ತುಮಕೂರು: ಕಳೆದ ಮಾ.05 ರಂದು ಆರಂಭವಾದ ಗುಬ್ಬಿಯಪ್ಪ ಜಾತ್ರಾ ಮಹೋತ್ಸವವು ನಗರದ ಹೊರ ವಲಯದ ಚನ್ನಶೆಟ್ಟಿಹಳ್ಳಿ ಯಲ್ಲಿ ಗದ್ದುಗೆ ಏರುವ ಮುಖೇನ ಜಾತ್ರಾ ಮಹೋತ್ಸವವು ಸಮಾಪ್ತ..

ಇಪ್ಪತ್ತು ದಿನಗಳ ಕಾಲ ನಡೆಯುವ ಇತಿಹಾಸ ಪ್ರಸಿದ್ಧ ಶ್ರೀ ಗೋಸಲ ಚನ್ನಬಸವೇಶ್ವರ ಸ್ವಾಮಿ ಅವರ ಜಾತ್ರಾ ಮಹೋತ್ಸವವು ಮಾ.05 ರಂದು ಧ್ವಜಾರೋಹಣ ಆರಂಭವಾಗಿ ಮಾ.09 ರಂದು ಸ್ವಾಮಿಯವರ ರಥೋತ್ಸವವು ಸಹಸ್ರಾರು ಸಂಖ್ಯೆಯಲ್ಲಿ ವಿಜೃಂಭಣೆಯಿಂದ ನೆರವೇರಿದ್ದು, ಮಾ.15 ರ ಸಂಜೆ ಸ್ವಾಮಿಯವರನ್ನು ಬೆಳ್ಳಿ ಪಲ್ಲಕ್ಕಿಯಲ್ಲಿ ಕೂಡಿಸಿ ಅದ್ದೂರಿ ಮೆರವಣಿಗೆಯನ್ನು ನಡೆಸಲಾಯಿತು.
ಮಾ.11 ರಂದು ನಾಟಕ ರತ್ನ ಗುಬ್ಬಿ ವೀರಣ್ಣ ಕುಟುಂಬದಿಂದ ಗುಬ್ಬಿಯಪ್ಪ ಅವರನ್ನು ವಿಚಿತ್ರ ಮಂಟಪದಲ್ಲಿ ಮೆರವಣಿಗೆ ನಡೆಸಿದರೆ, ಮಾ.20 ರಂದು ಸಂಜೆ ದೇವಾಲಯದ ಸಮೀಪವಿರುವ ತೊರೆ ಮಠದ ತೊರೆಯಲ್ಲಿ ಸ್ವಾಮಿಯವರ ತೆಪ್ಪೋತ್ಸವವು ನೆರವೇರಿದರೆ, ಜಾತ್ರಾ ಮಹೋತ್ಸವದ ಸಮಾಪ್ತಿ ದಿನವಾದ ಭಾನುವಾರ ಚನ್ನಶೆಟ್ಟಿಹಳ್ಳಿ ಗದ್ದುಗೆಗೆ ಉತ್ಸವ ನೆರವೇರಿದ ಬಳಿಕ ಸ್ವಾಮಿಯವರಿಗೆ ರುದ್ರಾಭಿಷೇಕ ನೆರವೇರಿ ಮಹಾ ಮಂಗಳಾರತಿ ನೆರವೇರಿಸಿದ ಬಳಿಕ ಸ್ವಾಮಿಯವರ ದರ್ಶನಕ್ಕೆ ಆಗಮಿಸಿದ ಭಕ್ತ ಸಮೂಹಕ್ಕೆ ದಾಸೋಹ ವ್ಯವಸ್ಥೆಯನ್ನು ಮಾಡಲಾಗಿತ್ತು
ಗುಬ್ಬಿ ಶ್ರೀ ಗೋಸಲ ಚನ್ನಬಸವೇಶ್ವರ ಸ್ವಾಮಿ ಜಾತ್ರಾ ಮಹೋತ್ಸವವು ಕಳೆದ 05 ರಂದು ಆರಂಭವಾಗಿ 09 ರಂದು ಸ್ವಾಮಿಯವರ ಅದ್ದೂರಿ ರಥೋತ್ಸವವು ಸಹಸ್ರಾರು ಸಂಖ್ಯೆಯಲ್ಲಿ ಭಾಗವಹಿಸಿದ ಭಕ್ತರ ಸಮ್ಮುಖದಲ್ಲಿ ನೆರವೇರಿ 14 ರಂದು ಬೆಳ್ಳಿಪಲ್ಲಕ್ಕಿ ಯಲ್ಲಿ ಸ್ವಾಮಿಯವರನ್ನು ಕುಳ್ಳಿರಿಸಿ ಅದ್ದೂರಿ ಮೆರವಣಿಗೆ ನಡೆಸಲಾಗಿದ್ದು, 20 ರಂದು ತೊರೆ ಮಠದ ತೊರೆಯಲ್ಲಿ ತೆಪ್ಪೋತ್ಸವ ಜರುಗಿದೆ. ನಿನ್ನೆ ಚನ್ನಶೆಟ್ಟಿಹಳ್ಳಿ ಗದ್ದುಗೆ ಗೆ ಸ್ವಾಮಿಯವರ ಆಗಮನದ ಬಳಿಕ ಸ್ವಾಮಿಯವರಿಗೆ ರುದ್ರಾಭಿಷೇಕ ನೆರವೇರಿಸಿ ಬಂದ ಭಕ್ತರಿಗೆ ದಾಸೋಹ ವ್ಯವಸ್ಥೆ ಮಾಡಲಾಗಿತ್ತು. ಈ ಬಾರಿಯ ಜಾತ್ರಾ ಮಹೋತ್ಸವದ ವಿಶೇಷ ಎಂದರೆ ಐದು ನಾಟಕೋತ್ಸವವು ವಿವಿಧ ರಂಗಭೂಮಿ ಕಲಾವಿದರ ಮೂಲಕ ಅದ್ದೂರಿಯಾಗಿ ಜರುಗಿತು. ಒಟ್ಟಾರೆ ಇಪ್ಪತ್ತು ದಿನಗಳ ನಡೆದ ಗುಬ್ಬಿಯಪ್ಪ ಜಾತ್ರಾ ಮಹೋತ್ಸವವು ಯಾವುದೇ ರೀತಿಯಲ್ಲಿ ನಿರ್ವಜ್ಞ ಸಂಭವಿಸಿದೆ ಯಶಸ್ವಿಯಾಗಿ ನೆರವೇರಿದ್ದು, ಯಶಸ್ವಿಗೆ ಸಹಕರಿಸಿದ ಪ್ರತಿಯೊಬ್ಬರಿಗೂ ಕೃತಜ್ಞತೆಗಳು ಎಂದು ತಹಶೀಲ್ದಾರ್ ಆರತಿ ಬಿ. ತಿಳಿಸಿದರು.

ಪ್ರತಿ ವರ್ಷವೂ ಇತಿಹಾಸ ಪ್ರಸಿದ್ಧ ಶ್ರೀ ಗೋಸಲ ಚನ್ನಬಸವೇಶ್ವರ ಸ್ವಾಮಿ ಅವರ ಜಾತ್ರಾ ಮಹೋತ್ಸವವು ತಾಲೂಕು ಆಡಳಿತ, 18 ಕೋಮು, ದಾಸೋಹ ಸಮಿತಿ, ವ್ಯವಸ್ಥಾಪನ ಸಮಿತಿ ಸೇರಿದಂತೆ ಭಕ್ತರ ಸಹಕಾರದಿಂದ ಈ ಬಾರಿಯೂ ಯಶಸ್ವಿಯಾಗಿ ಜಾತ್ರಾ ಮಹೋತ್ಸವವು ನೆರವೇರಿತು.