ತುಮಕೂರು:- ಕೊಳವೆ ಬಾವಿಯ ಕೇಬಲ್ ಕದಿಯುತ್ತಿದ್ದ ಕಳ್ಳನನ್ನ ಹಿಡಿದ ಗ್ರಾಮಸ್ಥರು ಪೊಲೀಸರಿಗೆ ಒಪ್ಪಿಸಿದ್ದಾರೆ.

ಹರೀಶ್, ಗ್ರಾಮಸ್ಥರ ಕೈಗೆ ಸಿಕ್ಕಿ ಬಿದ್ದ ಕಳ್ಳ. ತುಮಕೂರು ಜಿಲ್ಲೆ ಗುಬ್ಬಿ ತಾಲ್ಲೂಕಿನ ಲಕ್ಕೇನಹಳ್ಳಿಯಲ್ಲಿ ಘಟನೆ ನಡೆದಿದೆ.
ಗ್ರಾಮದ ಶ್ರೀಕಾಂತ್ ಎಂಬುವ ಜಮೀನಿನಲ್ಲಿ ಕೇಬಲ್ ಕಳವು ಮಾಡಿದ್ದ ಹರೀಶ್. ಚೀಲದಲ್ಲಿ ಕೇಬಲ್ ತುಂಬಿಕೊಂಡು ಹೋಗುತ್ತಿದ್ದ. ಅನುಮಾನಗೊಂಡು ಚೀಲ ಪರಿಶೀಲಿಸಿದಾಗ ಕಳ್ಳತನ ಬೆಳಕಿಗೆ ಬಂದಿದೆ.
ಕಳ್ಳನನ್ನ ಹಿಡಿದು ಮರಕ್ಕೆ ಕಟ್ಟಿ ಛೀಮಾರಿ ಹಾಕಿದ ಗ್ರಾಮಸ್ಥರು,
ಗುಬ್ಬಿ ಪೊಲೀಸರ ವಶಕ್ಕೆ ಕಳ್ಳನನ್ನ ಒಪ್ಪಿಸಿದ್ದಾರೆ.