ವಿಜಯನಗರ: ಜಿಲ್ಲೆ ಕೂಡ್ಲಿಗಿ ತಾಲೂಕಿನ ಕುರಿಹಟ್ಟಿ ಗ್ರಾಮದಲ್ಲಿ ಶ್ರೀಮಾರಿಕಾಂಬೆ ಜಾತ್ರೆ ಬಹು ವಿಜೃಂಭಣೆಯಿAದ ಜರುಗಿತು.
ಜಾತ್ರೆ ನಿಮಿತ್ತ ಪೂರ್ವತಯಾರಿಗಳು ನಡೆದಿದ್ದವು, ಧಾರ್ಮಿಕ ಹಾಗೂ ಸಾಂಪ್ರದಾಯಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಡೊಳ್ಳು ವಾದ್ಯ ಸೇರಿದಂತೆ ಅನೇಕ ವಾದ್ಯ ವೃಂದಗಳೊAದಿಗೆ, ಶ್ರೀಮಾರಿಕಾಂಬೆ ಉತ್ಸವ ಜರುಗಿತು. ಗ್ರಾಮ ಹಾಗೂ ನೆರೆ ಹೊರೆ ಗ್ರಾಮಗಳ ಹೆಂಗಳೆಯರು, ಅಸಂಖ್ಯಾತ ಭಕ್ತರು ಶ್ರೀಮಾರಿಕಾಂಬೆ ದೇವಿ ದರ್ಶನ ಪಡೆದು, ಶ್ರದ್ಧೆ ಭಕ್ತಿಯಿಂದ ಸಿಹಿ ಖಾದ್ಯಗಳನ್ನು ಫಲಗಳನ್ನು ನೈವೇದ್ಯ ಮಾಡಿದರು.
ಮುತ್ತೈದೆಯರು ಮಂಗಳ ಸಾಮಾಗ್ರಿಗಳೊಂದಿಗೆ, ದೇವಿಗೆ ಹುಡಿ ತುಂಬಿ ಹರಕೆ ತೀರಿಸಿದರು. ಶ್ರೀಮಾರಿಕಾಂಬೆಯ ಉತ್ಸವದಲ್ಲಿ ಡೊಳ್ಳು ವಾದ್ಯಗಳ ನಾದಕ್ಕೆ, ಯುವಕರು ಮಕ್ಕಳು ಕುಣಿದು ಕುಪ್ಪಳಿಸಿ ಸಂಭ್ರಮಿಸಿದರು. ಶಾಸಕರಾದ ಡಾ”ಎನ್.ಟಿ.ಶ್ರೀನಿವಾಸ್ ರವರು, ಶ್ರೀಮಾರಿಕಾಂಬೆ ದೇವಿಯ ದರ್ಶನ ಪಡೆದು ನಾಡಿನ ಸಮಸ್ತ ಜನತೆಗೆ ಒಳಿತಾಗಲಿ, ಹಾಗೂ ಗ್ರಾqಮದ ಏಳ್ಗೆಗಾಗಿ ಕೃಪೆ ತೋರೆಂದು. ದೇವಿಯಲ್ಲಿ ಪ್ರಾರ್ಥಿಸಿ ವಿಷೇಶ ಪೂಜೆ ನೆರವೇರಿಸುವ ಮೂಲಕ, ಶಾಸಕರು ಶ್ರೀಮಾರಿಕಾಂಬೆ ದೇವಿಯ ಕೃಪೆಗೆ ಪಾತ್ರರಾದರು.

ಕುರಿಹಟ್ಟಿ ಗ್ರಾಮಸ್ಥರು ಸೇರಿದಂತೆ, ನೆರೆ ಹೊರೆ ಗ್ರಾಮಗಳ ಅಸಂಖ್ಯಾತ ಭಕ್ತರು ಮಾರಿಕಾಂಬೆಯ ದರ್ಶನ ಪಡೆದು ಜಾತ್ರಯಲ್ಲಿ ಸಂಭ್ರಮದಿAದ ಪಾಲ್ಗೊಂಡರು. ಕುರಿಹಟ್ಟಿ ಗ್ರಾಮದ ಸ್ಥಳೀಯ ಮುಖಂಡರಾದ ಜನನಾಯಕ ಜಿ. ಓಬಣ್ಣ, ಕೆ.ಬಿ.ಉಮೇಶ್, ಎಮ್. ಬೋಸಯ್ಯ ಗೌಡ್ರು ಗಂಗಪ್ಪ, ನರಸಿಂಹಗಿರಿ ಎಸ್, ವೆಂಕಟೇಶ್, ಗುಡೆಕೋಟೆ ಗುರುಲಿಂಗಣ್ಣ, ಎಂ.ಬಿ. ಮಾರಣ್ಣ, ರಂಗಪ್ಪ, ಹಾಗೂ ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.