ತುಮಕೂರು:- ಕಾಶ್ಮೀರದಲ್ಲಿ ಹಿಂದೂಗಳ ಮೇಲೆ ಬಯೋತ್ಪಾದಕರ ದಾಳಿ ತುಂಬಾ ನೋವಿನ ಸಂಗತಿಯಾಗಿದೆ ಎಂದು ಶ್ರೀ ಸಿದ್ಧಗಂಗಾ ಮಠದ ಮಠಾಧ್ಯಕ್ಷರಾದ ಶ್ರೀ ಸಿದ್ಧಲಿಂಗಸ್ವಾಮೀಜಿ ಬೇಸರ ವ್ಯಕ್ತಪಡಿಸಿದ್ದಾರೆ.

ದಾಳಿಯಾಗಿರುವ ಪ್ರಕರಣ ಬಹಳ ನೋವಿನ ಸಂಗತಿ. ಕಾಶ್ಮೀರ ನಮ್ಮ ದೇಶದ ಅವಿಭಾಜ್ಯ ಅಂಗವಾಗಿರುವಂತಹದ್ದು, ಯಾವುದೇ ಇರಲಿ ಏನೇ ಆಗಲಿ.
ಕಾಶ್ಮೀರದ ಸೊರ್ಸ್ ಎನಂದ್ರೆ ಪ್ರವಾಸಿಗರು. ಅಲ್ಲಿಗೆನಾದರು ಪ್ರವಾಸಿಗರು ಹೋಗದೆ ಹೋದರೆ ಬಹುತೇಕ ಅಲ್ಲಿನ ಜನರ ಜೀವನ ಅತಂತ್ರವಾಗಿದೆ ಎಂದಿದ್ದಾರೆ.
ನಾನು ಕೇಳಿದ ಹಾಗೇ ಅಲ್ಲಿಯ ಪ್ರತಿಯೊಬ್ಬ ಜನರು ಪ್ರವಾಸಿಗರಿಗೆ ತುಂಬಾ ಗೌರವ ಕೊಡುತ್ತಾರೆ.
ಹಿಂದು ಮುಸಲ್ಮಾನರಾದರು ಪ್ರವಾಸಿಗರಿಗೆ ತುಂಬಾ ಗೌರವ ಕೊಡುತ್ತಾರೆ. ಇದು ನಡೆದಿರುವ ಘಟನೆ ಏನಂದ್ರೆ,
ಆತಂಕವಾದಿಗಳು ಟೆರೆರಿಸ್ಟ್ ಗಳು ಹೇಯ ಹಾಗೂ ಅಮಾನುಷ ಕೃತ್ಯವನ್ನ ಮೆರೆದಿದ್ದಾರೆ.
ಇದು ನಿಜವಾಗಲು ಖಂಡನಿಯವಾಗಿರುವಂತಹದ್ದು.
ಇದನ್ನ ನಾವೆಲ್ಲರು ಖಂಡಿಸಬೇಕಾಗಿರುವಂತಹದ್ದು.
ಕೊಲೆ ಹಿಂಸೆ ಯಾವುದೇ ಆಗಲಿ, ಯಾರಿಗೆ ಆಗಲಿ.
ನಮ್ಮ ದೇಶದಲ್ಲಿ ಆಗಬಾರದು.
ನಮ್ಮ ದೇಶ ಯಾವತ್ತು ಶಾಂತಿಯನ್ನ ಸಹೋದರಭಾವವನ್ನ, ಪ್ರೀತಿಯನ್ನ ಹಂಚುವಂತಹ ದೇಶ ನಮ್ಮ ಭಾರತ.
ಈಗ ಆಗಿರುವಂತಹ ಘಟನೆಯಿಂದ
ನೊಂದ ಜೀವಗಳು.
ಅವರ ಕಣ್ಣೆದುರಿಗೆ ಕೃತ್ಯ ಎಸಗಿದ್ದಾರೆ. ಅದನ್ನ ಹೇಳೋದಿಕ್ಕೆ ಕಷ್ಟ. ತನ್ನ ಎದುರಿಗೆ ತನ್ನ ಪತಿಯನ್ನ ಕೊಲೆ ಮಾಡ್ತಿದ್ದಾರೆ ಅಂದ್ರೆ ಜೀವ ಹೇಗೆರುತ್ತೆ. ಆ ಜೀವ ಇದ್ದರು ಒಂದೇ ಇಲ್ಲದಿದ್ದರು ಒಂದೇ. ಆ ಸಮಯದಲ್ಲಿ ಅವರು ನಮ್ಮನ್ನು ಕೊಂದು ಬಿಡಿ ಅಂತ ಕೇಳಿದ್ದಾರೆ.
ಸಹಜವಾಗಿ ಅವರಿಗೆ ಅನ್ಸುತ್ತೆ.
ನಾವು ಬದುಕಿದ್ದು ಏನು ಪ್ರಯೋಜನ ಅಂತ.
ಆದ್ದರಿಂದ ಆ ದೃಶ್ಯವನ್ನ ಆ ನೋವನ್ನ, ವಿಚಾರವನ್ನ ಕೇಳದೇ ಕಠೋರವಾಗಿ ಇರುವಂತಹದ್ದು.
ಇದನ್ನ ಎಲ್ಲರು ಕೂಡಾ ಖಂಡಿಸಬೇಕು.
ಸರ್ಕಾರ ಕೂಡ ಇದರ ಬಗ್ಗೆ ಕ್ರಮ ಕೈಗೊಳ್ಳುತ್ತಾ ಇದೆ.
ಆತಂಕವಾದ, ಭಯೋತ್ಪಾದನೆ, ಹೋಗಲಾಡಿಸಬೇಕು.
ಇದಕ್ಕೆ ಜನರ ಸಹಕಾರ ಬೇಕು.
ಎಲ್ಲರು ಪಕ್ಷಾತೀತವಾಗಿ, ಜಾತ್ಯಾತೀತವಾಗಿ ಮತ್ತೆ ಅವರ ಭಾಷ್ಯತೀತವಾಗಿ ನಾವೆಲ್ಲರೂ ಕೂಡ ಭಾರತೀಯತೆಯ ಅಖಂಡತ್ವವನ್ನ ಕಾಪಾಡಿಕೊಳ್ಳಬೇಕು.
ಇದು ನಮ್ಮೆಲ್ಲರ ಕರ್ತವ್ಯ.
ಕಾಶ್ಮೀರದಿಂದ ಕನ್ಯಾಕುಮಾರಿ ವರೆಗೆ ನಾವೆಲ್ಲರು ಭಾರತೀಯರು ಎಂಬ ಭಾವನೆ ಬರುವಂತಹದ್ದು ಪ್ರತಿಯೊಬ್ಬರಲ್ಲು ಇರಬೇಕು.
ನಾವೆಲ್ಲರೂ ಭಾರತೀಯರಾಗಿ ನಮ್ಮ ದೇಶವನ್ನ ಗೌರವಿಸಬೇಕು.
ನಮ್ಮ ರಾಷ್ಟ್ರ ಗೀತೆಯನ್ನ ಎತ್ತಿಹಿಡಿಯಬೇಕು.
ನಮ್ಮ ರಾಷ್ಟ್ರ ಧ್ವಜವನ್ನ ಎತ್ತಿ ಮೆರೆಯಬೇಕು.
ಸಂವಿಧಾನವನ್ನ ಗೌರವಿಸಬೇಕು.
ಹಾಗೇ ಅಖಂಡ ಭಾರತೀಯರು ನಾವೆಲ್ಲರೂ ಎಂಬ ಭಾವನೆ ಬರಬೇಕು.
ಇಡೀ ಭಾರತದ 145 ಕೋಟಿ ಜನ ಈ ಕೃತ್ಯವನ್ನ ಖಂಡಿಸುವಂತಹ ಮನೋಭಾವನೆ ಇಟ್ಟುಕೊಳ್ಳಬೇಕು.
ಭಯೋತ್ಪಾದಕರ ಕೃತ್ಯ ಹೇಯತನವಾಗಿರುವಂತಹದ್ದು, ಹೇಡಿತನವಾಗಿರುವಂತಹದ್ದು.
ನಮ್ಮ ಭಾರತೀಯ ಸೈನಿಕರು ಹಗಲು ರಾತ್ರಿ ಕಾಯ್ತಾರೆ.
ನಮ್ಮ ದೇಶವನ್ನ ಕಾಪಾಡ್ತಿದ್ದಾರೆ.
ಅವರು ಕೂಡಾ ಎಷ್ಟೋ ಜನ ಹತ್ಯೆ ಆಗ್ತಿದ್ದಾರೆ.
ತಮ್ಮ ಪ್ರಾಣ ಕಳೆದುಕೊಳ್ತಿದ್ದಾರೆ.
ನೀವೆಲ್ಲ ನೋಡಬಹುದು ಒಂದು ಬಸ್ಸಿನ ಸೈನಿಕರನ್ನ ಕೊಂದು ಬಿಟ್ಟರು.
ಅವರ ಜೀವನ ಏನ್ ಆಗ್ಬೇಕು
ಇತಂಹ ಪರಿಸ್ಥಿತಿ ಇದೆ.
ಕೇಂದ್ರ ಸರ್ಕಾರ ಇದರ ಬಗ್ಗೆ ಒಂದು ಧೃಡ ನಿರ್ಧಾರ ತಗೋಬೇಕು.
ಇಂತಹ ಕೃತ್ಯಗಳು ಆದಾಗ ಬೇಗ ಇದಕ್ಕೆ ಸ್ಪಂದಿಸಿ,
ಇನ್ನು ಮುಂದೆ ಆಗದ ರೀತಿಯಲ್ಲಿ ಅದನ್ನ ಕ್ರಮ ಕೈಗೊಳ್ಳುವಂತಹ ಕೆಲಸವನ್ನ ಮಾಡಬೇಕು ಎಂದು ಹೇಳಿದ್ದಾರೆ.
