ಉತ್ತರ ಪ್ರದೇಶ || 30 ತಿಂಗಳಲ್ಲಿ 25 ಬಾರಿ ತಾಯಿ ಆದ ಮಹಿಳೆ ; ಬಯಲಾಯ್ತು ಅಸಲಿ ಸತ್ಯ..?

ಉತ್ತರ ಪ್ರದೇಶ || 30 ತಿಂಗಳಲ್ಲಿ 25 ಬಾರಿ ತಾಯಿ ಆದ ಮಹಿಳೆ ; ಬಯಲಾಯ್ತು ಅಸಲಿ ಸತ್ಯ..?

ಉತ್ತರ ಪ್ರದೇಶ : ರಾಜ್ಯದ ಅಗ್ರಾದ ಫತೇಹಾಬಾದ್ ಸಮುದಾಯ ಆರೋಗ್ಯ ಕೇಂದ್ರದಲ್ಲಿ (CHC) ವಿಚಿತ್ರ ಪ್ರಕರಣವೊಂದು ಬೆಳಕಿಗೆ ಬಂದಿದೆ. ಆರೋಗ್ಯ ಇಲಾಖೆ ನಡೆಸಿದ ನಿಯಮಿತ ಆಡಿಟ್ ಸಮಯದಲ್ಲಿ ಈ ಅಚ್ಚರಿಯ ವಿಷಯ ಬಯಲಾಗಿದೆ. ದಾಖಲೆ ಪ್ರಕಾರ ಒಂದೇ ಹೆಸರಿನ ಮಹಿಳೆ 30 ತಿಂಗಳಲ್ಲಿ 25 ಬಾರಿ ತಾಯಿಯಾಗಿದ್ದಾರೆ.

ಹೌದು… “ಜನನಿ ಸುರಕ್ಷಾ ಯೋಜನೆ” ಆವರಣದಲ್ಲಿ ಇದು ನಡೆದಂತಾಗಿದೆ. ದಾಖಲೆಗಳ ಪ್ರಕಾರ, ಈ ಮಹಿಳೆಯ ಖಾತೆಗೆ ಸರಕಾರದಿಂದ ಒಟ್ಟು ₹45,000 ವರ್ಗಾಯಿಸಲಾಗಿದೆ. ಪ್ರತಿ ಡಿಲಿವರಿ ಬಳಿಕ ಸರಕಾರಿ ಪ್ರೋತ್ಸಾಹಧನ ನೀಡಲಾಗಿದೆ.

ಆಡಿಟ್ ತಂಡದವರು ದಾಖಲಾತಿಗಳನ್ನು ಪರಿಶೀಲಿಸುತ್ತ ಹೋಗುತ್ತಿದ್ದಂತೆ, ಒಂದೇ ಹೆಸರಿನ ಮಹಿಳೆ 25 ಬಾರಿ ತಾಯಿ ಆದದ್ದು ಹಾಗೂ 5 ಬಾರಿ ಆಪರೇಷನ್ ಮಾಡಿಸಿಕೊಂಡಿರುವ ದಾಖಲೆಗಳು ಕಂಡುಬಂದಿವೆ. ಕೂಡಲೇ ಈ ವಿಷಯವನ್ನು ಸಿಎಂಒ ಆಗ್ರಾ ಡಾ. ಅರುಣ್ ಶ್ರೀವಾಸ್ತವರಿಗೆ ತಿಳಿಸಲಾಗಿದ್ದು, ಅವರು ತುರ್ತುವಾಗಿ ಸ್ಥಳಕ್ಕೆ ಭೇಟಿ ನೀಡಿ ತನಿಖೆಗೆ ಆದೇಶಿಸಿದ್ದಾರೆ.

ಇದನ್ನೆಲ್ಲಾ ಸರಕಾರದ ಯೋಜನೆಗಳ ಹಣ ಹಗರಣಕ್ಕೆ ಬಳಸಲಾಗಿದೆ ಒಂದೇ ಹೆಸರಿನಲ್ಲಿ ಹಲವಾರು ಬಾರಿ ಪ್ರಸವ ಹಾಗೂ ಆಪರೇಷನ್ ದಾಖಲೆಗೊಳಿಸಿ, ಪ್ರತಿ ಬಾರಿ ಹಣ ವರ್ಗಾಯಿಸಿ ಸುಮಾರು ₹45,000 ರ ಹಗರಣ ನಡೆದಿದೆ.

Leave a Reply

Your email address will not be published. Required fields are marked *