆಚ್ಚು ಮಳಿಗೆಗಳು , ಮನೋರಂಜನಾ ಆಟಿಕೆಗಳು, ಉಡುಪು, ಫ್ಯಾನ್ಸಿ, ಗೃಹೋಪಯೋಗಿ ವಸ್ತುಗಳ ಪ್ರದರ್ಶನ ಮತ್ತು ಮಾರಾಟಕ್ಕೆ ಲಭ್ಯವಿದ್ದು, ತಿಂಡಿ – ತಿನಿಸುಗಳ ಮಳಿಗೆಗಳು, ಸಾಂಸ್ಕೃತಿಕ ವೇದಿಕೆಯಲ್ಲಿ ಕಲಾವೈಭವ ಸಾರ್ವಜನಿಕರನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿದೆ ಎಂದು ವಸ್ತು ಪ್ರದರ್ಶನದ ಸಮಿತಿಯ ಕಾರ್ಯದರ್ಶಿ ಬಿ.ಗಂಗಾಧರಯ್ಯ, ಜಂಟಿ ಕಾರ್ಯದರ್ಶಿ ಕೆಂ.ಬ.ರೇಣುಕಯ್ಯ, ಎಸ್/ಶಿವಕುಮಾರ್ ಅವರುಗಳು ಹೇಳುತ್ತಾರೆ.

ಕೃಷಿ ಇಲಾಖೆ : ಕೃಷಿಗೆ ಸಂಬOಧಿಸಿದOತೆ ಸಿರಿಧಾನ್ಯಗಳನ್ನು ಬೆಳೆಸುವ ಹಲವು ತಳಿಗಳನ್ನು, ವಿಧಗಳನ್ನು ರೈತರಿಗೆ ಪರಿಚಯಿಸುವ ಹಾಗೂ ಬೆಳೆಗಳ ತಳಿಗಳು, ಏಕದಳ, ದ್ವಿದಳ ಧಾನ್ಯಗಳ ಜೀವಂತ ಪ್ರಾತ್ಯಕ್ಷಿಕೆ ಮುಸುಕಿನ ಜೋಳ, ರಾಗಿ, ಗೋಧಿ, ವಿವಿಧ ಭತ್ತದ ತಳಿಗಳು ಇತ್ಯಾದಿ ಆಹಾರ ಧಾನ್ಯದ ಬೆಳೆಗಳು, ನೆಲಗಡಲೆ ಹೊಸತಳಿಗಳ ಪ್ರಾತ್ಯಕ್ಷಿಕೆ, ಕಡಲೇಕಾಯಿ, ಸೂರ್ಯಕಾಂತಿ ಇತ್ಯಾದಿ ಎಣ್ಣೆಕಾಳುಗಳು ಕಬ್ಬು, ಆರ್ಥಿಕ ಬೆಳೆಗಳ ಜೀವಂತ ಪ್ರಾತ್ಯಕ್ಷಿಕೆಗಳ ಮೂಲಕ ಅಗತ್ಯ ಪರಿಪೂರ್ಣ ಮಾಹಿತಿ, ಸಾವಯವ ಕೃಷಿ, ಸಾವಯವ ಗೊಬ್ಬರ ಬಳಕೆ, ಕಳೆನಿಯಂತ್ರಣ, ಕೃಷಿ ಪರಿಕರಗಳ ಪರಿಚಯದೊಂದಿಗೆ ಸಿರಿಧಾನ್ಯಗಳ ಬಳಕೆ ಮುಂತಾದವುಗಳನ್ನು ತಿಳಿಸುವುದರ ಮೂಲಕ ರೈತರು ಹೆಚ್ಚಿನ ಪ್ರಯೋಜನ ಪಡೆಯುತ್ತಿದ್ದಾರೆ.

ಅರಣ್ಯ ಇಲಾಖೆ : ಇಂದಿನ ತಾಪಮಾನ ಏರಿಕೆಗೆ ಅರಣ್ಯ ನಾಶಕ್ಕೆ ಕಾರಣ. ಅರಣ್ಯ ಉಳಿಸಿ ಬೆಳೆಸಿ ಜಾಗೃತಿ ಕಾಡಿನ ಗಿಡಮೂಲಿಕೆ ಔಷಧಿಗಳ ಪ್ರದರ್ಶನ ಮಾರಾಟ, ಅರಣ್ಯ ಸಂರಕ್ಷಣೆಯ ಮಹತ್ವ ಕಾಡಿನ ಬೆಂಕಿ ತಡೆಗಟ್ಟುವಿಕೆ, ಅವಶ್ಯಕತೆಯ ಅರಿವು ಮೂಡಿಸುವ ಅಂಶಗಳು ಸಾರ್ವಜನಿಕರಿಗೆ ಲಭ್ಯ. ಕಾಡಿನ ಬೆಂಕಿ ಆಕಸ್ಮಿಕಗಳು ತಡೆಗಟ್ಟುವಿಕೆ ಇತ್ಯಾದಿ. ಸಾಲುಮರದ ತಿಮ್ಮಕ್ಕ, ವೃಕ್ಷ ಉದ್ಯಾನ, ಸಾಮಾಜಿಕ ಅರಣ್ಯ, ಅಭಿವೃದ್ಧಿಯಿಂದ ಉತ್ತಮ ಪರಿಸರ ಸರ್ವತೋಮುಖ ಬೆಳವಣಿಗೆ ಸಾಧ್ಯ ಎಂಬ ಅಂಶವನ್ನು ಸಾರುವಂತಹ ವಿಶೇಷ ಅರಣ್ಯ ನಿರ್ಮಾಣ ಮಾಡಲಾಗಿದೆ.

ಜಲಾನಯನ ಅಭಿವೃದ್ಧಿ ಇಲಾಖೆ :

ಕೃಷಿ ಇಲಾಖೆಯ ಸಹಯೋಗದೊಂದಿಗೆ ಜಲಾನಯನ ಅಭಿವೃದ್ಧಿ ಇಲಾಖೆ ಕೆಲಸ ಮಾಡುತ್ತಿದೆ. ಇಳಿಜಾರು ಪ್ರದೇಶಗಳಲ್ಲಿ ಮಳೆ ನೀರಿನ ಸದ್ಬಳಕೆ, ನೀರಿನ ಸಮಗ್ರ ಬಳಕೆ, ವೈಜ್ಞಾನಿಕ ಬದಲಾವಣೆ, ಮಾದರಿ ಗ್ರಾಮ, ಅಣೆಕಟ್ಟೆ, ಕಲ್ಯಾಣಿ, ನೀರಿನ ಹೊಂಡ, ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಯೋಜನೆ, ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆ, ಸಮಗ್ರ ಜಲಾನಯನ ನಿರ್ವಹಣಾ ಯೋಜನೆ, ಪರಿಕಲ್ಪನೆಯಿಂದ ಜನರಲ್ಲಿ ಅರಿವು ಮೂಡಿಸುವ ಪ್ರಯತ್ನ. 

ತೋಟಗಾರಿಕೆ ಇಲಾಖೆ :  ಕೃಷಿ ಇಲಾಖೆಯ ಸಹಯೋಗದೊಂದಿಗೆ ತೋಟಗಾರಿಕೆ ಇಲಾಖೆ ಈ ಬಾರಿ ಹೊಸ ಪ್ರಯತ್ನಕ್ಕೆ ಕೈ ಹಾಕಿದೆ. ಮೂರು ರೀತಿಯ ತೋಟಗಾರಿಕೆ ಬೆಳೆಗಳನ್ನು ತುಮಕೂರಿನ ಜನರಿಗೆ ಪರಿಚಯಿಸುವಂತಹ ಕೆಲಸ ಮಾಡಿದೆ. ªವಿವಿಧ ಜಾತಿಯ ಹೂ ಗಿಡಗಳು, ಔಷಧಿಯ ಗುಣಗಳುಳ್ಳ ಸಸಿಗಳು, ಹಣ್ಣಿನಗಿಡಗಳನ್ನು ಪರಿಚಯಿಸಿದೆ. ಮತ್ತು ಔಷಧಿಯ ಸಸಿಗಳಲ್ಲಿನ ಉಪಯೋಗಗಳನ್ನು ಜನರಿಗೆ ತಿಳಿಸುವಂತಹ ಕಾರ್ಯಕ್ಕೆ ಮಾಡುತ್ತಿದೆ.

ಔಷಧಿಯ ಸಸಿಗಳಾದ : ದೊಡ್ಡ ಪತ್ರೆ, ಬಾದಾಮಿ, ಬಾವಂಚ, ಭದ್ರಾಕ್ಷಿ ಭೃಂಗರಾಜ, ಬ್ರಾಹ್ಮಿ, ಹಾಗಲಕಾಯಿ, ಬೇವು, ಬೆಳ್ಳುಳ್ಳಿ, ಬಳ್ಳಿ ಅರಿಶಿನ ಇನ್ನು ಮುಂತಾದ ಸಸ್ಯಗಳನ್ನು ಪ್ರತ್ಯಕ್ಷಿಕೆಯಲ್ಲಿ ಪರಿಸಯಿಸಿದ್ದಾರೆ.

ಹೈನುಗಾರಿಕೆಯ ಇಲಾಖೆ : ಈ ಬಾರಿ ಕೃಷಿ ಮತ್ತು ಕೈಗಾರಿಕಾ ವಸ್ತು ಪ್ರದರ್ಶನದಲ್ಲಿ ಹೈನುಗಾರಿಕೆಗೂ ಒತ್ತನು ನೀಡಿದ್ದು, ಜೀವಂತವಾಗಿರುವ ವಿವಿಧ ರೀತಿಯ ಸಾಕು ಪ್ರಾಣಿಗಳನ್ನು ಪ್ರತ್ಯಕ್ಷಿಕೆಯ ಪ್ರದರ್ಶನದಲ್ಲಿ ಇರಿಸಲಾಗಿದೆ. ದೇಶದಲ್ಲಿರುವ ವಿವಿಧ ರೀತಿಯ ತಳಿಗಳನ್ನು ಪರಿಸುವ ಪ್ರಯತ್ನವನ್ನು ಮಾಡಿದ್ದಾರೆ. ಮೇಕೆ, ಕುರಿ, ಹಸು ಸೇರಿದಂತೆ ಕೋಳಿ, ಪಕ್ಷಿಗಳನ್ನು ಪ್ರದರ್ಶನದಲ್ಲಿರಿಸಲಾಗಿದೆ. ಹಾಗೂ ಪ್ರಾಣಿಗಳ ಬಿಡಿ ಭಾಗಗಳನ್ನು ಮಕ್ಕಳಿಗೆ ಪರಿಚಯಿಸುವ ಸಲುವಾಗಿ, ಅವುಗಳ ಉಪಯೋಗವನ್ನು ತಿಳಿಸುವ ಸಲುವಾಗಿ ಪ್ರದರ್ಶಿಸಲಾಗಿದೆ.

ರೇಷ್ಮೇ ಇಲಾಖೆ ಸೇರಿದಂತೆ ಒಟ್ಟಾರೆ ಸರ್ಕಾರಿ ಇಲಾಖೆ ಮಳಿಗೆಗೆಳು 26, ಖಾಸಗಿ ವಾಣಿಜ್ಯ ಮಳಿಗೆಗೆಗಳು 180 ಒಟ್ಟು 206 ಮಳಿಗೆಗಳಿಗೆ ಅವಕಾಶ ಕಲ್ಪಿಸಲಾಗಿದೆ.

ಇದೇ ವಸ್ತುಪ್ರದರ್ಶನದ ಆವರಣದಲ್ಲಿ ಪ್ರತಿದಿನ ಸಂಜೆ ನಾಟಕ , ಸಂಗೀತ ಕಾರ್ಯಕ್ರಮ ಸೇರಿದಂತೆ ಆನೇಕ ಸಾಂಸ್ಕೃತಿಕ ಕಾರ್ಯಕ್ರಮಗಳು ಗಮನ ಸೆಳೆಯುತ್ತವೆ. ಕೆಲವು ದಿನಗಳಂತೂ ಈ ಆವರಣದೊಳಗೆ ಅಪಾರ ಸಂಖ್ಯೆಯಲ್ಲಿ ವೀಕ್ಷಕರು, ಪ್ರೇಕ್ಷಕರು, ಭಕ್ತಾದಿಗಳು ಆಗಮಿಸುತ್ತಾರೆ. ತುಮಕೂರು ಮಾತ್ರವಲ್ಲದೆ, ಬೇರೆ ಬೇರೆ ಕಡೆಗಳಿಂದಲೂ ಇಲ್ಲಿಗೆ ಆಗಮಿಸಿ ವಸ್ತುಪ್ರದರ್ಶನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೋಡಿ ಮನಸಾರೆ ಖುಷಿಪಟ್ಟು ಹೋಗುವ ಮಂದಿ ಅದೆಷ್ಟೋ ಲೆಕ್ಕವಿಲ್ಲ.

ಸಿದ್ಧಗಂಗಾ ಆಸ್ಪತ್ರೆಯಿಂದ ಆರೋಗ್ಯ ಪ್ರದರ್ಶಿನಿ

ಈ ಬಾರಿ ವಸ್ತು ಪ್ರದರ್ಶನದಲ್ಲಿ ವಿಶೇಷವಾಗಿ ಸಿದ್ಧಗಂಗಾ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಆರೋಗ್ಯ ಪ್ರದರ್ಶನಿ ಮಳಿಗೆ ತೆರೆದು, ಆಸ್ಪತ್ರೆ ಸಾಧನೆ, ಚಿಕಿತ್ಸಾ ಸೌಲಭ್ಯಗಳ ಪ್ರದರ್ಶನ ಮಾಡುತ್ತಿರುವುದಲ್ಲದೆ ಸ್ಥಳದಲ್ಲೇ ಉಚಿತ ತಪಾಸಣೆ ಅವಕಾಶ ಕಲ್ಪಿಸಿರುವುದು ಗಮನಸೆಳೆದಿದೆ.

ರಾಸುಗಳ ಜಾತ್ರೆ ಬಲು ಆಕರ್ಷಣಿಯ ;

ತುಮಕೂರು ಸಿದ್ದಗಂಗಾಮಠದ ರಾಸುಗಳ ಜಾತ್ರೆಗೆ ಕರ್ನಾಟಕ ಮಾತ್ರವಲ್ಲದೇ ಹೊರ ರಾಜ್ಯಗಳಿಂದಲೂ ರಾಸುಗಳು ಬರುತ್ತವೆ. ನೋಡಲು ಸುಂದರವಾದ ರಾಸು ಜೋಡಿಗಳಿಗೆ ಲಕ್ಷ ಲಕ್ಷ ಕೊಟ್ಟು ಖರೀದಿಸುವವರೂ ಇದ್ದಾರೆ. ಇಲ್ಲಿಗೆ ಮಾರಾಟ ಮಾಡಲು ಬರುವವರು ಅದೆಷ್ಟೋ ರೈತರು. ಅದೇ ರೀತಿ ಖರೀದಿ ಮಾಡಲು ಕೂಡ ಜನ ನಾನಾ ಭಾಗಗಳಿಂದ ಆಗಮಿಸುವುದು ಇಲ್ಲಿನ ವಿಶೇಷ.

ಪ್ರತಿ ವರ್ಷ ನಾವು ಸಿದ್ದಗಂಗಾ ಜಾತ್ರೆಯ ದನಗಳ ಪರಿಷೆಗೆ ಬರುತ್ತೇವೆ. ಕರ್ನಾಟಕದ ನಾನಾ ಭಾಗಗಳಿಂದ ರೈತರು ಇಲ್ಲಿ ರಾಸುಗಳನ್ನು ಖರೀದಿಸಲು ಬರುತ್ತಾರೆ. ನಮ್ಮ ರಾಸುಗಳಿಗೆ ಉತ್ತಮ ಬೆಲೆಯೂ ಇಲ್ಲಿ ಸಿಗುತ್ತದೆ. ಈ ಬಾರಿಯೂ ಉತ್ತಮ ವ್ಯವಸ್ಥೆ ಮಾಡಿದ್ದಾರೆ ಎಂದು ರೈತರೊಬ್ಬರು ಹೇಳಿಕೊಂಡರು.

ಸಿದ್ದಗOಗೆಯ ಲಿಂಗೈಕ್ಯ ಡಾ. ಶ್ರೀಶಿವಕುಮಾರಸ್ವಾಮೀಜಿಗಳ ದೂರದೃಷ್ಟಿಯ ಫಲವಾದ ಕೃಷಿ ಮತ್ತು ಕೈಗಾರಿಕಾ ವಸ್ತುಪ್ರದರ್ಶನ, ರೈತರಿಗೆ, ಕೈಗಾರಿಕೋದ್ಯಮಿಗಳಿಗೆ ಮಾಹಿತಿ ಒದಗಿಸುವ ಒಂದು ವೇದಿಕೆಯಾಗಿದೆ. ಸಿದ್ಧಗಂಗಾ ಜಾತ್ರೆಯ ವಿಶೇಷತೆ ಎಂದರೆ ಅದು ವಸ್ತು ಪ್ರದರ್ಶನ, ಖಾಸಗಿ ಸಂಸ್ಥೆಯೊAದು ಸರಕಾರದ ಸಹಕಾರದೊಂದಿಗೆ ಇಷ್ಟೊಂದು ಸುಧೀರ್ಘ ಕಾಲದವರೆಗೆ ವಸ್ತು ಪ್ರದರ್ಶನವನ್ನು ನಡೆಸಿಕೊಂಡು ಬರಲಾಗುತ್ತಿದೆ. ಸಿದ್ಧಗಂಗ ಮಠ ಶ್ರೀ ಸಾಮಾನ್ಯನಿಗೆ ಕೇವಲ ಧಾರ್ಮಿಕ ಉತ್ಸವಗಳನ್ನೇ ನೀಡದೆ, ಕೃಷಿ, ಕೈಗಾರಿಕೆಗೆ ಪೂರಕ ಮಾಹಿತಿಗಳನ್ನು ಒದಗಿಸುವ ಒಂದು ವೇದಿಕೆಯಾಗಿ ಪರಿವರ್ತನೆಯಾಗಿದೆ ಎಂದು ಸಿದ್ದಗಂಗಾ ಮಠಾಧ್ಯಕ್ಷರು ಶ್ರೀ ಸಿದ್ದಲಿಂಗಸ್ವಾಮೀಜಿ ಅವರು ತಿಳಿಸಿದರು.

Leave a Reply

Your email address will not be published. Required fields are marked *