ತುಮಕೂರು: ವಿಶ್ವವಿದ್ಯಾನಿಲಯದ ನೂತನ ಬಿದರಕಟ್ಟೆ ಕ್ಯಾಂಪಸ್ ʼಜ್ಞಾನಸಿರಿʼಯಲ್ಲಿ ನಿರ್ಮಾಣಗೊಂಡಿರುವ ʼಉಪ ಪ್ರಾದೇಶಿಕ ವಿಜ್ಞಾನ ಕೇಂದ್ರʼದ ಉದ್ಘಾಟನೆಯನ್ನು ಗೃಹ ಸಚಿವ ಡಾಕ್ಟರ್ ಜಿ ಪರಮೇಶ್ವರ್, ಸಚಿವರು ಬೋಸರಾಜು ಉದ್ಘಾಟನೆ ಮಾಡಿದರು.

ಕರ್ನಾಟಕ ಸರ್ಕಾರ ಕರ್ನಾಟಕ ವಿಭಾಗ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರೋತ್ಸಾಹಕ ಸೊಸೈಟಿ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರದ ಲೋಕಾರ್ಪಣಾ ಸಮಾರಂಭ ಬಳ ಅದ್ದೂರಿಯಾಗಿ ತುಮಕೂರು ವಿಶ್ವವಿದ್ಯಾನಿಲಯದ ಜ್ಞಾನ ಸಿರಿ ಕ್ಯಾಂಪಸ್ ಆವರಣ ಬೀದರಕಟ್ಟೆಯಲ್ಲಿ ನಡೆಯಿತು.
ಗೃಹ ಸಚಿವ ಡಾಕ್ಟರ್ ಜಿ ಪರಮೇಶ್ವರ್ ಮಾತನಾಡಿ ವಿಜ್ಞಾನಕ್ಕೆ ಸಂಬAಧಪಟ್ಟ ಹಾಗೆ ವಿಜ್ಞಾನದ ಒಂದು ಉಪ ಕೇಂದ್ರವನ್ನ ಇದನ್ನ 2016 ರಲ್ಲಿ ಇದು ಮಂಜೂರು ಆಗಿರುವಂತಹದ್ದು ನಂತರ ೨೦೧೭ಕ್ಕೆ ಹಣವನ್ನು ಬಿಡುಗಡೆ ಮಾಡಿ ಸುಮಾರು 9ಕೋಟಿ ಅಷ್ಟು ಎಸ್ಟಿಮೆಂಟ್ ಆಗಿದ್ದು ಅದನ್ನು ಈಗ ನಾಲ್ಕು ಕೋಟಿ ಹಣವನ್ನು ಬಿಡುಗಡೆ ಮಾಡಿ ಈ ಒಂದು ಕೇಂದ್ರವನ್ನ ಉಪ ಕೇಂದ್ರವನ್ನ ಪ್ರಾರಂಭ ಮಾಡಬೇಕು ಇನ್ನು ಹೆಚ್ಚಿನ ಮಟ್ಟದಲ್ಲಿ ಬೆಳೆಸಬೇಕು ಎಂದು ಡಾಕ್ಟರ್ ಜಿ ಪರಮೇಶ್ವರ್ ಹೇಳಿದರು..
ಶಾಸಕ ಸುರೇಶ್ ಗೌಡ ಮಾತನಾಡಿ ಪರಮೇಶ್ವರ್ ಅವರು ಸೈನ್ಸ್ ಅಂಡ್ ಟೆಕ್ನಾಲಜಿ ಬಗ್ಗೆ ಅವರಿಗೆ ತುಂಬಾ ವಿಸ್ತಾರವಾದ ಜ್ಞಾನ ಇದೇ ಆದರೆ ಸರ್ಕಾರ ಅವರನ್ನು ಹೋಂ ಮಿನಿಸ್ಟರ್ ಮಾಡಿದ್ದಾರೆ. ಅವರ ನಿಜವಾಗಲೂ ಕೂಡ ಅಸೆಂಬ್ಲಿಯಲ್ಲಿ ಅವರು ಮಾತನಾಡುವ ರೀತಿ ಇರಬಹುದು ಅತ್ಯಂತ ವಿಷಯವನ್ನು ಹಾಳವಾಗಿ ಅಧ್ಯಯನ ಮಾಡಿ ಮಂಡಿಸ್ತಾರೆ. 15ನೇ ಶತಮಾನದಲ್ಲಿ ವಿಜ್ಞಾನದಲ್ಲಿ ಕಂಡು ಹಿಡಿದಂತಹ ಗೆಲಿಲಿಯೋ ಇರಬಹುದು, ಸೊನ್ನೆ ಕಂಡುಹಿಡಿದOತಹ ಆರ್ಯಭಟ ಇರಬಹುದು ಎಲ್ಲರನ್ನ ತುಂಬಾ ಅದ್ಭುತಗಳಾಗಿ ವಿದ್ಯಾರ್ಥಿಗಳಿಗೆ ಬಹಳ ಸ್ಪಷ್ಟವಾಗಿ ನಿಖರವಾಗಿ ಆಳವಾಗಿ ಹೇಳಿದಂತಹ ವಿಚಾರವನ್ನು ಪ್ರಸ್ತಾಪ ಮಾಡಿದರು. ಡಾ. ಜಿ ಪರಮೇಶ್ವರ್ ರವರು ಮುಂದಿನ ದಿನಗಳಲ್ಲಿ ಅವರಿಗೆ ಆಸೆ ಇದೆ ಒಂದು ದಿನ ರಾಜ್ಯದ ಮುಖ್ಯಮಂತ್ರಿ ಆಗ್ಬೇಕು ಎನ್ನುವುದು, ಆದರೆ ತುಮಕೂರಿನಿಂದ ಯಾರು ಸಿಎಂ ಆಗಿಲ್ಲ ಆದರೆ ಅವರಿಗೆ ನಾನು ಅಭಿನಂದಿಸುತ್ತೇನೆ ಎಂದು ಶಾಸಕ ಸುರೇಶ್ ಗೌಡ ಹೇಳಿದರು..
ಸಚಿವರಾದ ಬೋಸರಾಜು ಮಾತನಾಡಿ ಸಿದ್ದರಾಮಯ್ಯನವರ ನೇತೃತ್ವದ ಸರ್ಕಾರ ಹಲವಾರು ಕಾರ್ಯಕ್ರಮಗಳನ್ನ ಹಮ್ಮಿಕೊಂಡಿದ್ದಾರೆ . ಮೌಡ್ಯ ಕಂದಾಚಾರವನ್ನು ಮುಕ್ತಮಾಡಬೇಕು. ನಾಡನ್ನು ಕಟ್ಟುವ ಆಶಯವನ್ನು ನಮ್ಮೆಲ್ಲರದ್ದು ಆಗಿದೆ. ವಿಜ್ಞಾನ ತಂತ್ರಜ್ಞಾನ ನಾಡಿನಲ್ಲಿ ಆರ್ಥಿಕ ಬೆಳವಣಿಗೆ ಕಾರಣ ಮಾಡಬೇಕು ಅಂತ ಎಲ್ಲಾ ತಾಂತ್ರಿಕ ಹಾಗೂ ವಿಜ್ಞಾನ ರಾಷ್ಟ್ರದಲ್ಲಿ ಮತ್ತು ರಾಜ್ಯದಲ್ಲಿ ಅನೇಕ ಕಾರ್ಯಕ್ರಮಗಳು ಈ ರಾಜ್ಯದ ಮುಖ್ಯಮಂತ್ರಿಗಳು ಕೇಂದ್ರ ಸರ್ಕಾರ ಸಂಯೋಗದೊOದಿಗೆ ಅನೇಕ ವಿವಿಧ ರಾಜ್ಯಗಳಲ್ಲಿ ಹಮ್ಮಿಕೊಂಡಿದ್ದಾರೆ.. ಬೆಂಗಳೂರಿನಲ್ಲಿ 600 ಸೈನ್ಸ್ ಸಿಟಿ ಯನ್ನ ಪ್ರಾರಂಭಿಸುವುದಕ್ಕೆ ನಮ್ಮ ಸರ್ಕಾರ ಮಾಡುತ್ತಿದೆ ಎಂದು ಹೇಳಿದರು.

ತುಮಕೂರು ವಿವಿ ಕುಲಪತಿಯಾದ ವೆಂಕಟೇಶ್ವರಲು ಮಾತನಾಡಿ ಗ್ರಾಮೀಣ ಭಾಗದಿಂದ ಬರುವಂತಹ ಅನೇಕ ವಿದ್ಯಾರ್ಥಿಗಳ ಶೈಕ್ಷಣಿಕ ಅಗತ್ಯಗಳನ್ನ ಪೂರೈಸಲು ಸ್ಥಾಪಿತವಾದ ವಿಶ್ವವಿದ್ಯಾನಿಲಯ ತನ್ನ ಶೈಕ್ಷಣಿಕ ಹಾಗೂ ಸಂಶೋಧನಾತ್ಮಕ ಕಾರ್ಯ ಚಟುವಟಿಕೆಗಳನ್ನ ವಿಸ್ತರಣೆಗೆ ವಿಶಾಲ ಕ್ಯಾಂಪಸ್ ಅಗತ್ಯವಾಗಿದ್ದು ವಿಶ್ವವಿದ್ಯಾನಿಲಯವು ಸಲ್ಲಿಸಿದ ಪ್ರಸ್ತಾವನೆಯನ್ನು ಪುರಸ್ಕರಿಸಿದ ರಾಜ್ಯ ಸರ್ಕಾರವು 2016ರಲ್ಲಿ ಬಿದರಕಟ್ಟೆಯ 241 ಎಕರೆಯನ್ನ ವಿಶ್ವವಿದ್ಯಾನಿಲಯಕ್ಕೆ ಮಂಜೂರು ಮಾಡಿದ್ದು ಸಂತೋಷ ವಿಚಾರ ಎಂದು ಹೇಳಿದರು
ಈ ಸಂದರ್ಭದಲ್ಲಿ ಗೃಹಸಚಿವ ಡಾಕ್ಟರ್ ಜಿ ಪರಮೇಶ್ವರ್, ಶಾಸಕ ಸುರೇಶ್ಗೌಡ, ಸಚಿವರು ಬೋಸರಾಜು, ಕಲಸಚಿವರಾದ ವೆಂಕಟೇಶ್ವರಲು,ಕುಲಸಚಿವೆ ನಹಿದ ಜಮಂ ಜಮಂ, ಕಾಲೇಜಿನ ಶಿಕ್ಷಕರು, ವಿದ್ಯಾರ್ಥಿಗಳು ಇನ್ನೂ ಮುಂತಾದವರು ಹಾಜರಿದ್ದರು..