Vani Vilasa Sagara: ಬರೋಬ್ಬರಿ 89 ವರ್ಷದ ಬಳಿಕ ಎರಡನೇ ಭಾರಿ ಕೋಡಿ ಹರಿಯಲಿದೆ ಡ್ಯಾಂ ನೀರು

Vani Vilasa Sagara: ಬರೋಬ್ಬರಿ 89 ವರ್ಷದ ಬಳಿಕ ಎರಡನೇ ಭಾರಿ ಕೋಡಿ ಹರಿಯಲಿದೆ ಡ್ಯಾಂ ನೀರು

ಹಿರಿಯೂರು: ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಜನರ ದಶಕಗಳ ಬಳಿಕ ಮತ್ತೊಮ್ಮ ವಾಣಿ ವಿಲಾಸ ಸಾಗರ ಜಲಾಶಯದಲ್ಲಿ ನೀರು ಕೋಡಿ ಹರಿಯವುದನ್ನು ಕೆಲವೇ ದಿನಗಳಲ್ಲಿ ನೋಡಲಿದ್ದಾರೆ. ಏಕಂದರೆ ವಾಣಿವಿಲಾಸ ಸಾಗರ ಡ್ಯಾಂ ಬಹುತೇಕ ಭರ್ತಿಯಾಗಿದೆ. ಮೈದುಂಬಿ ಹರಿಯಲು ಕೇವಲ 2.75 ಅಡಿ ಬಾಕಿ ಇದೆ

30 ಟಿಎಂಸಿ ನೀರಿನ ಸಾಮರ್ಥ್ಯ ಹೊಂದಿರುವ ಈ ವಾಣಿ ವಿಲಾಸ ಸಾಗರ ಡ್ಯಾಂ ಭರ್ತಿಯಾಗಿ ಕೋಡಿ ಬೀಳಲು ಕೇವಲ 2.75 ಅಡಿಯಷ್ಟು ನೀರು ಸಂಗ್ರಹವಾಗುವುದು ಬಾಕಿ ಇದೆ. ನಿರಂತರ ಮಳೆಯಿಂದ ಭರ್ತಿಯಾಗಿರುವ ಡ್ಯಾಂ ನೀರು ಕೆಲವೇ ದಿನಗಳಲ್ಲಿ ಕೋಡಿ ಹರಿಯಲಿದೆ.

ಈ ಜಲಾಶಯದ ಒಟ್ಟು ಎತ್ತರ 135 ಅಡಿ ಇದ್ದು, ಅದರಲ್ಲಿ ನೀರು ಕೋಡಿ ಹರಿದು ಬೀಳಲು ಒಟ್ಟು 130 ಅಡಿವರೆಗೆ ನೀರು ಭರ್ತಿಯಾಗಬೇಕು. ಅದ್ಯ ನೀರಿನ ಮಟ್ಟ 127.15 ಅಡಿ ತಲುಪಿದೆ. ಡ್ಯಾಂ ಒಡಲು ಭರ್ತಿಗೆ ಕ್ಷಣಗಣನೆ ಆರಂಭವಾಗಿದೆ. ಡ್ಯಾಂ ನೀರು ನೋಡಲು ಅಕ್ಕಪಕ್ಕದ ಊರಿನವರು ಆಗಮಿಸುತ್ತಿದ್ದಾರೆ.

ಜಲಾಶಯಕ್ಕೆ ಹರಿದು ಬರುತ್ತಿದ್ದ ಒಳಹರಿವಿನ ಪ್ರಮಾಣದಲ್ಲಿ ಕಡಿಮೆಯಾಗಿದೆ. ಈ ನಿಟ್ಟಿನಲ್ಲಿ ಕೋಡಿ ಬೀಳಲು ಸ್ವಲ್ಪ ಹಿನ್ನಡೆಯಾಗಿದೆ. ಇಂದು ವಾಣಿ ವಿಲಾಸ ಜಲಾಶಯಕ್ಕೆ 577 ಕ್ಯೂಸೆಕ್ ಒಳಹರಿವು ನೀರು ಹರಿದು ಬರುತ್ತಿದೆ. ಇದರಿಂದ ಜಲಾಶಯದಲ್ಲಿನ ನೀರಿನ ಮಟ್ಟ 127.15 ಅಡಿ ತಲುಪಿದೆ.

Leave a Reply

Your email address will not be published. Required fields are marked *