ತುಮಕೂರು:ಜಿಲ್ಲೆ ಚಿಕ್ಕನಾಯಕನಹಳ್ಳಿಯ ಅಗಸರಹಳ್ಳಿಯಲ್ಲಿ ಈ ಘಟನೆ ನಡೆದಿದೆ.
ನಾಗರತ್ನಮ್ಮ, ಶಂಕರಮ್ಮ, ಮೀನಾಕ್ಷಮ್ಮ ಹಾಗೂ ವಿಶಾಲಮ್ಮ ನಡುವೆ ಜಗಳ ನಡೆದಿದೆ. 1 ಕುಟುಂಬದ ಸದಸ್ಯರಿಂದ ಮತ್ತೊಂದು ಕುಟುಂಬದ ಸದಸ್ಯರ ಮೇಲೆ ಹಲ್ಲೆ ನಡೆಸಲಾಗಿದೆ.
ಮೀನಾಕ್ಷಮ್ಮ, ವಿಶಾಲಮ್ಮ ಮೇಲೆ ದೂರು ದಾಖಲಾಗಿದೆ. ಮೀನಾಕ್ಷಮ್ಮ ಹಾಗೂ ವಿಶಾಲಮ್ಮನಿಗೆ ಸಾಥ್ ನೀಡಿದ್ದು, ಪ್ರಸಾದ್, ಬಾಳೇಗೌಡ, ಕಿರಣ್ ಮೇಲೂ ದೂರು ದಾಖಲಾಗಿದೆ.
ಕಳೆದ ಡಿಸೆಂಬರ್ 6ರಂದು ಪ್ರಕರಣ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಚಿಕ್ಕನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.