ವಿಜಯನಗರ || ಅದ್ಧೂರಿಯಾಗಿ ಜರುಗಿದ ಶ್ರೀಕೊತ್ತಲಾಂಜನೇಯ ರಥೋತ್ಸವ

ಅದ್ಧೂರಿಯಾಗಿ ಜರುಗಿದ ಶ್ರೀಕೊತ್ತಲಾಂಜನೇಯ ರಥೋತ್ಸವ

ವಿಜಯನಗರ: ವಿಜಯನಗರ ಜಿಲ್ಲೆ ಕೂಡ್ಲಿಗಿ ಪಟ್ಟಣದ ಆರಾಧ್ಯ ದೈವ ಶ್ರೀಕೊತ್ತಲಾಂಜನೇಯ ಸ್ವಾಮಿ ರಥೋತ್ಸವ, ರಾಮ ನವಮಿಯಾದ ಬಹು ವಿಜೃಂಭಣೆಯಿಂದ ಜರುಗಿತು. ಕಳೆದ ಮೂರು ದಿನಗಳಿಂದಲೂ ರಥೋತ್ಸವ ನಿಮಿತ್ತ ಜರುಗುವ, ಪೂರ್ವ ಧಾರ್ಮಿಕ ಪೂಜಾ ಕೈಂ ಕರ್ಯಗಳು ಸಾಂಗವಾಗಿಯೇ ಜರುಗಿದವು. ಇಂದು ಮುಂಜಾನೆಯಿಂದಲೇ ಪಟ್ಟಣದಾಧ್ಯಂತ, ಮನೆ ಮನೆಗಳಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ದೇವಸ್ಥಾನಕ್ಕೆ ಹೊಂದಿಕೊಂಡಿರುವ ಪ್ರಮುಖ ರಸ್ತೆಯ ಇಕ್ಕೆಲಗಳಲ್ಲಿ, ಮಕ್ಕಳ ಆಟಿಕೆಗಳ ಮಾರಾಟದ ಅಂಗಡಿಗಳಿದ್ದು. ಜಾತ್ರೆಯ ಸೊಬಗು ಸಂಭ್ರಮದ ವಾತಾವರಣ ಸೃಷ್ಟಿಯಾಗಿತ್ತು, ಹಾಗೂ ದೇವರ ದರ್ಶನಕ್ಕಾಗಿ ಆಗಮಿಸುವ ಭಕ್ತರ ದಂಡು ಸಂಚರಿಸುವುದರಿಂದಾಗಿ, ರಥೋತ್ಸವಕ್ಕೆ ಮತ್ತಷ್ಟು ಮರೆಗು ನೀಡಿತ್ತು.  ಇದಕ್ಕೂ ಮುನ್ನ ದಿನಗಳಲ್ಲಿ  ಬಸವ ಉಚ್ಚಯ್ಯ ಉತ್ಸವ, ಹಾಗೂ ಪಲ್ಲಕ್ಕಿ ಉತ್ಸವ ಜರುಗಿತು. ನಂತರದ ದಿನ ರಥೋತ್ಸವದಂದು ಬೆಳಿಗ್ಗೆ, ಸ್ಥಳೀಯ ವೈದಿಕ ಬ್ರಾಹ್ಮಣ ಸಮುದಾಯದವರಿಂದ. ರಥೋತ್ಸವ ಪ್ರಯುಕ್ತ ಯಾಗ ಯಜ್ಞಾದಿ ಪೂಜೆಗಳು ಜರುಗಿಸಿ, ದೇವಸ್ಥರ ಸಮ್ಮುಖದಲ್ಲಿ ಬ್ರಾಹ್ಮಣರ ನೇತೃತ್ವದಲ್ಲಿ ಮಡಿ ತೇರು ಎಳೆಯಲಾಯಿತು.

  ಸತತ  2ನೇ ಭಾರಿಗೆ ಪಟ ಪಡೆದ ಭಜರಂಗಿ ಭಕ್ತ ಎನ್.ಬಿ.ಸುನೀಲ ಕುಮಾರ-   ರಥೋತ್ಸವ ಪ್ರಾರಂಭದಲ್ಲಿ, ಹಿಂದಿನ ವರ್ಷದ ರಥೋತ್ಸವದಲ್ಲಿ ಪಟ ಪಡೆದಿದ್ದ. ಪಟ್ಟಣದ ವಾಲ್ಮೀಕಿ ಸಮುದಾಯದ ಯುವ ಮುಖಂಡ, ಹಾಗೂ ಗುತ್ತಿದಾರರಾದ  ಎನ್.ಬಿ.ಸುನೀಲ ಕುಮಾರವರು.  ದೇವಸ್ಥಾನಕ್ಕೆ ಪಟದ ಹಣ 8,01,101ರೂಗಳನ್ನು(ಎಂಟು ಲಕ್ಷ ಒಂದು ಸಾವಿರ ಒಂದು ನೂರ ಒಂದು ರೂಗಳು)ಸಂದಾಯ ಮಾಡಿ ಸಮರ್ಪಿಸಿದರು, ನಂತರ ಪಟ ಹರಾಜು ಪ್ರಕ್ರಿಯೆ ಜರುಗಿತು. ಪಟ್ಟಣ ಪಂಚಾಯ್ತಿ ಅಧ್ಯಕ್ಷರಾದ ಕಾವಲ್ಲಿ ಶಿವಪ್ಪನಾಯಕರವರ ನೇತೃತ್ವದಲ್ಲಿ,  ದೇವಸ್ಥಾನದ ಆಯಗಾರರು ಸಮಿತಿಯವರು. ಪಟ ಹರಾಜು ಕೂಗೋ  ಹಾಗೂ ಇತರೆ ಪ್ರಕ್ರಿಯೆಯನ್ನು ನಿರ್ವಹಿಸಿದರು.

ಈ ಬಾರಿಯೂ ಕೂಡ ಅಂದರೆ ಸತತ ಎರೆಡನೇ ಬಾರಿಗೆ, ಎನ್.ಬಿ.ಸುನೀಲ ಕುಮಾರವರು. 4,01,101ರೂ(ನಾಲ್ಕು ಲಕ್ಷ ಒಂದು ಸಾವಿರ ನೂರ ಒಂದು ರೂಗಳು) ಗಳಿಗೆ ಪಟ ಪಡೆದು ಕೊಂಡರು, ಪಟವನ್ನು ಅವರ ಮನೆ ನಿಯಮದಂತೆ ಕಳುಹಿಸಿಕೊಡಲಾಯಿತು. ಸಮ್ಮಾಳ ಡೊಳ್ಳು ಹಲಗೆ ವಾಧ್ಯ ವೃಂಧದವರು , ತಮ್ಮ ಕಲೆ ಪ್ರದರ್ಶನ ಮಾಡಿ ನೆರದವರನ್ನು ರಂಜಿಸಿದರು ಮತ್ತು ಉತ್ಸವಕ್ಕೆ ಮೆರೆಗು ತುಂಬಿದರು.   ಮಕ್ಕಳಾದಿಯಾಗಿ ಮಹಿಳೆಯರು, ಸಾವಿರಾರು ಯುವಕ ಯುವತಿಯರು. ಹಿರಿಯ ನಾಗರೀಕರು ಸೇರಿದಂತೆ ಸಾವಿರಾರು ಭಕ್ತರು ರಥೋತ್ಸವಕ್ಕೆ  ಸಾಕ್ಷಿಯಾದರು.

Leave a Reply

Your email address will not be published. Required fields are marked *