ವಿಜಯಪುರ : ಖಾಸಗಿ ಕಂಪನಿಗಳು ಸರಬರಾಜು ಮಾಡುವ ಗುಣಮಟ್ಟವಿಲ್ಲದ ಬೀಜಗಳಿಂದ ಜಿಲ್ಲೆಯ ರೈತರು ಅಪಾರ ಪ್ರಮಾಣದ ಬೆಳೆ ನಷ್ಟ ಅನುಭವಿಸುವಂತಾಗಿದೆ ಎಂದು ಬಿಜೆಪಿ ರೈತ ಮೋರ್ಚಾ ರಾಜ್ಯಾಧ್ಯಕ್ಷ ಎ.ಎಸ್.ಪಾಟೀಲ ನಡಹಳ್ಳಿ ಆರೋಪ ಮಾಡಿದ್ದಾರೆ.
15 ಸಾವಿರಕ್ಕೂ ಹೆಚ್ಚು ರೈತರು ಡಿಸಿ ಹಾಗೂ ಜಂಟಿ ನಿರ್ದೇಶಕರ ವಿರುದ್ಧ ಡಿ.10 ರಿಂದ ಲೋಕಾಯುಕ್ತಕ್ಕೆ ದೂರು ಸಲ್ಲಿಸಲಿದ್ದು, ಅಧಿಕಾರಿಗಳ ನಿರ್ಲಕ್ಷ್ಯದ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.
ಕಳಪೆ ಗುಣಮಟ್ಟದ ಬೀಜಗಳನ್ನು ವಿತರಿಸಿ ಅಪಾರ ಪ್ರಮಾಣದ ಬೆಳೆ ನಷ್ಟಕ್ಕೆ ಕಾರಣರಾದ ಖಾಸಗಿ ಬೀಜ ಕಂಪನಿಗಳ ರಕ್ಷಣೆಗಾಗಿ ನಿಂತಿರುವ ಜಿಲ್ಲಾಧಿಕಾರಿ ಹಾಗೂ ಜಂಟಿ ಕೃಷಿ ನಿರ್ದೇಶಕರ ವಿರುದ್ಧ ಕ್ರಿಮಿನಲ್ ಮೊಕದ್ದಮೆಗಳನ್ನು ದಾಖಲಿಸಬೇಕು ಎಂದು ಆಗ್ರಹಿಸಿದರು.
ವಿಜಯಪುರ ಜಿಲ್ಲಾಡಳಿತ ಸತ್ತಂತೆ ಆಗಿದೆ. ರೈತರಿಗೆ ಪರಿಹಾರ ನೀಡುವುದನ್ನು ತಪ್ಪಿಸಲು ಈ ಸರ್ಕಾರ ಬೆಳೆ ನಷ್ಟ ಸಮೀಕ್ಷೆಗೆ ವಿಳಂಬ ಮಾಡುತ್ತಿದೆ ಎಂದು ನಡಹಳ್ಳಿ ದೂರಿದರು.