ತುಮಕೂರು!! *ಪರಮೇಶ್ವರ್ ಸಿಎಂ ಆಗಲಿ: ಹನುಮಂತನಾಥ ಸ್ವಾಮೀಜಿ ಸ್ಪೋಟಕ ಹೇಳಿಕೆ

ತುಮಕೂರು!! *ಪರಮೇಶ್ವರ್ ಸಿಎಂ ಆಗಲಿ: ಹನುಮಂತನಾಥ ಸ್ವಾಮೀಜಿ ಸ್ಪೋಟಕ ಹೇಳಿಕೆ

ತುಮಕೂರು:- ದಸರಾ ವೇದಿಕೆಯಲ್ಲಿ ತುಮಕೂರು ಜಿಲ್ಲೆಗೆ ಸಿಎಂ ಖುರ್ಚಿಗಾಗಿ ಆಗ್ರಹಿಸಿದ ವಿಚಾಕ್ಕೆ ಸಂಬಂಧಿಸಿ ಪ್ರತಿಕ್ರಿಯೆ ನೀಡಿರುವ

 ಎಲೆರಾಂಪುರ ಮಠದ ಹನುಮಂತನಾಥ ಸ್ವಾಮೀಜಿ ಪರಮೇಶ್ವರ್ ಮುಖ್ಯಮಂತ್ರಿ ‌ಆಗಲಿ ಎಂಬ ಆಶಯದ ಆಗ್ರಹ ವ್ಯಕ್ತಪಡಿಸಿದರು.

ನಾನು ವೇದಿಕೆಯಲ್ಲಿ ಮಾತನಾಡಿದ ಹಾಗೆ ನಮ್ಮ ಜಿಲ್ಲೆಯಿಂದ ಒಬ್ಬರು ಮುಖ್ಯಮಂತ್ರಿಗಳು ಆಗ್ಬೇಕು. ಅವಕಾಶ ಸಿಗಬೇಕು ಅಂತ ಹೇಳಿ ಪ್ರತಿಸಾರಿ ನಾವು ಅಂದುಕೊಳ್ತಿದ್ವಿ. ಕಳೆದ ಬಾರಿ ಪರಮೇಶ್ವರ್ ಅವರು ಕೊರಟಗೆರೆ ಕ್ಷೇತ್ರದಲ್ಲಿ ಸೋಲಾಯ್ತು. ಕಳೆದ ಬಾರಿ ಅವರು ಮುಖ್ಯಮಂತ್ರಿ ಅಂತ ಬಿಂಬಿಸಿದಾಗ ಆ ಹುದ್ದೆ ಅವರಿಂದ ಕೈತಪ್ಪಿ ಹೋಯ್ತು.ಈ ಸಂದರ್ಭದಲ್ಲಾದ್ರೂ ನಮ್ಮ ಜಿಲ್ಲೆಯಿಂದ ಒಬ್ರು ಮುಖ್ಯಮಂತ್ರಿಗಳಾಗಲಿ

ಅನ್ನೊದು ನಮ್ಮ ಆಶಯ ಎಂದರು.

ಇದು ಯಾವುದೇ ರಾಜಕೀಯ ಪ್ರೇರಿತವಲ್ಲ. ಇದು ಧಾರ್ಮಿಕ ಕಾರ್ಯಕ್ರಮ ಅಂತ ನಾನು ಹೆಚ್ಚಿಗೆ ಮಾತನಾಡೋಕೆ ಹೋಗಿಲ್ಲ. ನಮ್ಮ ಒಂದು ಕನಸು ನಮ್ಮ ಜಿಲ್ಲೆಯಿಂದ ಮುಖ್ಯಮಂತ್ರಿ ಆದ್ರೆ, ಎಲ್ಲಾ ತಾಲ್ಲೂಕುಗಳು ಅಭಿವೃದ್ಧಿ ಆಗುತ್ತೆ. ಕುಡಿಯುವ ನೀರು, ರಸ್ತೆ ಅಭಿವೃದ್ಧಿ ಆಗುತ್ತೆ. ಶಿರಾ, ಮಧುಗಿರಿ, ಪಾವಗಡ ಹೀಗೆ ತುಂಬಾ ಹಿಂದುಳಿದ ತಾಲೂಕುಗಳನ್ನ ಹೊಂದಿರುವ ಜಿಲ್ಲೆ ಇದು. ಈ ಜಿಲ್ಲೆಗೆ ವಿಶೇಷ ಅನುದಾನ ನೀಡುವ ಮೂಲಕ ರಾಜ್ಯದ ಮೊದಲ ಸ್ಥಾನದಲ್ಲಿ ನಿಲ್ಲಬೇಕು. ಎಲ್ಲಾ ವರ್ಗದವರಿಗೆ ಸಾಮಾಜಿಕ ಶೈಕ್ಷಣಿಕ ನ್ಯಾಯ ಸಿಗಬೇಕು ಅನ್ನೋ ದೃಷ್ಟಿಯಿಂದ ಮಾತನಾಡಿದ್ದೇನೆ. ಹೀಗಾಗಿ ತಾಯಿ ಚಾಮುಂಡೇಶ್ವರಿ ಆಶೀರ್ವಾದದಿಂದ ನಮ್ಮ ಜಿಲ್ಲೆಗೆ ಮುಖ್ಯಮಂತ್ರಿ ಭಾಗ್ಯ ಒಲಿದು ಬರಲಿ ಅಂತ ಪ್ರಾರ್ಥನೆ ಮಾಡಿಕೊಳ್ತಿನಿ ಎಂದರು.

ರಾಜಕೀಯವಾಗಿ ನಾನು ಮಾತನಾಡಿಲ್ಲ. ಭವಿಷ್ಯ ಎರಡೂವರೆ ವರ್ಷ ಸಿದ್ದರಾಮಯ್ಯ, ಎರಡೂವರೆ ವರ್ಷ ಕೆಪಿಸಿಸಿ ಅಧ್ಯಕ್ಷರಾಗಿರುವ ಡಿಕೆ ಶಿವಕುಮಾರ್ ಅವರಿಗೆ ಅಂತ ಅವರ ಪಕ್ಷ ತಿರ್ಮಾನ ಮಾಡಿದೆ. ಒಂದು ವೇಳೆ ಅಂತಹ ಅವಕಾಶ ಸಿಕ್ಕಿದ್ರೆ ನಮ್ಮ ಜಿಲ್ಲೆಗೆ ಮುಖ್ಯಮಂತ್ರಿ ಅವಕಾಶ ಲಭಿಸಲಿ ಅಂತ ಮಾತನಾಡಿದ್ದೇನೆ.  ಎರಡೂವರೆ ವರ್ಷ ಅಂತ ಬಹಿರಂಗವಾಗಿ ಯಾರು ಹೇಳಿಲ್ಲ ಅಂದ್ರು,‌ ಪಕ್ಷದಲ್ಲಿ ಆಂತರಿಕವಾಗಿ ಚರ್ಚೆ ನಡೆದಿದೆ ಅಂತ ನಮ್ಮಗಿಂತ ನಿಮಗೆ ಚೆನ್ನಾಗಿ ಗೊತ್ತಿದೆ. ನಾನು ಧರ್ಮದಲ್ಲಿ ರಾಜಕೀಯ ಇರಬಾರದು, ರಾಜಕೀಯದಲ್ಲಿ ಧರ್ಮ ಇರಬೇಕು ಅಂತ ಹೇಳಿಕೊಂಡು ಬಂದವನು‌. ನಾನು ಯಾವತ್ತೂ ಯಾವುದೇ ಪಕ್ಷಕ್ಕೆ, ಮತಕ್ಕೆ ಸೀಮಿತವಾಗಿಲ್ಲ. ನಮ್ಮಗಿರುವ ಆಸೆ ಏನು ಅಂದ್ರೆ ನಮ್ಮ ಜಿಲ್ಲೆ ಅಭಿವೃದ್ಧಿ ಆಗಲಿ. ಕುಡಿಯುವ ನೀರು, ಮೆಟ್ರೋ, ಎತ್ತಿ‌ನಹೊಳೆ, ವಿಮಾನ ನಿಲ್ದಾಣ ಹೀಗೆ ಬೇರೆ ಬೇರೆ ಅಭಿವೃದ್ಧಿಗಳಾಗಬೇಕು. ಇವತ್ತು ಕೂಡಾ ನಮ್ಮ ಜಿಲ್ಲೆಯಲ್ಲಿ ಎಷ್ಟು ಜನ ಗುಡಿಸಲಿನಲ್ಲಿ ವಾಸ ಮಾಡ್ತಿದ್ದಾರೆ. ಹೀಗಾಗಿ ನಮ್ಮ ಜಿಲ್ಲೆಗೆ ಒಂದು ಅವಕಾಶ ಸಿಕ್ಕಿದ್ರೆ. 10 ತಾಲೂಕುಗಳು ಅಭಿವೃದ್ಧಿ ಕಾಣಬಹುದು ಅನ್ನೋ ಉದ್ದೇಶ ಇಟ್ಟುಕೊಂಡು ಮಾತನಾಡಿದ್ದೇನೆ ಎಂದರು‌.

ನಾನು ಯಾವುದೇ ಹೆಸರು ಬಲದ ಮೇಲೆ ಮಾತನಾಡಿಲ್ಲ. ಜಿಲ್ಲೆಯ ಉಸ್ತುವಾರಿಗಳು ಹಾಗೂ ಪ್ರಭಾವಿ ಸಚಿವರು ಇರೋದ್ರಿಂದ ಹೇಳಿದಿನಿ. ಈ ಅವಧಿ ಮುಂದಿನ ಅವಧಿ ಅಂತ ಏನಿಲ್ಲ. ಒಟ್ಟಿನಲ್ಲಿ ನಮ್ಮ ಜಿಲ್ಲೆಗೆ ಒಂದು ಅವಕಾಶ ಸಿಗಲಿ ಎಂದಿದ್ಷಾರೆಯ

Leave a Reply

Your email address will not be published. Required fields are marked *