“ವಾಜಪೇಯಿ ಕಾಲು ಹಿಡಿದು ಯತ್ನಾಳ್ ಸಚಿವರಾಗಿದ್ದರು!” – ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ವಾಗ್ದಾಳಿ.

"ವಾಜಪೇಯಿ ಕಾಲು ಹಿಡಿದು ಯತ್ನಾಳ್ ಸಚಿವರಾಗಿದ್ದರು!" – ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ವಾಗ್ದಾಳಿ.

ಬೆಂಗಳೂರು: ವಾಜಪೇಯಿ ಅವರ ಕಾಲು ಹಿಡಿದು ಯತ್ನಾಳ್​ ಸಚಿವರಾಗಿರಬೇಕು. ಮಲ್ಲಿಕಾರ್ಜುನ ಖರ್ಗೆ ಅವರ ಬಗ್ಗೆ ಮಾತನಾಡುವ ಯೋಗ್ಯತೆ ನಿಮಗಿಲ್ಲ. ನಿಮ್ಮದು ಡ್ರಾಮಾ ಕಂಪನಿ ಎಂದು ಚಿಕ್ಕಬಳ್ಳಾಪುರ ಕಾಂಗ್ರೆಸ್​ ಶಾಸಕ ಪ್ರದೀಪ್​ ಈಶ್ವರ್​ ಹೇಳಿದ್ದಾರೆ. ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ ಅವರು, ವಿಪಕ್ಷ ನಾಯಕ ಆರ್​. ಅಶೋಕ್​, ಪರಿಷತ್​ ಸದಸ್ಯ ಸಿ.ಟಿ. ರವಿ ಹೇಳಿಕೆಗೂ ಕೌಂಟರ್​ ಕೊಟ್ಟಿದ್ದಾರೆ. ಸಚಿವ ಪ್ರಿಯಾಂಕ್​ ಖರ್ಗೆ ಅವರಿಗೆ ಬಹಿರಂಗ ಚರ್ಚೆಗೆ ಬನ್ನಿ ಎಂದು ಸಿ.ಟಿ.ರವಿ ಆಹ್ವಾನ ಕೊಟ್ಟಿದ್ದಾರೆ. ಮೊದಲು ನನ್ನ ಜೊತೆ ನೀವು ಬಹಿರಂಗ ಚರ್ಚೆ ಗೆಲ್ಲಿ. ಆ ಮೇಲೆ ಖರ್ಗೆಯವರ ಬಳಿ ನಾನೇ ಕರೆದುಕೊಂಡು ಹೋಗ್ತೀನಿ ಎಂದು ಪ್ರದೀಪ್​ ಸವಾಲು ಹಾಕಿದ್ದಾರೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *