ತಿಪಟೂರು: ಒಳಮೀಸಲಾತಿಗೆ ಒತ್ತಾಯಿಸಿ ಸೆಪ್ಟೆಂಬರ್ 21ರಂದು ತಿಪಟೂರಿನಲ್ಲಿ ಕರ್ನಾಟಕ ಮಾದಿಗ ದಂಡೋರ ಹೋರಾಟ ಸಮಿತಿಯಿಂದ ಬೃಹತ್ ತಮಟೆ ಚಳುವಳಿ ಹಮ್ಮಿಕೊಳ್ಳಲಾಗಿದೆ.
ನಗರದ ಪ್ರವಾಸಿ ಮಂದಿರದಲ್ಲಿ ಆಯೋಜಿಸಿದ ಪತ್ರಿಕಾ ಘೋಷ್ಠಿ ಉದೇಶಿಸಿ ಮಾತನಾಡಿದ ಮಾಜಿ ಜಿಲ್ಲಾಪಂಚಾಯ್ತಿ ಸದಸ್ಯ ಕೆ.ಎಂ ಶಾಂತಪ್ಪ, ಸಿದ್ದರಾಮಯ್ಯ ನವರ ನೇತೃತ್ವದ ರಾಜ್ಯಸರ್ಕಾರ ಸುರ್ಪೀಮ್ ಕೋರ್ಟ್ ನಿರ್ದೇಶನದಂತೆ ಒಳಮೀಸಲಾತಿ ಜಾರಿಗೊಳಿಸಬೇಕು.
3ದಶಕಗಳ ಹೋರಾಟದ ಫಲವಾಗಿ ಸಾಮಾಜಿಕ ನ್ಯಾಯದ ಪರವಾಗಿರುವ ಒಳಮೀಸಲಾತಿ ಜಾರಿಗೆ ಸುರ್ಪೀಂ ಕೋರ್ಟ್ ಅನುಮತಿ ನೀಡಿದೆ. ರಾಜ್ಯಸರ್ಕಾರಗಳು ಒಳಮೀಸಲಾತಿ ಜಾರಿಗೆ ಅಧಿಕಾರ ಹೊಂದಿರುವುದಾಗಿ ತಿಳಿಸಿದೆ ,ಎಂದು ಕೋರ್ಟ್ ಆದೇಶ ನೀಡಿದರೂ ಸಹ , ಸಾಮಾಜಿಕ ನ್ಯಾಯದ ಪರ ಎಂದು ರಾಜ್ಯದ ಜನ ನಂಬಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಒಳಮೀಸಲಾತಿ ಜಾರಿಗೆ ಮೀನಾಮೇಷ ಎಣಿಸುತ್ತಿರುವುದು ಖಂಡನೀಯ. ಸರ್ಕಾರದ ದಲಿತ ವಿರೋಧಿ ನೀತಿ ಖಂಡಿಸಿ ಸೆಪ್ಟೆಂಬರ್ 21ರಂದು ತಿಪಟೂರಿನಲ್ಲಿ ಬೃಹತ್ ತಮಟೆ ಚಳುವಳಿ ಹಮ್ಮಿಕೊಂಡಿದು.ನಗರದ ಡಾ//ಬಿ.ಆರ್ ಅಂಬೇಡ್ಕರ್ ವೃತ್ತದಿಂದ ಹೊರಟ ಪ್ರತಿಭಟನಾ ಮೆರವಣಿಗೆ ತಾಲ್ಲೋಕು ಕಚೇರಿಮುಂದೆ ಪ್ರತಿಭಟನೆ ನಡೆಸಿ ಉಪವಿಭಾಗಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿಪತ್ರಸಲ್ಲಿಸಿ,ನಂತರ ತಿಪಟೂರು ಶಾಸಕ ಕೆ.ಷಡಕ್ಷರಿಯವರಿಗೆ ಮನವಿ ಪತ್ರಸಲ್ಲಿಸಲಾಗುವುದು ಎಂದು ತಿಳಿಸಿದರು.
ಪತ್ರಿಕಾ ಘೋಷ್ಠಿಯಲ್ಲಿ ಉಪಸ್ಥಿತರಿದ ಕುಪ್ಪಾಳು ರಂಗಸ್ವಾಮಿ ಮಾತನಾಡಿ ದಲಿತರ ಪರವಾದ ಕಾಂಗ್ರೇಸ್ ಸರ್ಕಾರ ಎಂದು ಬಿಂಬಿಸಿಕೊಳ್ಳುತ್ತಿದ, ರಾಜ್ಯಸರ್ಕಾರ ದಲಿತವಿರೋದಿಯಾಗಿ ವರ್ತಿಸುತ್ತದೆ,ಒಳಮೀಸಲಾತಿ ಜಾರಿಗೊಳಿಸಲು,ಆಂದ್ರಪ್ರದೇಶ,ತೆಲಂಗಾಣ, ಪಂಜಾಬ್ ,ಹರಿಯಾಣ, ಸರ್ಕಾರಗಳು ಮುಂದಾಗಿವೆ, ಆದರೆ ಚುನಾವಣಾ ಪೂರ್ವದಲ್ಲಿ ಒಳಮೀಸಲಾತಿ ಜಾರಿಗೊಳಿಸುವ ಭರವಣೆ ನೀಡಿದ ರಾಜ್ಯಸರ್ಕಾರ, ಅಧಿಕಾರಕ್ಕೆ ಬಂದ ತಕ್ಷಣ ಮಾತಿಗೆ ತಪ್ಪಿದೆ,ಭೇಷರತ್ ಒಳಮೀಸಲಾತಿ ಜಾರಿಗೊಳಿಸದಿದರೆ ರಾಜ್ಯಸರ್ಕಾರದ ವಿರುದ್ದ ಉಗ್ರಹೋರಾಟ ಮಾಡಬೇಕಾಗುತ್ತದೆ, ಮುಂದಿನ ಚುನಾವಣೆಗಳಲ್ಲಿ ಮಾದಿಗ ಜನಾಂಗದ ಶಕ್ತಿಯನ್ನ ತೋರಿಸಬೇಕಾಗುತ್ತದೆ, . ರಾಜ್ಯಸರ್ಕಾರ ಒಳಮೀಸಲಾತಿ ಜಾರಿಗೊಳಿಸಬೇಕು ಎಂದು ತಿಳಿಸಿದರು
ಪೆದ್ದಿಹಳ್ಳಿ ನರಸಿಂಹಯ್ಯ ಮಾತನಾಡಿ ರಾಜ್ಯಸರ್ಕಾರ ಒಳಮೀಸಲಾತಿ ಜಾರಿಗೊಳಿಸಿ ಬದ್ದತೆ ಪ್ರದರ್ಶನ ಮಾಡಬೇಕು , ಚುನಾವಣೆಯಲ್ಲಿ ಒಳಮೀಸಲಾತಿ ಜಾರಿಗೊಳಿಸುವ ಮಾತನಾಡಿ ಭರವಣೆ ನೀಡಿದ ಸಿದ್ದರಾಮಯ್ಯ. ಮಲ್ಲಿಕಾರ್ಜುನ ಖರ್ಗೆ. ಜಿ.ಪರಮೇಶ್ವರ್.ಮಹದೇವಪ್ಪ ಚುನಾವಣೆ ನಂತರ ಮಾತು ತಪ್ಪಿದು. ಮಾದಿಗ ಜನಾಂಗದ ವಿರೋಧಿಗಳಾಗಿ ವರ್ತಿಸುತ್ತಿದ್ದಾರೆ.ನಾವೂ,ಯಾರ ಆಸ್ತಿಯನೂ ಕೇಳಿಲ್ಲ ಸಂವಿಧಾನ ಬದ್ದವಾಗಿ ನಮಗೆ ಅನ್ಯಾಯವಾಗಿರು. ಮೀಸಲಾತಿಯಲ್ಲಿ ನ್ಯಾಯಬದ್ದವಾಗಿ ಫಲದೊರೆತಬೇಕಾದರೆ ಒಳಮೀಸಲಾತಿ ಜಾರಿಯಾಗ ಬೇಕು ನಮ್ಮ ಪಾಲಿನ ಹಕ್ಕು ನಮಗೆ ದೊರೆಯಬೇಕು .ನಮ್ಮ ಹಕ್ಕುನಮಗೆ ದೊರೆಯದಿದರೆ, ಯಾವುದೇ ತ್ಯಾಗಕ್ಕೂ ಹಿಂಜರಿಯುವುದಿಲ್ಲ. ಕೂಡಲೇ ಒಳಮೀಸಲಾತಿ ಜಾರಿಗೊಳಿಸಬೇಕು ಸರ್ಕಾರ ನಮ್ಮ ಹೋರಾಟ ನಿರ್ಲಕ್ಷ್ಯ ಮಾಡಿದರೆ. ರಾಜ್ಯದ ಪ್ರತಿತಾಲ್ಲೊಕು ಕೇಂದ್ರದಲ್ಲೂ ಹೋರಾಟ ನಡೆಸಲಾಗುವುದು. ತಿಪಟೂರಿಲ್ಲಿ ನಡೆಸುತ್ತಿರು ಬೃಹತ್ ತಮಟೆ ಚಳುವಳಿಯಲ್ಲಿ ಸಮಾಜದ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಹೋರಾಟ ಯಶಸ್ವಿಗೊಳಿಸಬೇಕು ಎಂದು ತಿಳಿಸಿದರು ಪತ್ರಿಕಾ ಘೋಷ್ಠಿಯಲ್ಲಿ ಮುಖಂಡರಾದ ಗಾಂಧಿನಗರ ಬಸವರಾಜು. ಬಿಳಿಗೆರೆ ಚಂದ್ರಶೇಖರ್.ಲಿಂಗದೇವರು. ಈಚನೂರು ಸೋಮಶೇಖರ್.ಟಿ.ಕೆ ಕುಮಾರ್ ಮುಂತ್ತಾದವರು ಉಪಸ್ಥಿತರಿದರು