ವೀರವನಿತೆ ಒನಕೆ ಓಬವ್ವ ಜಯಂತಿ  ಬಹಳ ಅದ್ದೂರಿಯಾಗಿ ನಡೆಯಿತು

ವೀರವನಿತೆ ಒನಕೆ ಓಬವ್ವ ಜಯಂತಿ ಬಹಳ ಅದ್ದೂರಿಯಾಗಿ ನಡೆಯಿತು

ಬೆಂಗಳೂರು : ಕನ್ನಡ ಮತ್ತು ಸಂಸ್ಕೃತಿ ಇಲಾಖೆವತಿಯಿಂದ ವೀರವನಿತೆ ಒನಕೆ ಓಬವ್ವ ಜಯಂತಿ ಬೆಂಗಳೂರಿನ ಕನ್ನಡ ಭವನದಲ್ಲಿ ನಡೆಯುತ್ತಿರುವ ಕಾರ್ಯಕ್ರಮ.

ವೇದಿಕೆಯಲ್ಲಿ ಜ್ಞಾನಪ್ರಕಾಶ ಸ್ವಾಮೀಜಿ ಉರಿಲಿಂಗಪೆದ್ದಿ ಮಠ, ಡಾ. ಮಂಜುಳ ಸರ್ಕಾರದ ಕಾರ್ಯದರ್ಶಿಗಳು ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಡಾ. ಧರಣೀದೇವಿ ಮಾಲಗತ್ತಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಡಾ. ಹೆಚ್ ಎಲ್ ಪುಷ್ಬಾ, ಡಾ. ಮಾನಸ , ವಿ. ಆರ್ ಗೋವಿಂದ್ ಸ್ವಾಮಿ ಸೇರಿದಂತೆ ಅನೇಕ  ಉಪಸ್ಥಿತರಿದ್ದರು.

ವೀರವನಿತೆ ಒನಕೆ ಓಬವ್ವ ಜಯಂತಿ ಇತಿಹಾಸದ ಪುಟಗಳನ್ನು ತಿರುವಿ ನೋಡಿದಾಗ ಬಹುತೇಕ ರಾಜ-ಮಹಾರಾಜರು, ರಾಣಿ-ಮಹಾರಾಣಿಯರು ಮತ್ತು ಮಂತ್ರಿಗಳು ತಮ್ಮ ನಾಡಿನ, ರಾಜ್ಯದ ಅಭಿವೃದ್ಧಿಗಾಗಿ, ವಿಸ್ತಾರಕ್ಕಾಗಿ ಮತ್ತು ಪ್ರಜೆಗಳ ಹಿತರಕ್ಷಣೆಗಾಗಿ ರಾಜ್ಯಾಡಳಿತ ಮಾಡಿರುವುದು ಕಂಡುಬರುತ್ತದೆ. ಕನ್ನಡ ನಾಡಿನಲ್ಲಿ ಚಿತ್ರದುರ್ಗವನ್ನು ಆಳ್ವಿಕೆ ಮಾಡಿದ ರಾಜ ಮದಕರಿನಾಯಕ ಕೂಡ ಒಬ್ಬ ಸಮರ್ಥ ರಾಜನಾಗಿರುವುದನ್ನು ಇತಿಹಾಸದಲ್ಲಿ ಓದುತ್ತೇವೆ. ಇವರ ಕಾಲದಲ್ಲಿ ಮಹಾತಾಯಿ ವೀರವನಿತೆ ಒನಕೆ ಓಬವ್ವ ಒಬ್ಬ ಸಾಮಾನ್ಯ ಕಾವಲುಗಾರನ ಹೆಂಡತಿಯಾಗಿ ಸಾಮಾನ್ಯ ಜೀವನ ನಡೆಸುತ್ತ ಸಾಗುವಾಗ, ತಮ್ಮನ್ನು ಸಾಕಿ-ಸಲಹುತ್ತಿರುವ ರಾಜರಿಗೆ ಆಪತ್ತು ಬಂದಾಗ ಸಮಯಪ್ರಜ್ಞೆಯಿಂದ ತನ್ನಲ್ಲಿರುವ ಶಕ್ತಿಯನ್ನು ಒಗ್ಗೂಡಿಸಿಕೊಂಡು, ಕೈಗೆ ಸಿಕ್ಕಿದ ಒನಕೆಯನ್ನು ಆಯುಧವಾಗಿ ಬಳಸಿ, ಶತ್ರು ಸೈನ್ಯವನ್ನು ಸದೆಬಡಿದು, ಚಿತ್ರದುರ್ಗಕ್ಕೆ ಒದಗುವ ಅಪಾಯವನ್ನು ತಪ್ಪಿಸಿ. ಕೋಟೆಯನ್ನು ರಕ್ಷಿಸುವಲ್ಲಿ ಸ್ವಾಮಿನಿಷ್ಠೆಯನ್ನು ಪ್ರದರ್ಶಿಸಿದ ಘಟನೆ ಇತಿಹಾಸದಲ್ಲಿಯೇ ಅಚ್ಚಳಿಯದಂತೆ ಉಳಿದಿದೆ.

ಈ ಧೀರಮಹಿಳೆಯ ಬದುಕು, ಸಾಧನೆ, ವ್ಯಕ್ತಿತ್ವ ನಮ್ಮೆಲ್ಲರಿಗೂ ಪ್ರೇರಕವಾಗಿರುವ ಹಿನ್ನೆಲೆ ವೀರವನಿತೆ ಒನಕೆ ಓಬವ್ವ ಜಯಂತಿ ಆಚರಣೆ ಮಾಡಲಾಯಿತು.

Leave a Reply

Your email address will not be published. Required fields are marked *