ತುಮಕೂರು : ನಗರದ ಸರ್ಕಾರಿ ಪದವಿಪೂರ್ವ ಕಾಲೇಜು ಮೈದಾನದಲ್ಲಿ ದಸರಾ ಉತ್ಸವದ ಅಂಗವಾಗಿ ಗತಕಾಲದ ಅಪರೂಪದ ದೇಶ-ವಿದೇಶಗಳ ವಿಂಟೇಜ್ ಕಾರುಗಳ ಅದ್ದೂರಿ ಪ್ರದರ್ಶನ ಅಕ್ಟೋಬರ್ 11 ರಿಂದ ನಡೆಯಲಿದ್ದು, ಜಿಲ್ಲೆಯ ಜನರಿಗೆ ಇದು ಆಕರ್ಷಣೀಯವಾಗಲಿದೆ ಎಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತಿಳಿಸಿದರು.
ನಗರದ ಸರ್ಕಾರಿ ಪದವಿಪೂರ್ವ ಕಾಲೇಜು ಮೈದಾನದಲ್ಲಿಂದು ಸ್ಥಳಪರಿಶೀಲಿಸಿ ಮಾತನಾಡಿದ ಅವರು, ಮೊಟ್ಟ ಮೊದಲ ಬಾರಿಗೆ ಜಿಲ್ಲೆಯಲ್ಲಿ ವಿಂಟೇಜ್ ಕಾರುಗಳ ಪ್ರದರ್ಶನ ನಡೆಯಲಿದ್ದು, ಅಕ್ಟೋಬರ್ 12ರಂದು ವಿಂಟೇಜ್ ಕಾರುಗಳು ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಲಿವೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ದಸರಾ ಉತ್ಸವ ಆಚರಣೆಯಲ್ಲಿ ಭಾಗವಹಿಸಲಿದ್ದು, ಇದಕ್ಕಾಗಿ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲೆಯ ಖ್ಯಾತ ಕವಿಗಳು, ಅವರ ಸಾಹಿತ್ಯವನ್ನು ಇಂದಿನ ಪೀಳಿಗೆಗೆ ತಿಳಿಸುವಂತಹ ವಿಚಾರಧಾರೆಯನ್ನು ಕವಿಗೋಷ್ಠಿಯು ಒಳಗೊಂಡಿರಬೇಕು. ಇದಕ್ಕಾಗಿ ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ಡಿಡಿಪಿಓ ಅವರಿಗೆ ಸೂಚಿಸಿದರು.
ಕರ್ನಾಟಕ ವಿಂಟೇಜ್ ಅಂಡ್ ಕ್ಲಾಸಿಕ್ ಕಾರ್ ಕ್ಲಬ್ನ ಉಪಾಧ್ಯಕ್ಷರಾದ ಸುರೇಶ್ ಮಾತನಾಡಿ, ಸರ್ಕಾರವು ವಿಂಟೇಜ್ ಕಾರುಗಳಿಗೆ ವಿಶೇಷ ರಿಯಾಯತಿ ನೀಡಿದ್ದು, ಮೈಸೂರು ದಸರಾ ಆಚರಣೆಯಂತೆ ತುಮಕೂರು ಜಿಲ್ಲೆಯಲ್ಲಿ ವಿಂಟೇಜ್ ಕಾರುಗಳ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಿರುವುದು ಸಂತಸದ ವಿಷಯವಾಗಿದ್ದು, 1920-1970ರವರೆಗಿನ 50ಕ್ಕೂ ಹೆಚ್ಚು ವೈವಿಧ್ಯಮಯ ವಿಂಟೇಜ್ ಕಾರುಗಳ ಪ್ರದರ್ಶನ ನಡೆಯಲಿದ್ದು, ಜಿಲ್ಲೆಯ ಜನರ ಕಣ್ಣಿಗೆ ಹಬ್ಬವನ್ನುಂಟು ಮಾಡಲಿದೆ ಎಂದರು.
ದಸರಾ ಉತ್ಸವ ಅಂಗವಾಗಿ ನಡೆಯುವಂತಹ ಕಾರುಗಳ ಪ್ರದರ್ಶನದಲ್ಲಿ ಭಾಗವಹಿಸಲು ಆಸಕ್ತಿ ಇರುವ ವಿಂಟೇಜ್ ಕಾರುಗಳು ಹಾಗೂ ಬೈಕ್ಗಳನ್ನು ಹೊಂದಿರುವOತಹ ಸಾರ್ವಜನಿಕರು ಜಿಲ್ಲಾಧಿಕಾರಿಗಳ ಕಚೇರಿಯ ತಹಶೀಲ್ದಾರ್ ರೇಷ್ಮ(ಮೊ.ಸಂ.9739734789) ಅವರನ್ನು ಸಂಪರ್ಕಿಸುವ ಮೂಲಕ ವಿಂಟೇಜ್ ಕಾರುಗಳ ಪ್ರದರ್ಶನದಲ್ಲಿ ಭಾಗವಹಿಸಬಹುದಾಗಿದೆ.