ತುಮಕೂರು:- ಗಣೇಶೋತ್ಸವ ಮೆರವಣಿಗೆಯಲ್ಲಿ ಬಲವಂತವಾಗಿ ವಿದ್ಯಾರ್ಥಿಗಳನ್ನ ಕರೆತರಲು ನಿರ್ಬಂಧ ಹೇರಿದ ವಿಚಾರವಾಗಿ ಬಿಜೆಪಿ ಕೆಂಗಣ್ಣಿಗೆ ತುಮಕೂರು ವಿವಿ ಗುರಿಯಾಗಿದೆ.
ರಾಜ್ಯ ಸರ್ಕಾರದ ನಡೆಗೆ ಬಿಜೆಪಿಯಿಂದ ತೀವ್ರ ಖಂಡನೆ ವ್ಯಕ್ತವಾಗಿದ್ದು, ಶಾಸಕ ಜಿ.ಬಿ. ಜ್ಯೋತಿಗಣೇಶ್ ಆಕ್ರೋಶ ಹೊರಹಾಕಿದ್ದಾರೆ.
ಹಿಂದೂ ಹಬ್ಬಗಳನ್ನೇ ರಾಜ್ಯ ಕಾಂಗ್ರೆಸ್ ಸರ್ಕಾರ ಟಾರ್ಗೆಟ್ ಮಾಡ್ತಿದೆ ಎಂಬ ಆರೋಪ ಮಾಡಿರುವ ಶಾಸಕರು, ರಾಜ್ಯ ಸರ್ಕಾರ ಕ್ಷಮಾಪಣೆ ಕೇಳುವಂತೆ .
ತುಮಕೂರು ನಗರ ಶಾಸಕ ಜ್ಯೋತಿಗಣೇಶ್ ಒತ್ತಾಯ ಮಾಡಿದ್ದಾರೆ.
ವಿಶ್ವ ಹಿಂದೂ ಪರಿಷತ್, ಭಜರಂಗದಳ ಆಯೋಜನೆ ಮಾಡಿದ ಕಾರ್ಯಕ್ರಮಕ್ಕೆ ಏನೆಲ್ಲಾ ಅಡೆ-ತಡೆ ಮಾಡಿದ್ದು ಗೊತ್ತಾಯ್ತು.
ಅದಕ್ಕೂ ಮುಂಚೆ ಎಸ್ಪಿ ಅವರೇ ಮೀಟಿಂಗ್‌ಗೆ ಕರೆಸಿ ಮಾತನಾಡಿಸಿದ್ರು. ನಾನೂ ಕೂಡ ಭಾಗಿ ಆಗಿದ್ದೆ. ಅಧ್ಯಕ್ಷರು, ಸದಸ್ಯರೆಲ್ಲರನ್ನು ಕರೆಸಿ ನಾಗಮಂಗಲ-ದಾವಣಗೆರೆಯಲ್ಲಿ ನಡೆದ ರೀತಿ ಇಲ್ಲಿ ನಡೆಯಬಾರದು. ಶಾಂತಿಯುತವಾಗಿ ನಡೆಯಬೇಕು ಅಂತಾ ಏನೇನು ಗೈಡ್ ಲೈನ್ ಕೊಟ್ಟಿದ್ರು ಎಲ್ಲವನ್ನೂ ಪಾಲಿಸಿದ್ದೆವು.
ಪೊಲೀಸರು ಹೇಳಿದಂತೆ ಮಾಡಿದ್ದೇವೆ:- ಪೊಲೀಸಿನವರು ಹೇಳಿದಂತೆ 100ರಷ್ಟು ಪಾಲನೆ ಮಾಡಿದ್ವಿ.ಕೆಲವು ವ್ಯಕ್ತಿಗಳು ಬರ್ತಾರೆ, ಅವರನ್ನ ಇಲ್ಲಿ ಸೇರೋದಕ್ಕೆ ಬಿಡಲ್ಲ.ಅವರು ಏನೇನೋ ಮಾತನಾಡಿ, ಕಲಹ ಮಾಡಿ ಹೋಗ್ತಾರೆ.ಸಾಮರಸ್ಯ ಕದಡುತ್ತಾರೆ ಅಂತಾ ಅವರನ್ನೂ ಅರೆಸ್ಟ್ ಮಾಡಿದ್ರು.ಸಮಿತಿಗೆ ನೊಟೀಸ್ ಕೊಟ್ಟು, ಬರ್ಬಾರ್ದು ಅಂದ್ರು. ಅದಕ್ಕೂ ನಾವ್ಯಾರೂ ಅಬ್ಜೆಕ್ಷನ್ ಮಾಡಲಿಲ್ಲ ಎಂದು ಹೇಳಿಕೆ ನೀಡಿದ್ದಾರೆ.
ಗೃಹ ಸಚಿವರ ವಿರುದ್ದ ಕೆಂಡ:-
ಸ್ಥಳೀಯರು ಮಾತ್ರ ಭಾಗಿ ಆಗಬೇಕು ಅಂದ್ರು. ರಾಜ್ಯ ಕಾಂಗ್ರೆಸ್ ಸರ್ಕಾರ ಗೃಹ ಸಚಿವರ ಸೂಚನೆ ಮೇರೆಗೆ ಯುನಿವರ್ಸಿಟಿ ಗೆ ಲೇಟರ್ ಕೊಟ್ಟಿದ್ದಾರೆ.ಗಣಪತಿ ವಿಸರ್ಜನಾ ಕಾರ್ಯಕ್ರಮ ಇರುತ್ತೆ, ಕಿಡಿಗೇಡಿಗಳು ಪಾಲ್ಗೊಳ್ಳುವ ಸಾಧ್ಯತೆ ಇದೆ. ನಿಮ್ಮ ಮಕ್ಕಳನ್ನ ಒತ್ತಾಯ ಪೂರ್ವಕವಾಗಿ ಕರೆದುಕೊಂಡು ಹೋಗುವುದಕ್ಕೆ ಬಿಡಬಾರದು ಅಂತ ಆದೇಶ ಹೊರಡಿಸಿದ್ದಾರೆ. ನಾನು ಇದನ್ನ ಖಂಡನೆ ಮಾಡ್ತಿನಿ. ನಮಗೆ ಭದ್ರತೆ ಕೊಟ್ಟಿದ್ರು, ಪೊಲೀಸರು ಹೇಳಿದ್ದಕ್ಕೆ ಎಲ್ಲಾ ಪಾಲನೆ ಮಾಡಿದ್ವಿ. ರಾಜ್ಯ ಸರ್ಕಾರ ಮತ್ತು ಗೃಹ ಸಚಿವರ ಆದೇಶ ಇಲ್ಲದೇ ಈ ರೀತಿ ಆಗಲ್ಲ.
ನೋಟಿಸ್ ಕೊಡುವ ಅವಶ್ಯಕತೆ ಇತ್ತಾ..? ನೋಟಿಸ್ ಕೊಟ್ರು ಸಹಸ್ರ ಸಂಖ್ಯೆಯಲ್ಲಿ ಬಂದಿದ್ರು. ಒತ್ತಾಯಪೂರ್ವಕವಾಗಿ ಪ್ರತಿಭಟನೆಗಳಿಗೆ ಕರೆದುಕೊಂಡು ಹೋದ್ರೆ ಅದಕ್ಕೆ ನಿರ್ಬಂಧ
ಏರಲಿ ತೊಂದರೆ ಇಲ್ಲ ಎಂದಿದ್ದಾರೆ.
ನಿರ್ಬಂಧ ಎಷ್ಟು ಸರಿ:-
*ಹಿಂದೂ ಮಹಾಸಭಾ ಗಣಪತಿ ವಿಸರ್ಜನೆಗೆ ನಿರ್ಬಂಧ ಏರಿದ್ದು ಎಷ್ಟು ಸರಿ..? ಇವರ ನಡೆ ಯಾವ ರೀತಿಯಾಗಿ ಮುಂದೆ ಬರುತ್ತೋ ಗೊತ್ತಿಲ್ಲ. ಬೇರೆಯವರು ಚಾಕು ಹಾಕುವವರು, ಚೂರಿ ಹಾಕುವವರು ರಾಜರೋಷವಾಗಿ ಆರಾಮಾಗಿ ಫ್ರೀಡಂ ಆಗಿ ಇದ್ದಾರೆ. ರಾಜ್ಯ ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಅವರಿಗೆಲ್ಲ ಒಂದು ರೀತಿಯಲ್ಲಿ ಲೈಸೆನ್ಸ್ ಸಿಕ್ಕಂತಾಗಿದೆ. ಹಿಟ್ ಅಂಡ್ ಕಿಲ್ ಅಂಡ್ ರನ್ ಅನ್ನುವಂತ ರೀತಿಯಾಗಿದೆ. ನಮ್ಮ ಧರ್ಮದ ಕೆಲಸ ಮಾಡಲಿಕ್ಕೆ ರಾಜ್ಯ ಸರ್ಕಾರ ಬ್ರೇಕ್ ಹಾಕುವಂತಹ ಕೆಲಸ ಮಾಡ್ತಿದೆ. ಈ ರೀತಿ ಮಾಡಲಿಕ್ಕೆ ನೇರವಾಗಿ ರಾಜ್ಯ ಸರ್ಕಾರ ಮತ್ತು ಗೃಹ ಮಂತ್ರಿಗಳೇ ಕಾರಣ. ಈ ರೀತಿಯಾಗಿ ಮಾಡಿರೋದು ತಪ್ಪು.
ಕ್ಷಮಾಪಣೆ ಕೇಳಬೇಕು ಅಂತ ನಾನು ಆಗ್ರಹ ಮಾಡ್ತಿನಿ ಎಂದು ಹೇಳಿಕೆ ಕೊಟ್ಟಿದ್ದಾರೆ ತುಮಕೂರಿನಲ್ಲಿ.