ಉಡುಪಿ : ಚಕ್ರವರ್ತಿ ಸೂಲೆಬೆಲೆ ತಮ್ಮ ಉಡುಪಿ ಪ್ರವಾಸದಲ್ಲಿ ಭಾಷಣ ಮಾಡದಂತೆ ಯಾರೂ ತಡೆಯುತ್ತಿಲ್ಲ, ಅದರೆ ಅವರು ಸುಳ್ಳಿನ ಚಕ್ರವರ್ತಿ ಎಂದು ನಾಡಿನ ಜನತೆಗೆ ಗೊತ್ತಿದೆ, ಉಡುಪಿಯ ಜನ ಶಾಂತಿಪ್ರಿಯರು, ಶಾಂತಿ ಕದಡುವ ಪ್ರಯತ್ನ ಅವರಿಂದ ನಡೆಯಬಾರದು ಎಂದು ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದರು.

ಚಕ್ರವರ್ತಿ ತಮ್ಮ ಮಾತುಗಳಲ್ಲಿ ಭಗವದ್ಗೀತೆ, ರಾಮಾಯಣದ ಉದಾಹರಣೆಗಳನ್ನು ಬಹಳ ಪ್ರಯೋಗಿಸುತ್ತಾರೆ, ಕಪ್ಪನ್ನು ಬಿಳಿ ಮಾಡುವುದರಲ್ಲಿ ಮತ್ತು ಬಿಳಿಯನ್ನು ಕಪ್ಪು ಮಾಡುವುದರಲ್ಲಿ ಅವರು ಪರಿಣಿತರು ಎಂದು ಸಚಿವೆ ಹೆಬ್ಬಾಳ್ಕರ್ ಹೇಳಿದರು. ತಮ್ಮ ಸರ್ಕಾರ ಯಾರ ವಾಕ್ ಸ್ವಾತಂತ್ರ್ಯಕ್ಕೂ ಅಡ್ಡಿ ಬರಲ್ಲ ಎಂದು ಅವರು ಹೇಳಿದರು.