ತುಮಕೂರು: ಸಾರ್ವಜನಿಕರಿಗೆ ಭಯಹುಟ್ಟಿಸುವ ರೀತಿಯಲ್ಲಿ ತಲ್ವಾರ್ ನಿಂದ ಹುಟ್ಟುಹಬ್ಬ ಆಚರಿಸಿಕೊಂಡಿದ್ದವ ಈಗ ಪೊಲೀಸರ ಅತಿಥಿಯಾಗಿದ್ದಾನೆ.
ತಲ್ವಾರ್ ನಿಂದ ಕೇಕ್ ಕತ್ತರಿಸಿ ಹುಟ್ಟು ಹಬ್ಬ ಆಚರಿಸಿಕೊಂಡಿದ್ದ ಆರೋಪಿ ಸೈಯದ್ ಶರೂಖ್ ಅನ್ನು ಪೊಲೀಸರು ಬಂಧಿಸಿದ್ದಾರೆ.
ಮತ್ತೊಬ್ಬ ಆರೋಪಿ ಮುಕೀತ್ ಪಾಷ ರ ಬಂಧಿಸುವ ಕಾರ್ಯ ಮುಂದುವರೆದಿದೆ. ಬಂಧಿತ ಆರೋಪಿ ಸೈಯದ್ ಶರೂಖ್ ಬಿನ್ ಸೈಯದ್ ಆಲಿ(26)ಗುಬ್ಬಿ ನಗರದ ಕೆ.ಹೆಚ್ ಬಿ ಕಾಲೋನಿಯಲ್ಲಿ ಮೊಬೈಲ್ ಅಂಗಡಿ ವ್ಯಾಪಾರ ಮಾಡುತ್ತಿದ್ದ
ದಿನಾಂಕ:-12/10/2024 ರಂದು ಗುಬ್ಬಿ ಟೌನ್ ಸಂತೇ ಮೈದಾನದಲ್ಲಿ ರಾತ್ರಿ ಸುಮಾರು 10.30 ಗಂಟೆ ಸಮಯದಲ್ಲಿ ಸೈಯದ್ ಶರೂಪ್ ಮತ್ತು ಮುಕೇಶ್ ಪಾಷ್ ರವರು ತಮ್ಮ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳಲು ತಮ್ಮಗಳ ಸ್ವಾಧೀನದಲ್ಲಿದ್ದ ತಲ್ವಾರ್ ಗಳನ್ನು ತೋರಿಸಿದ್ದು, ವಿಚಿತ್ರವಾಗಿ ಜನರಿಗೆ ಭಯ ಹುಟ್ಟುವ ರೀತಿಯಲ್ಲಿ ಜನರನ್ನು ಮುಂದೆ ಹೋಗದಂತೆ ಅಡ್ಡಗಟ್ಟಿ ತಲ್ವಾರ್ ನ್ನು ತೆಗೆದುಕೊಂಡು ರಸ್ತೆಗೆ ಅಡ್ಡಲಾಗಿ ತಲ್ವಾರ್ ನಿಂದ ಸೈಯದ್ ಶರೂಖ್ ಜೋರಾಗಿ ಚೀರಾಡಿಕೊಂಡು ತಲ್ವಾರ್ ನ್ನು ಹಿಡಿದುಕೊಂಡು ವಿಚಿತ್ರವಾಗಿ ಜನರಿಗೆ ಭಯ ಹುಟ್ಟಿಸುವ ರೀತಿಯಲ್ಲಿ ಕೇಕ್ ನ್ನು ಕತ್ತರಿಸಿರಿಸಿ ಹುಟ್ಟು ಹಬ್ಬ ಆಚರಿಸಿಕೊಂಡಿದ್ದರು.
ಸದರಿ ವಿಚಾರವಾಗಿ ತಲ್ವಾರ್ ಹಿಡಿದುಕೊಂಡು ಜನರನ್ನು ಅಡ್ಡಗಟ್ಟಿ ಭಯ ಹುಟ್ಟಿಸುವ ರೀತಿಯಲ್ಲಿ ವರ್ತಿಸಿರುವ ಸೈಯದ್ ಶರೂಖ್ ಮತ್ತು ಮುಕೇಶ್ ಪಾಷ ರವರ ವಿರುದ್ಧ ದಾಖಲಾದ ದೂರಿನನ್ವಯ ಕಾನೂನು ರೀತಿಯಲ್ಲಿ ಪೊಲೀಸರು ಕಾನೂನು ಕ್ರಮ ಕೈಗೊಂಡಿದ್ದಾರೆ.
ತಲ್ವಾರ್ ಝಳಪಿಸಿರುವ ಪ್ರಕರಣದ ಆರೋಪಿಗಳ ತಂಡವನ್ನು ಪತ್ತೆ ಮಾಡಲು ತುಮಕೂರು ಜಿಲ್ಲಾ ಎಸ್.ಪಿ ಅಶೋಕ್ ಕೆ.ವಿ, ಅಪರ ಪೊಲೀಸ್ ಅಧೀಕ್ಷಕರಾದ ವಿ ಮರಿಯಪ್ಪ, ಮತ್ತು ಅಬ್ದುಲ್ ಖಾದರ್ ಅವರ ನೇತೃತ್ವದಲ್ಲಿ ಸಿರಾ ಉಪವಿಭಾದ ಡಿ ವೈ ಎಸ್ ಪಿ ಬಿ.ಕೆ ಶೇಖರ್, ಗುಬ್ಬಿ ವೃತ್ತದ ಸಿ.ಪಿ.ಐ ಗೋಪಿನಾಥ್ ವಿ ಹಾಗೂ ಗುಬ್ಬಿ ಪೊಲೀಸ್ ಠಾಣೆಯ ಪಿ.ಎಸ್.ಐ ಸುನೀಲ್ ಕುಮಾರ್.ಜಿ.ಕೆ ಗುಬ್ಬಿ ಪೊಲೀಸ್ ಠಾಣಾ ಸಿಬ್ಬಂದಿ ನವೀನ್ ಕುಮಾರ್, ವಿಜಯ್ ಕುಮಾರ್, ಒಳಗೊಂಡ ವಿಶೇಷ ತಂಡವನ್ನು ರಚಿಸಲಾಗಿತ್ತು.