ತುಮಕೂರು:– ಸುಮಾರು ಹತ್ತರಿಂದ ಹದಿನೈದು ಯುವಕರಿಂದ ಯುವಕನ ಮೇಲೆ ಹಲ್ಲೆ ಮಾಡಿರುವ ವಿಡಿಯೋ ಮೊಬೈಲ್ ನಲ್ಲಿ ಸೆರೆಯಾಗಿದೆ.
ಈ ಘಟನೆ ನಡೆದಿರುವುದು ಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ. ಹೌದು, ಈಗಾಗಲೇ ಹಲವು ಪ್ರಕಣಗಳಿಂದ ಅಪರಾಧ ಪ್ರಕರಣಗಳ ಹಾಟ್ ಸ್ಪಾಟ್ ಎಂದೇ ಕರೆಸಿಕೊಳ್ಳುತ್ತಿರುವ ಜಯನಗರದ ಯುವಕನ ಮೇಲೆ ಈ ಹಲ್ಲೆ ನಡೆದಿದೆ ಎನ್ನಲಾಗಿದೆ.
ಇಂತಹ ಹಲ್ಲೆ ಪ್ರಕರಣದಿಂದ ಮರುಳೂರು ದಿಣ್ಣೆ ಅಪರಾಧ ಪ್ರಕರಣಗಳ ಹಾಟ್ ಸ್ಪಾಟ್ ಆಯ್ತಾ? ಎಂಬ ಪ್ರಶ್ನೆ ಎದ್ದಿದೆ. ದಿನೇ ದಿನೇ ಈ ಭಾಗದಲ್ಲಿ ಯುವಕರ ಗುಂಪುಗಳಿಂದ ಗಲಾಟೆ, ಕೊಲೆ ಪ್ರಕರಣಗಳ ಹೆಚ್ಚಳವಾಗುತ್ತಿವೆ. ಹೀಗಾಗಿ ಈ ಭಾಗದ ಜನರಿಗೆ ಸಹಜವಾಗಿಯೇ ಭಯದ ವಾತಾವರಣ ಮೂಡುತ್ತಿದೆ.
ಗುರಾಯಿಸಿದ್ದಕ್ಕೆ ಯುವನಿಗೆ ಯುವಕರಿಂದ ಹಿಗ್ಗಾಮುಗ್ಗ ಥಳಿತ ಮಾಡಲಾಗಿದೆ ಎನ್ನಲಾಗಿದೆ. ಹತ್ತಾರು ಮಂದಿ ಯುವಕರ ಗುಂಪಿನಿಂದ ಯುವಕನ ಮೇಲೆ ಹಲ್ಲೆ ಮಾಡಿರುವ ವಿಡಿಯೋ ಸಾಕಷ್ಟು ಸದ್ದು ಮಾಡುತ್ತಿದೆ.
ತುಮಕೂರು ನಗರದ ಬನಶಂಕರಿಯ ಮರುಳೂರು ದಿಣ್ಣೆಯ ಯುವಕನಿಗೆ ಥಳಿಸಿದ್ದು,
ಹಲ್ಲೆ ಮಾಡುತ್ತಿರುವ ವಿಡಿಯೋ ಮೊಬೈಲ್ ನಲ್ಲಿ ಸೆರೆಯಾಗಿದೆ.
ನನ್ನ ಮೇಲೆ ಹಲ್ಲೆ ಮಾಡಿದ್ದಾರೆಂದು ಯುವಕನಿಂದ ಜಯನಗರ ಪೊಲೀಸರಿಗೆ ದೂರು ನೀಡಲು ಬರೆದಿರುವ ಪತ್ರವೂ ಇದೆ. ನಾನು ಟೀ ಕುಡಿಯುತ್ತಿದ್ದ ವೇಳೆ 15 ಜನರು ಹಲ್ಲೆ ಮಾಡಿದ್ದಾರೆ. ಏಕಾಏಕಿ ಬಂದು ಗುರಾಯಿಸುತ್ತೀಯಾ ಎಂದು 15 ಜನರ ಯುವಕರು ಹಲ್ಲೆ ಮಾಡಿದ್ದಾರೆಂದು ದೂರು ನೀಡಲು ಬರೆದಿರುವ ಪತ್ರದಲ್ಲಿ ಹಲ್ಲೆಗೊಳಗಾದ ಯುವಕ ಉಲ್ಲೇಖಿಸಿದ್ದಾನೆ.
ದಿನೇ ದಿನೇ ಹೆಚ್ಚಾಗುತ್ತಿರುವ ಇಂತಹ ಘಟನೆಗಳಿಂದ ಮರುಳೂರು ದಿಣ್ಣೆ ನಿವಾಸಿಗಳಲ್ಲಿ ಭಯದ ವಾತಾವರಣ ಉಂಟಾಗುತ್ತಿರುವುದನ್ನು ಮಾತ್ರ ಅಲ್ಲಗಳೆಯುವಂತಿಲ್ಲ.