ಬೆಂಗಳೂರು: ನೆರೆ ರಾಜ್ಯಗಳಿಗೆ ಮೊಂತಾ ಚಂಡಮಾರುತ ಅಪ್ಪಳಿಸಿರುವ ಬೆನ್ನಲ್ಲೇ ಕರ್ನಾಟಕದ ಹಲವು ಜಿಲ್ಲೆಗಳು ವರುಣಾರ್ಭಟಕ್ಕೆ ತತ್ತರಿಸಿದ್ದವು. ಈ ಹಿನ್ನೆಲೆ ರಾಜ್ಯದಲ್ಲಿ ತರಕಾರಿ ಬೆಲೆ ಗಗನಕ್ಕೇರಿದೆ. ಹೆಚ್ಚಾಗಿರುವ ತರಕಾರಿ ಬೆಲೆ ಕೇಳಿದ ಗ್ರಾಹಕರು ಖರೀದಿ ಮಾಡಲು ಹಿಂದೇಟು ಹಾಕುತ್ತಿದ್ದು, ವ್ಯಾಪಾರಿಗಳು ಖರೀದಿದಾರರಿಲ್ಲದೇ ನಷ್ಟವಾಗುತ್ತಿದೆಯೆಂದು ಬೇಸರ ವ್ಯಕ್ತಪಡಿಸುತ್ತಿದ್ದಾರೆ.
ತರಕಾರಿ ಕೊಳ್ಳಲು ಹಿಂಜರಿಯುತ್ತಿರುವ ಗೃಹಿಣಿಯರು
ಸೈಕ್ಲೋನ್ ಎಫೆಕ್ಟ್ನಿಂದ ತಮಿಳುನಾಡು, ಕೇರಳ, ಆಂಧ್ರಪ್ರದೇಶ, ತೆಲಂಗಾಣ ಸೇರಿದಂತೆ ಕರ್ನಾಟಕದ ಕೆಲ ಭಾಗದಲ್ಲೂ ಭಾರೀ ಮಳೆಯಾಗಿತ್ತು. ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ದೊಡ್ಡಬಳ್ಳಾಪುರ, ಕೋಲಾರ, ರಾಮನಗರದಲ್ಲಿ ಅಕಾಲಿಕ ಮಳೆಯಾಗಿತ್ತು. ಇದರಿಂದ ತರಕಾರಿ ಬೆಳೆ ಹಾಳಾಗಿದ್ದು, ಸರಿಯಾಗಿ ಬೆಳೆ ಬಂದಿಲ್ಲ. ಬೆಳೆದ ಬೆಳೆ ಕೈಗೆ ಬರದ ಕಾರಣ ತರಕಾರಿಗಳ ಬೆಲೆ ಗಗನಕ್ಕೇರಿದೆ.ಯಾವ ತರಕಾರಿ ಬೆಲೆ ಕೇಳಿದರೂ ಗ್ರಾಹಕರು ಕಂಗಾಲಾಗುತ್ತಿದ್ದಾರೆ. ಇದರಿಂದ ಯಾರು ತರಕಾರಿ ಕೊಳ್ಳಲು ಬರುತ್ತಿಲ್ಲ, ವ್ಯಾಪಾರ ಸರಿಯಾಗಿ ನಡೆಯದೇ ಇದ್ದರೆ ಜೀವನ ಸಾಗಿಸುವುದು ಕಷ್ಟ ಎಂದು ತರಕಾರಿ ವ್ಯಾಪಾರಿಗಳು ತನ್ನ ನೋವು ತೋಡಿಕೊಂಡಿದ್ದಾರೆ.
ತರಕಾರಿ ಬೆಲೆ ಕೇಳಿ ಗೃಹಿಣಿಯರು ಖರೀದಿಗೆ ಹಿಂದೇಟು ಹಾಕುತ್ತಿದ್ದಾರೆ. ಒಂದು ಕೆಜಿ ತರಕಾರಿ ಕೊಂಡುಕೊಳ್ಳುವ ಮಹಿಳೆಯರು ಅರ್ಧ, ಕಾಲು ಕೆಜಿ ಕೊಳ್ಳಲು ಮುಂದಾಗುತ್ತಿದ್ದಾರೆ. ಈ ಬೆಲೆಯೇರಿಕೆಯ ಸಮಯದಲ್ಲಿ ತರಕಾರಿ ಕೊಂಡು ಅಡುಗೆ ಮಾಡುವುದು ಕಷ್ಟ ಎಂದು ಹೇಳಿದ್ದಾರೆ.
ಬೆಂಳೂರಿನಲ್ಲಿ ಇವತ್ತಿನ ತರಕಾರಿ ಬೆಲೆ ( ರೂಪಾಯಿಗಳಲ್ಲಿ)
- ನುಗ್ಗೆಕಾಯಿ-ಕೆಜಿ- 140 ರಿಂದ 150
- ಬಟಾಣಿ ಫಾರಂ- 260 ರಿಂದ 270
- ಬೀನ್ಸ್- 90 ರಿಂದ 100
- ಈರುಳ್ಳಿ- 40 ರಿಂದ 50
- ಜವಳಿಕಾಯಿ- 100 ರಿಂದ 120
- ಶುಂಠಿ- 100 ರಿಂದ 110
- ಕ್ಯಾರೆಟ್- 90 ರಿಂದ 100
- ತೊಗರಿಕಾಯಿ-80 ರಿಂದ 100
- ಹಸಿ ಮೆಣಸಿನಕಾಯಿ- 80 ರಿಂದ 100
- ಟೊಮೊಟೋ- 30 ರಿಂದ 40
- ಆಲೂಗಡ್ಡೆ- 50 ರಿಂದ 60
- ಹೀರೇಕಾಯಿ- 50 ರುಪಾಯಿ 60
- ಬದನೆಕಾಯಿ- 60 ರಿಂದ 70
- ಬೆಂಡೆಕಾಯಿ- 70 ರಿಂದ 80
- ಬಿಟ್ರೂಟ್- 70 ರಿಂದ 80
- ಹೂಕೋಸು- 80 ರಿಂದ 90
- ಕ್ಯಾಪ್ಸಿಕಂ- 80 ರಿಂದ 90
For More Updates Join our WhatsApp Group :
