ತುಮಕೂರು:- ರಾಜ್ಯ ಸರ್ಕಾರದ ಜಾತಿಗಣತಿಗೆ ಬೆಲೆ ಇಲ್ಲ. ಅದು ಹೊರಟು ಹೊಗಿದೆ. ಜಾತಿಗಣತಿ ಮಾಡೋ ಪವರ್ ಇರೋದು ಕೇಂದ್ರ ಸರ್ಕಾರಕ್ಕೆ. ರಾಜ್ಯ ಸರ್ಕಾರದ ವರದಿ ಅದು ತನ್ನಿಂದ ತಾನಾಗಿ ನಿಷ್ಕ್ರಿಯವಾಗುತ್ತೆ ಎಂದು ಕೇಂದ್ರ ಸಚಿವ ವಿ. ಸೋಮಣ್ಣ ತಿಳಿಸಿದ್ದಾರೆ.

ಒನ್ ನೇಷನ್, ಒನ್ ಎಲೆಕ್ಷನ್ ಮಹಿಳಾ ಮೀಸಲಾತಿ ಬಿಲ್, ಜಾತಿಗಣತಿ ಇವೆಲ್ಲಾ ಕೇಂದ್ರ ಸರ್ಕಾರದ ಮೋದಿ ಅವರ ದೂರದೃಷ್ಟಿಯ ಚಿಂತನೆ. ರಾಜ್ಯ ಸರ್ಕಾರ ಗಾಳಿಯಲ್ಲಿ ಗುಂಡು ಹೊಡೆಯೊದನ್ನ ಬಿಟ್ಟು, ರಾಜ್ಯದ ಅಭಿವೃದ್ಧಿಗೆ ಶ್ರಮಿಸೋದು ಉತ್ತಮ.
ಪ್ರಧಾನಿ ಮೋದಿ ಅವರ ಯಾವುದೇ ಕಾರ್ಯಕ್ರಮಗಳು ದೂರದೃಷ್ಟಿಯಿಂದ ತುಂಬಿದೆ. ಮತ್ತೆ ದೇಶದ ಅಭಿವೃದ್ಧಿಗೆ ಪೂರಕವಾಗಿದೆ. ಜಾತಿ ಗಣತಿ ಮಾಡೋದ್ರಿಂದ ಎಲ್ಲರಿಗೂ ಒಂದು ಸಂದೇಶ ತಲುಪುತ್ತದೆ. ಈ ದೇಶ ಜಾತ್ಯಾತೀತ ರಾಷ್ಟ್ರ, ಸುಮಾರು ವರ್ಷಗಳಿಂದ ಜಾತಿಗಣತಿ ಮಾಡಬೇಕು ಅಂತಿತ್ತು ಹಾಗಾಗಿ ಮಾಡ್ತಿದ್ದೇವೆ. ಕಾಂಗ್ರೆಸ್ ನವರು ಇಷ್ಟು ವರ್ಷ ಇದ್ರರಲ್ಲ.
ಅವರು ಯಾಕೆ ಜಾತಿಗಣತಿ ಮಾಡಲಿಲ್ಲ. ದೇಶದ ಜ್ವಲಂತ ಸಮಸ್ಯೆಗಳಿಗೆ ಮೋದಿ ಅವರು ಪರಿಹಾರ ಕಂಡುಕೊಂಡಿದ್ದಾರೆ.
25 ಕೋಟಿ ಕುಟುಂಬವನ್ನ ಮೇಲೆಕ್ಕೆ ತಂದಿದ್ದಾರೆ ಎಂದರು.
ಕಾಂಗ್ರೆಸ್ ನಿಂದ ಮೋದಿ ವಿರುದ್ಧದ ಗಾಯಬ್ ಪೊಸ್ಟ್ ವಿಚಾರಕ್ಕಾಗಿ ಮಾತನಾಡಿ, ಕಾಂಗ್ರೆಸ್ ನವರು ಸಂಸ್ಕೃತಿ ಇಲ್ಲದವರು. ಹಂಗೆ ಮಾಡಿದ್ದಾರೆ. ದೇಶದ ಅರಿವಿಲ್ಲದವರಿಗೆ, ಇಂತಹ ಹುಚ್ಚರನ್ನ ಕಟ್ಟಿಕೊಂಡು ನಾವೇನು ಮಾಡೋಕೆ ಆಗಲ್ಲ. ಮೇರೂ ನಾಯಕನನ್ನ ಕಾಂಗ್ರೆಸ್ ನವರು ಅಪಮಾನ ಮಾಡೋದು ಸರಿಯಲ್ಲ. ಕಾಂಗ್ರೆಸ್ ನಲ್ಲಿ ಕೀಳರಿಮೆ ಹೋಗುವ ತನಕ ಅವರು ಉದ್ದಾರ ಆಗಲ್ಲ ಎಂದು ಗುಡುಗಿದ್ದಾರೆ.