ತುಮಕೂರು – ಯಶವಂತಪುರ ರೈಲು ನಿಲ್ದಾಣಗಳ ನಡುವೆ ಮೆಮು ರೈಲು ಸಂಚಾರ ಆರಂಭಿಸಲಿದ್ದು, ಭಾನುವಾರ ಹೊರತುಪಡಿಸಿ ಪ್ರತಿದಿನ ತುಮಕೂರಿನಿಂದ ಬೆಳಗ್ಗೆ 8.45ಕ್ಕೆ ಹೊರಟು 10.25ಕ್ಕೆ ಯಶವಂತಪುರ ತಲುಪಲಿದೆ. ಸಂಜೆ 5.40ಕ್ಕೆ ಯಶವಂತಪುರದಿಂದ ಹೊರಟು 7.05 ಕ್ಕೆ ತುಮಕೂರು ತಲುಪಲಿದೆ. ಈ ರೈಲು ಸಂಚಾರದಿಂದ ಸಂಜೆ ವೇಳೆ ಅರಸೀಕೆರೆ ಪ್ಯಾಸೆಂಜರ್‌ಗಿಂತ ಮುಂಚೆ ಇನ್ನೊಂದು ರೈಲು ಸಂಚಾರ ಆರಂಭಿಸಬೇಕೆಂಬ ಪ್ರಯಾಣಿಕರ ಮನವಿಗೆ ಸಚಿವ ಸೋಮಣ್ಣ ಅವರು ಸ್ಪಂದಿಸಿ ಅನುಕೂಲ ಕಲ್ಪಿಸಿದ್ದಾರೆ ಈ ರೈಲು ತುಮಕೂರು ಯಶವಂತಪುರ ಮಧ್ಯೆ ಬರುವ ಎಲ್ಲ ನಿಲ್ದಾಣಗಳಲ್ಲೂ ನಿಲ್ಲಲಿದೆ. ಕೇಂದ್ರ ಸಚಿವರಾಗಿ ಅಕಾರ ವಹಿಸಿಕೊಂಡಾಗಿನಿಂದ ಹಂತ ಹಂತವಾಗಿ ತುಮಕೂರು ಜಿಲ್ಲೆಯಲ್ಲಿ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತಿರುವ ಸಚಿವರು ವಿಶೇಷವಾಗಿ ರೈಲು ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲ ಕಲ್ಪಿಸುತ್ತಿರುವುದಕ್ಕೆ ವೇದಿಕೆ ಸಚಿವರಿಗೆ ಕೃತಜ್ಞತೆ ಸಲ್ಲಿಸಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ತುಮಕೂರು – ಯಶವಂತಪುರ ಮೆಮು ರೈಲಿಗೆ ಚಾಲನೆ : ಹೀಗಿದೆ ನೋಡಿ ವೇಳಾಪಟ್ಟಿ
