ಹಣ, ಕೆಲಸದ ನಡುವೆ ಮನೆಯವರನ್ನು ನೋಡಿಕೊಳ್ಳುವುದು ತುಂಬಾ ಮುಖ್ಯವಾಗಿರುತ್ತದೆ. ಅದರಲ್ಲೂ ಮಕ್ಕಳು, ಪತ್ನಿ, ಹೆತ್ತವರು ಎಂದಾಗ ತುಂಬಾ ಕಾಳಜಿಯಿಂದ ನೋಡಿಕೊಳ್ಳಬೇಕು, ಆದರೆ ಕೆಲವರು ಹಣ, ಕೆಲಸದ ನಡುವೆ ಇದನ್ನು ಮರೆತು ಬಿಡುತ್ತಾರೆ. ಆದರೆ ಇಲ್ಲೊಬ್ಬರು ಗರ್ಭಿಣಿ ಪತ್ನಿಗಾಗಿ ಕೋಟಿ ಕೋಟಿ ರೂ ಸಂಬಳ ಸಿಗುವ ಕೆಲಸವನ್ನು ತ್ಯಜಿಸಿದ್ದಾರೆ.
ಮನೆ, ಮಠ, ಮಕ್ಕಳು, ಸಂಸಾರ ಎಲ್ಲವನ್ನು ಬಿಟ್ಟು ಕೆಲಸವೊಂದೇ ನನ್ನ ಜಗತ್ತು ಎನ್ನುವ ಗಂಡಸರ ಮುಂದೆ, ಈ ವ್ಯಕ್ತಿ ವಿಭಿನ್ನವಾಗಿ ಕಾಣುತ್ತಾರೆ. . ಕೆಲಸ ದಿನದ 24 ಗಂಟೆ ದುಡ್ಡು ಮಾಡುವ ಬಗ್ಗೆ ಚಿಂತೆ. ಈ ಚಿಂತೆಯ ನಡುವೆ ನಮ್ಮನ್ನು ಪ್ರೀತಿಸುವ ಕುಟುಂಬವನ್ನು ದೂರು ಮಾಡಿಕೊಳ್ಳುತ್ತಾರೆ. ಹಣದಿಂದ ಎಲ್ಲಾ ನಡೆಯುತ್ತದೆ ಎಂಬುವವರು ಈ ಸ್ಟೋರಿ ಓದಲೇಬೇಕು ನೋಡಿ. ತನ್ನ ಗರ್ಭಿಣಿ ಪತ್ನಿಯನ್ನು ನೋಡಿಕೊಳ್ಳಲು 1.2 ಕೋಟಿ ರೂ. ಸಂಬಳ ಸಿಗುವ ಕೆಲಸವನ್ನು ತ್ಯಜಿಸಿದ್ದಾರೆ. ಈ ಬಗ್ಗೆ ಸ್ವತಃ ಅವರೇ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ರೆಡ್ಡಿಟ್ನಲ್ಲಿ ಈ ಬಗ್ಗೆ ಹಂಚಿಕೊಂಡಿದ್ದು, ನನ್ನ ಗರ್ಭಿಣಿ ಪತ್ನಿಯನ್ನು ನೋಡಿಕೊಳ್ಳಲು 1 ಕೋಟಿಕ್ಕಿಂತ ಹೆಚ್ಚು ಸಂಬಳ ಬರುವ ಕೆಲಸವನ್ನು ತ್ಯಜಿಸಿದೆ. ಅದು ತುಂಬಾ ಆರಾಮ ಹಾಗೂ ಮನೆಯಿಂದಲೇ ಮಾಡುವ ಕೆಲಸ ಆಗಿತ್ತು. ಮೊದಲು ನನ್ನ ಕೆಲಸವನ್ನು ಬಿಡಲು, ಪತ್ನಿ ಒತ್ತಾಯಿಸಿದರು, ಆದರೆ ನಾನೇ ಹೋಗುವೆ ಎಂದು ಹೇಳಿದ್ದೆ. ಆದರೆ ನನ್ನ ಪತ್ನಿಯ ಜವಾಬ್ದಾರಿ ನನ್ನದು, ನಾನು ಇದನ್ನು ನಿಭಾಯಿಸಲೇಬೇಕು. ಅದಕ್ಕಾಗಿ ನನ್ನ ಸಂಪೂರ್ಣ ಸಮಯವನ್ನು ಅವಳಿಗಾಗಿ ನೀಡಿಬೇಕು. ಅದಕ್ಕಾಗಿ ಈ ಕೆಲಸ ತ್ಯಜಿಸಿದೆ. ಒಂದು ವೇಳೆ ಮತ್ತೆ ಸೇರಿಕೊಳ್ಳಬೇಕು ಎಂದರೆ, ಆ ಅವಕಾಶ ಇದೆ. ಆದರೆ, ನನ್ನ ಕಾಲೇಜು ಮುಗಿದ 7 ವರ್ಷದ ನಂತರ ಈ ಕೆಲಸ ಸಿಕ್ಕಿದೆ. ಅಲ್ಲಿಂದ ಇಲ್ಲಿಯವರೆಗೆ ಸಂಬಳ ಕೂಡ ಹೆಚ್ಚಾಗಿದೆ ಎಂದು ಹೇಳಿದ್ದಾರೆ.
For More Updates Join our WhatsApp Group :