ಉತ್ತರ ಪ್ರದಶ || 20 ದಿನಗಳ ಧರಣಿಗೆ ಗೆಲುವು : ಶಿವಂ ಸೋನ್ಕರ್ಗೆ ಸಿಕ್ತು ಪಿಹೆಚ್ಡಿ ಪ್ರವೇಶ

ಉತ್ತರ ಪ್ರದಶ || 20 ದಿನಗಳ ಧರಣಿಗೆ ಗೆಲುವು : ಶಿವಂ ಸೋನ್ಕರ್ಗೆ ಸಿಕ್ತು ಪಿಹೆಚ್ಡಿ ಪ್ರವೇಶ

ಉತ್ತರ ಪ್ರದಶ : ಬನಾರಸ್ ಹಿಂದೂ ವಿಶ್ವವಿದ್ಯಾಲಯ (BHU)ನಲ್ಲಿ ಪಿಹೆಚ್ಡಿ ಪ್ರವೇಶಕ್ಕಾಗಿ ಕಳೆದ 20 ದಿನಗಳಿಂದ ಧರಣಿಯಲ್ಲಿ ತೊಡಗಿದ್ದ ವಿದ್ಯಾರ್ಥಿ ಶಿವಂ ಸೋನ್ಕರ್ ಗೆ ಅಂತಿಮವಾಗಿ ಜಯ ಸಿಕ್ಕಿದೆ. ವಿಶ್ವವಿದ್ಯಾಲಯದ ಆಡಳಿತ ಮಂಡಳಿಯು ಶಿವಂನಿಗೆ ಪಿಹೆಚ್ಡಿ ಪ್ರವೇಶ ನೀಡಿದ್ದು, ಜೊತೆಗೆ ಇನ್ನಿತರ ವಿದ್ಯಾರ್ಥಿಗಳಿಗೂ ಪ್ರವೇಶದ ಅವಕಾಶ ಕಲ್ಪಿಸಲಾಗಿದೆ..

20 ದಿನಗಳ ಹೋರಾಟ, ವಿಜ್ಞಾನಿ ಕನಸು ಸಫಲ

ಶಿವಂ ಸೋನ್ಕರ್ ಪಿಹೆಚ್ಡಿ ಪ್ರವೇಶಕ್ಕೆ ಉಳಿದಿದ್ದ ಆಸನಗಳ ಬಗ್ಗೆ ಪ್ರಶ್ನೆ ಎತ್ತಿದ್ದರು.  ವಿಶ್ವವಿದ್ಯಾಲಯದ ಪ್ರವೇಶ ನೀತಿಯ ಬಗ್ಗೆ ಶಂಕೆ ವ್ಯಕ್ತಪಡಿಸಿ ಕುಲಪತಿಗಳ ನಿವಾಸದ ಎದುರು ಧರಣಿ ಕೈಗೊಂಡಿದ್ದರು. ಇದಕ್ಕೆ ವಿರೋಧ ಪಕ್ಷದ ನಾಯಕರು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಬೆಂಬಲ ವ್ಯಕ್ತವಾಯಿತು. 

ಆಕ್ಷನ್ ನಂತರ ಏನು..?

ವಿಶ್ವವಿದ್ಯಾಲಯ ತನ್ನ ನಿಲುವು ಮರುಪರಿಶೀಲಿಸಿ, ಪಿಹೆಚ್ಡಿ ಪ್ರವೇಶಕ್ಕೆ ವಿಂಡೋ ತೆರೆಯಿತು.  ಮೊದಲನೇ ದಿನವೇ ಶಿವಂನಿಗೆ ಪ್ರವೇಶ ಅವಕಾಶ ಲಭಿಸಿತು.  ಈಗ ಆತನು ಮಾಲವೀಯ ರಿಸರ್ಚ್ ಸ್ಟಡೀಸ್ ಸೆಂಟರ್ನಲ್ಲಿ ಪಿಹೆಚ್ಡಿ ವಿದ್ಯಾರ್ಥಿಯಾಗಿದ್ದಾರೆ.  ಈ ನಿರ್ಧಾರದ ಪ್ರಯೋಜನದಿಂದ ಹಲವಾರು ಕಾಯುತ್ತಿರುವ ವಿದ್ಯಾರ್ಥಿಗಳಿಗೂ ಪ್ರವೇಶದ ಅವಕಾಶ ದೊರೆಯಲಿದೆ.

ಪ್ರಧಾನಿಗೆ ಧನ್ಯವಾದ

ಶಿವಂ, ಪ್ರವೇಶ ನಂತರ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರಿಗೆ ಧನ್ಯವಾದ ತಿಳಿಸಿದ್ದಾರೆ.  ನನ್ನ ಹೋರಾಟಕ್ಕೆ ಬೆಂಬಲ ನೀಡಿದ ಎಲ್ಲರಿಗೂ ನಾನು ಋಣಿ ಎಂದು ಹೇಳಿದ್ದಾರೆ.

ಶಿವಂ ಸೋನ್ಕರ್ನ ಧೈರ್ಯ ಹಾಗೂ ಬದ್ಧತೆಯ ಹೋರಾಟವು ಅಲ್ಲಿನ ಶಿಕ್ಷಣ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆಗೆ ಕಾರಣವಾಯಿತು. ವಿದ್ಯಾರ್ಥಿಗಳ ಹಕ್ಕುಗಳು ಹೇಗೆ ಗಟ್ಟಿಯಾಗಿರಬೇಕು ಎಂಬುದಕ್ಕೆ ಇದು ಉತ್ತಮ ಉದಾಹರಣೆ.

Leave a Reply

Your email address will not be published. Required fields are marked *