Metro ಕೆಂಪು ಮಾರ್ಗದ ಬಗ್ಗೆ ಕೇಂದ್ರ ಸಚಿವರ ಅಪ್ಡೇಟ್

Metro ಕೆಂಪು ಮಾರ್ಗದ ಬಗ್ಗೆ ಕೇಂದ್ರ ಸಚಿವರ ಅಪ್ಡೇಟ್

ಬೆಂಗಳೂರು: ಬೆಂಗಳೂರಿನಲ್ಲಿ ಮೆಟ್ರೋ ಜಾಲ ವಿಸ್ತರಿಸುತ್ತಿರುವ ‘ಬೆಂಗಳೂರು ಮೆಟ್ರೋ ರೈಲು ನಿಗಮ’ (BMRCL) ಪ್ರಮುಖ ಪ್ರದೇಶಗಳಾದ ಹೆಬ್ಬಾಳದಿಂದ ಸರ್ಜಾಪುರವರೆಗೆ ಕೆಂಪು ಮಾರ್ಗ ನಿರ್ಮಿಸಲಿದೆ. ಮೆಟ್ರೋ ಹಂತ -2ರ ಅಡಿಯಲ್ಲಿ ರಾಜ್ಯ ಸರ್ಕಾರಕ್ಕೆ ಸಲ್ಲಿಸಿದೆ. ಈ ಪ್ರಸ್ತಾವನೆ ಕೇಂದ್ರ ಸರ್ಕಾರಕ್ಕೆ ಸಲ್ಲಿಕೆ ಆಗುತ್ತಿದ್ದಂತೆ ಕೇಂದ್ರ ಸರ್ಕಾರ ಸಾವಿರಾರು ಕೋಟಿ ರೂಪಾಯಿ ವೆಚ್ಚದ ಯೋಜನೆ ಪರಿಶೀಲಿಸಲಿದೆ.

ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳು ಮತ್ತು ವಿದ್ಯುತ್ ಸಚಿವ ಮನೋಹರ್ ಲಾಲ್ ಖಟ್ಟರ್ ಅವರು ಹೆಬ್ಬಾಳ-ಸರ್ಜಾಪುರ ಮೆಟ್ರೋ ಹಾಗೂ ಇತರ ಮೂಲಸೌಕರ್ಯ ಪ್ರಸ್ತಾಪಿಸಿದರು. ಶುಕ್ರವಾರ ಕರ್ನಾಟಕದ ಸಚಿವರು ಮತ್ತು ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ಬೆಂಗಳೂರಿನಲ್ಲಿ ನಗರದ ಹಲವು ಯೋಜನೆಗಳ ಕಾರ್ಯಕ್ಷಮತೆ ಪರಿಶೀಲಿಸಿ ಅವರು ಮಾತನಾಡಿದರು. ರಾಜ್ಯ ಸರ್ಕಾರ ಪ್ರಸ್ತಾವನೆ ಸಲ್ಲಿಸಿದ ನಂತರ ಕೇಂದ್ರ ಸರ್ಕಾರ ನಮ್ಮ ಮೆಟ್ರೋ ಹಂತ 2 ಅಂದಾಜು ವೆಚ್ಚ ಪರಿಶೀಲಿಸುತ್ತದೆ ಎಂದರು.

ಪ್ರಸ್ತಾವನೆಯಲ್ಲಿ ಈ ಮಾರ್ಗ ನಿರ್ಮಿಸಲು ₹9,729.90 ಕೋಟಿ ವೆಚ್ಚ ಅಂದಾಜು ಮಾಡಲಾಗಿದೆ. ಸದ್ಯ ಮಾರ್ಗ ಪ್ರಸ್ತಾವನೆ ರಾಜ್ಯ ಸರ್ಕಾರ ಅಂಗಳದಲ್ಲಿದೆ. ಅಲ್ಲಿ ಕೇಂದ್ರಕ್ಕೆ ಯೋಜನೆಯ ವರದಿ ಸಲ್ಲಿಕೆ ಆಗುತ್ತಿದ್ದಂತೆ ಪರಿಶೀಲನೆ ನಡೆಯಲಿದೆ. ಕರ್ನಾಟಕ ಸರ್ಕಾರವು ಹಂತ 3ಎ ಅಡಿಯಲ್ಲಿ ಸುಮಾರು ₹28,405 ಕೋಟಿ ಅಂದಾಜು ವೆಚ್ಚದಲ್ಲಿ ಕೆಂಪು ಮಾರ್ಗ ನಿರ್ಮಾಣಕ್ಕೆ ಮುಂದಾಗಿದೆ.

ಅಂದಾಜು ವೆಚ್ಚ ತಜ್ಞರ ಪರಿಶೀಲನೆ ಹೆಬ್ಬಾಳದಿಂದ ಐಟಿಕಾರಿಡಾರ್ ಸಂಪರ್ಕಿಸುವ ಸರ್ಜಾರ್ಪುರವರೆಗೆ ಒಟ್ಟು 36.59 ಕಿಲೋ ಮೀಟರ್ ಮಾರ್ಗ ನಿರ್ಮಾಣ ಯೋಜನೆಗೆ ಎಲ್ಲ ಸಿದ್ಧತೆ ಆರಂಭವಾಗಿವೆ. ಈ ಪ್ರಸ್ತಾವನೆಗೆ ಸಂಬಂಧಸಿದಂತೆ ತಜ್ಞರ ಜೊತೆಗೂಡಿ ಪರಿಶೀಲಿಸುವ ಅಗತ್ಯವಿದೆ. ಆದ್ದರಿಂದ ರಾಜ್ಯ ಸರ್ಕಾರ ಯೋಜನೆ ಕುರಿತು ಕೈಗೊಳ್ಳುವ ತಿರ್ಮಾನದ ಬಳಿಕ ಕೇಂದ್ರ ಸರ್ಕಾರ ನಮ್ಮ ಮೆಟ್ರೋ ಕೆಂಪು ಮಾರ್ಗ ಯೋಜನೆಗೆ ಅನುಮೋದನೆ ನೀಡುವ ಕುರಿತು ನಿರ್ಧಾರ ಪ್ರಕಟಿಸಲಿದೆ ಎಂದು ತಿಳಿಸಿದರು.

ರಾಜ್ಯ ಸರ್ಕಾರ ಹೆಬ್ಬಾಳ-ಸರ್ಜಾಪುರ ಅಂದಾಜು ವೆಚ್ಚವನ್ನು ಕಳೆದ ವರ್ಷ ಡಿಸೆಂಬರ್ ಒಪ್ಪಿ ಅನುಮೋದನೆ ನೀಡಿದೆ. ಇದೀಗ ಕೇಂದ್ರವು ಅಂದಾಜು ವೆಚ್ಚ ಪರಿಶೀಲಿಸಲಿದೆ. ಬೆಂಗಳೂರಿನಲ್ಲಿ ತ್ಯಾಜ್ಯ ಸಮಸ್ಯೆಯನ್ನು ಪರಿಹರಿಸುವಂತೆ ಅಧಿಕಾರಿಗಳಿಗೆ ನಿರ್ದೇಶಿಸಿದರು. ರಸ್ತೆ ದಟ್ಟಣೆಯನ್ನು ಕಡಿಮೆ ಮಾಡಲು ಮತ್ತು ಸಾರ್ವಜನಿಕ ಸಾರಿಗೆಯ ಹೆಚ್ಚಿನ ಬಳಕೆಯನ್ನು ಉತ್ತೇಜಿಸುವಂತೆ ಹೇಳಿದರು.

Leave a Reply

Your email address will not be published. Required fields are marked *